ಆರ್.ಅಶೋಕ್‌ಗೆ ರೈತರ ಬಗ್ಗೆ ಏನು ಗೊತ್ತಿಲ್ಲ, ಸುಮ್ಮನೆ ಮಾತನಾಡ್ತಾರೆ: ಸಚಿವ ಚಲುವರಾಯಸ್ವಾಮಿ

Published : Jul 31, 2025, 05:56 PM IST
Chaluvarayaswamy

ಸಾರಾಂಶ

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರದಲ್ಲಿ ಜಟಾಪಟಿ ಶುರುವಾಗಿದ್ದು, ಬಿಜೆಪಿ‌ ವಿರುದ್ಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.31): ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರದಲ್ಲಿ ಜಟಾಪಟಿ ಶುರುವಾಗಿದ್ದು, ಬಿಜೆಪಿ‌ ವಿರುದ್ಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮಗೆ 1.36 ಲಕ್ಷ ಮೆಟ್ರಿಕ್ ಟನ್ ಕೊಟ್ಟಿಲ್ಲ. 15 ಸಾವಿರ ಮೆಟ್ರಿಕ್ ಟನ್ ಮಾತ್ರ ಬಂದಿದೆ. 2.28 ಲಕ್ಷ ಮೆಟ್ರಿಕ್ ಟನ್ ಬರಬೇಕಿತ್ತು. ಕೃಷಿ ಸಚಿವರಿಗೆ ಮನವಿ‌ ಮಾಡಿದ್ದೇವೆ. ಇವತ್ತು ಡಿಟೇಲ್ಸ್ ವಾಟ್ಸಪ್ ಮಾಡಿದ್ದೇವೆ. ನಡ್ಡಾರ ಭೇಟಿಗೂ ಅವಕಾಶ ಕೇಳಿದ್ದೇವೆ/ ಆಗಸ್ಟ್ 5 ರಂದು ರಾಹುಲ್ ಪ್ರತಿಭಟನೆ ಇದೆ. ಹಾಗಾಗಿ 6 ರಂದು ಸಮಯ ಕೇಳಿದ್ದೇವೆ ಎಂದು ಹೇಳಿದರು.

ವಿಪಕ್ಷ ನಾಯಕ ಆರ್.ಅಶೋಕ್ ಸುಮ್ಮನೆ ಮಾತನಾಡ್ತಾರೆ. ಅವರಿಗೆ ಹಿಂದಿಲ್ಲ ಮುಂದಿಲ್ಲ, ರೈತರ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರೈತರು ಎಲ್ಲಾ ಪಾರ್ಟಿಯಲ್ಲೂ ಇರ್ತಾರಾ. ನಮ್ಮ‌ ಪಾರ್ಟಿ ರೈತರಿಗೆ ಟವೆಲ್ ಹಾಕಿ ಬರ್ರಿ ಅಂದ್ರೆ ಬರ್ತಾರೆ. ಪ್ರತಿಭಟನೆ ಮಾಡೋಕೆ ಬರ್ತಾರೆ. ರೇಟ್ ಫಿಕ್ಸ್ ಮಾಡೋರು ಕೇಂದ್ರದವರು. ಪೂರೈಕೆ ಮಾಡುವವರು ಅವರು, ನಮ್ಮದು ಬರಿ ಡಿಸ್ಟ್ರಿಬ್ಯೂಷನ್ ಮಾತ್ರ. ರಾಜ್ಯದಲ್ಲಿ ಉತ್ಪಾದನೆ ಮಾಡಲು ಬರಲ್ಲ. ಎಲ್ಲವೂ ಕೇಂದ್ರ ಸರ್ಕಾರಕ್ಕೆ ಮಾತ್ರ ಮಾಡೋದು. ಸುಮ್ಮನೆ ಮಾತನಾಡಿದರೆ ಸಾಲದು ಎಂದು ಬಿಜೆಪಿ ನಾಯಕರ‌ ವಿರುದ್ಧ ಆಕ್ರೋಶ ಹೊರಹಾಕಿದರು.

ಸಂಸದ ಸುಧಾಕರ್ ಆರೋಪ ವಿಚಾರವಾಗಿ, ಸುಧಾಕರ್‌ಗೆ ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು. ಡಾಕ್ಟರ್ ಆದವರು ಇಂಜೆಕ್ಷನ್ ಕೊಡೋಕಷ್ಟೇ ಗೊತ್ತು. ಕೋವಿಡ್ ವೇಳೆ ಎಷ್ಟು ನಿಭಾಯಿಸಿದ್ರು ಗೊತ್ತಲ್ಲ. ಅವರು ಡಾಕ್ಟರ್ ಓದಿದ್ದಾರೋ ಇಲ್ವೋ ಗೊತ್ತಿಲ್ಲ. ಅವರು ಕೇಂದ್ರದಲ್ಲಿ ಸಂಸದರಾಗಿರುವವರು. ನಿನ್ನೆ ಎಲ್ಲಾ ಡಿಟೇಲ್ಸ್ ಕೊಟ್ಟಿದ್ದೇನೆ. ಸಣ್ಣ ಹಿಡುವಳಿದಾರರು ಇರ್ತಾರೆ. ದೊಡ್ಡ ಹಿಡುವಳಿದಾರರು ಇರ್ತಾರೆ. ಶ್ರೀಲಂಕಾ ಕಂಟ್ರೋಲ್ ಮಾಡೋರು ಯಾರು? ಎಲ್ಲವೂ ಕೇಂದ್ರ ಸರ್ಕಾರವೇ ತಾನೇ? ರಾಜಕೀಯವಾಗಿ ತೀಟೆ ಮಾಡೋರನ್ನ ಹೇಗೆ ಹೇಳೋದು ಎಂದು ಚಲುವರಾಯಸ್ವಾಮಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ