ಪಕ್ಷದ ಒಳಿತಿಗಾಗಿ ವೈಯಕ್ತಿಕ ದ್ವೇಷ ಬದಿಗಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ತಳಮಟ್ಟದಿಂದ ಪಕ್ಷವನ್ನು ಬಲಬಡಿಸಬೇಕು. ಆಗ ಮಾತ್ರ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಹೊಳೆಹೊನ್ನೂರು (ಮಾ.23): ಪಕ್ಷದ ಒಳಿತಿಗಾಗಿ ವೈಯಕ್ತಿಕ ದ್ವೇಷ ಬದಿಗಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ತಳಮಟ್ಟದಿಂದ ಪಕ್ಷವನ್ನು ಬಲಬಡಿಸಬೇಕು. ಆಗ ಮಾತ್ರ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಅವರು ಪಟ್ಟಣದ ಭಗೀರಥ ಸಮುದಾಯ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮುಂಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲು ಕೆಪಿಸಿಸಿ ಅಧ್ಯಕ್ಷರು ಆದೇಶ ನೀಡಿದ್ದಾರೆ.
ಅದರಂತೆ ಗ್ರಾಮ ಮಟ್ಟದಿಂದ ಪಕ್ಷ ಸಂಘಟಿಸುವುದು ನಮ್ಮನಿಮ್ಮ ಜವಾಬ್ದಾರಿ. ಪಕ್ಷದ ಏಳಿಗೆಗೆ ದುಡಿದ ನಿಷ್ಠವಂತ ಕಾರ್ಯಕರ್ತರಿಗೆ ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅವಕಾಶ ದೊರೆಯಬೇಕು. ಆಕಾಂಕ್ಷಿಗಳು ತುಂಬಾ ಜನರಿದ್ದಾರೆ. ಪಕ್ಷ ಯಾರಿಗೆ ಅವಕಾಶ ನೀಡುವುದೋ ಅಂತವರನ್ನು ಗೆಲ್ಲಿಕೊಂಡು ಬರುವ ಹೊಣೆ ನಮ್ಮದಾಗಿರುತ್ತದೆ ಎಂದರು. ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಸರಿ ಪಡಿಸಲಾಗುವುದು. ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಲಾಗುವುದು. ಶಿಕ್ಷಣ ಇಲಾಖೆ ಸದೃಢವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
ಈ ಬಾರಿಯ ರಾಜ್ಯ ಬಜೆಟ್ ಉತ್ತಮವಾಗಿದೆ. ವಿರೋಧ ಪಕ್ಷದವರು ಹೆಮ್ಮೆ ಪಡುವ ರೀತಿ ಶಿಕ್ಷಣ ಇಲಾಖೆಯನ್ನು ಸಜ್ಜು ಗೊಳಿಸಲಾಗಿದೆ. ಬಡವರ ಮನೆಯನ್ನು ಆರ್ಥಿಕವಾಗಿ ಸದೃಢವಾಗಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬಿಸಲು ಬಿಡುವುದಿಲ್ಲ. ಬಂಗಾರಪ್ಪ ನೀಡಿದ ಉಚಿತ ವಿದ್ಯುತ್ ಯೋಜನೆ ಹೆಸರಿನಲ್ಲಿ ಬಿಜೆಪಿ ಬೆಳೆ ಬೇಯಿಸಿಕೊಂಡಿದೆ. ಬಡವರ ಮನೆಯನ್ನು ಬೆಳಕಾಗಿಸುವುದು ನಮ್ಮ ಸರ್ಕಾರದ ಸಾಧನೆ. ಕಮಿಷನ್ ಸಿಗುತ್ತಿಲ್ಲ ಎಂದು ಬಿಜೆಪಿಯವರಿಗೆ ಹೊಟ್ಟೆ ಕಿಚ್ಚಾಗುತ್ತಿದೆ. ಅರಣ್ಯ ಇಲಾಖೆಗೆ ರೈತಗೆ ಸಮಸ್ಯೆ ಮಾಡದಂತೆ ತಿಳಿಹೇಳಲಾಗಿದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಪಕ್ಷದ ಸಾಮಾನ್ಯ ಕಾರ್ಯಕತರು ನಾಯಕರಾಗಬೇಕು. ಕಾರ್ಯಕರ್ತರು ಬಲವಾಗಿದ್ದರೆ ಪಕ್ಷ ಸದೃಢವಾಗಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗೂ ಅನೂಕುಲವಾಗುವ ರೀತಿ ಬಜೆಟ್ ನೀಡಿ ಪಕ್ಷ ಬಡವರ ಪರವಿದೆ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದರು. ಕಾರ್ಯಕರ್ತರು ಸಂಘಟನಾತ್ಮಕವಾಗಿ ಒಗ್ಗೂಡಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬರೂ ಸೇನಾಧಿಪತಿಗಳಂತೆ ಯುದ್ಧ ಗೆಲ್ಲಬೇಕು. ನಮ್ಮನೆ ನಾವು ನಾಯಕರೆಂದು ಮನೆಯಲ್ಲಿ ಕುಳಿತುಕೊಳ್ಳದೆ ಗಟ್ಟಿಯಾಗಿ ನಿಂತು ಚುನಾವಣೆ ಎದುರಿಸಬೇಕು. ನಾಯಕರ ಹಿಂದೆ ಓಡಾಡಿದ ಮಾತ್ರಕ್ಕೆ ಹಿಂಬಾಲಕರೆಲ್ಲಾ ನಾಯಕರಗುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬಹುಮತ ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಬೇಕು. ಪ್ರತಿಯೊಂದು ಜಿಪಂನಲ್ಲೂ ಪಕ್ಷ ಬಲವರ್ಧನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆಯನ್ನು ಪ್ರತಿಯೊಂದು ಹಳ್ಳಿಯಲ್ಲೂ ಅದ್ಧೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಗ್ಯಾರಂಟಿಗಳ ಅನುಷ್ಠಾನಗಳು ಯಶಸ್ವಿಯಾಗಿದೆ ಎಂದರು.
ಸರ್ಕಾರಗಳಿಂದ ರೈತ ವಿರೋಧಿ ಕಾನೂನು ಜಾರಿ: ನಟ ಚೇತನ್ ಅಹಿಂಸಾ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮಾತನಾಡಿದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಮಾಜಿ ಜಿಪಂ ಅದ್ಯಕ್ಷೆ ರೇಖಾ, ಮಾಜಿ ಗ್ರಾಪಂ ಅಧ್ಯಕ್ಷ ಆರ್.ಉಮೇಶ್, ರಾಮ್ಕೊ ನಿರ್ದೇಶಕ ಹಾಲೇಶಪ್ಪ, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ಎಚ್.ಎನ್.ನಾಗರಾಜ್, ರವಿಕುಮಾರ್, ವೇದಾ ವಿಜಯಕುಮಾರ್, ಕೆ.ಆರ್.ಶ್ರೀಧರ್, ಚಂದ್ರಭೂಪಾಲ್, ಪರಮೇಶ್ವರಪ್ಪ ಮೂಡ್ಲೆರ್, ನೀತಿನರಾವ್, ಬಿ.ಟಿ.ಹನುಮಂತಪ್ಪ, ಕಲಗೊಡು ರತ್ನಾಕರ್, ಮಲ್ಲೇಶ್ ರಾವ್ (ಕಗ್ಗಿ), ಸಂಗನಾಥ್, ಆರ್.ಶಿವಣ್ಣ, ಸೀತಾರಂ, ವಿಜಯಲಕ್ಷ್ಮಿ ಪಾಟೀಲ್, ಯಲ್ಲೋಜಿರಾವ್, ಎಂ.ಜಿ.ಗುರುಮೂರ್ತಿ, ಡಿ.ವಿ.ಸುರೇಶ್, ರುದ್ರೇಶ್ ಇತರರಿದ್ದರು.