ಡಿಕೆ ಸಹೋದರರ ಗುಣಗಾನ ಮಾಡಿದ ಸಚಿವ ಸುಧಾಕರ್‌

Published : Feb 13, 2023, 05:00 AM IST
ಡಿಕೆ ಸಹೋದರರ ಗುಣಗಾನ ಮಾಡಿದ ಸಚಿವ ಸುಧಾಕರ್‌

ಸಾರಾಂಶ

ಕನ​ಕ​ಪುರ ಕ್ಷೇತ್ರಕ್ಕೆ ಮೂರು ಕಣ್ಣು​ಗ​ಳಿವೆ ಅಂತ ಕೆಲ​ವರು ಹೇಳು​ತ್ತಾರೆ. ಅದು ಯಾವುದು ಅಂದರೆ ಡಿ.ಕೆ.​ಶಿ​ವ​ಕು​ಮಾರ್‌, ಡಿ.ಕೆ.​ಸು​ರೇಶ್‌ ಹಾಗೂ ಎಸ್‌.ರವಿ. ಇವ​ರೆ​ಲ್ಲರು ಯಾವಾಗ ನಿದ್ದೆ ಮಾಡು​ತ್ತಾರೊ ಗೊತ್ತಿಲ್ಲ. 

ಕನ​ಕ​ಪುರ (ಫೆ.13): ಕನ​ಕ​ಪುರ ಕ್ಷೇತ್ರಕ್ಕೆ ಮೂರು ಕಣ್ಣು​ಗ​ಳಿವೆ ಅಂತ ಕೆಲ​ವರು ಹೇಳು​ತ್ತಾರೆ. ಅದು ಯಾವುದು ಅಂದರೆ ಡಿ.ಕೆ.​ಶಿ​ವ​ಕು​ಮಾರ್‌, ಡಿ.ಕೆ.​ಸು​ರೇಶ್‌ ಹಾಗೂ ಎಸ್‌.ರವಿ. ಇವ​ರೆ​ಲ್ಲರು ಯಾವಾಗ ನಿದ್ದೆ ಮಾಡು​ತ್ತಾರೊ ಗೊತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೆ ಕೆಲಸ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್‌ ಗುಣಗಾನ ಮಾಡಿದರು. ನಗ​ರ​ದಲ್ಲಿ ಇಸ್ಫೋಸಿಸ್‌ ಸಂಸ್ಥೆ ವತಿಯಿಂದ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತ​ನಾ​ಡಿದ ಅವರು, ಡಿ.ಕೆ.​ಶಿ​ವ​ಕು​ಮಾರ್‌ ಏಕೆ ಗೆಲ್ಲು​ತ್ತಾರೆ ಎಂಬು​ದನ್ನು ನಾನು ಸೂಕ್ಷ್ಮ​ವಾಗಿ ಗಮ​ನಿ​ಸು​ತ್ತಿ​ದ್ದೇನೆ. 

ಮೊದಲು ಕಡಿಮೆ ಮಾರ್ಜಿನ್‌ನಲ್ಲಿ ಗೆಲ್ಲು​ತ್ತಿ​ದ್ದರು. ಈಗದು 75 ಸಾವಿರ ಲೀಡ್‌ಗೆ ಹೋಗಿದೆ. ಡಿಕೆಶಿ ನರೇ​ಗಾ​ದಲ್ಲಿ ಕ್ರಾಂತಿ​ಯನ್ನೇ ಮಾಡಿ​ದ್ದಾರೆ. ಕೊರೋನಾ ಸಂಕ​ಷ್ಟ​ದಲ್ಲಿ ಜನರಿಗೆ ಬೆನ್ನಾಗಿ ನಿಂತರು. ಯಾರೇ ಆಗಲಿ ಒಳ್ಳೆ ಕೆಲ​ಸ ಮಾಡಿ​ದಾಗ ಹೊಗ​ಳ​ಬೇಕು. ಆಡ​ಳಿತ ಮತ್ತು ವಿರೋಧ ಪಕ್ಷ​ಗಳು ಇದೇ ರೀತಿ ಇರ​ಬೇಕು. ಆಗ ಮಾತ್ರ ಆರೋ​ಗ್ಯ​ಕರ ಪ್ರಜಾ​ಪ್ರ​ಭುತ್ವ ಇರು​ತ್ತದೆ ಎಂದು ಹೇಳಿ​ದ​ರು. ಬಳಿಕ, ಮಾತನಾಡಿದ ಡಿಕೆಶಿ, ನಾನು ಕನಕಪುರದಲ್ಲಿ ಯಾವುದಾದರೂ ಸಚಿ​ವರ ಜೊತೆ ವೇದಿಕೆ ಹಂಚಿಕೊಂಡಿದ್ದರೆ ಅದು ಯಡಿಯೂರಪ್ಪ, ಸುಧಾಕರ್‌ ಅವರ ಜೊತೆ ಮಾತ್ರ. ಕುಮಾರಸ್ವಾಮಿ ಅವರ ಜತೆ ವೇದಿಕೆ ಹಂಚಿಕೊಳ್ಳುವಾಗ ಐತಿಹಾಸಿಕ ಸಮರ ನಡೆದಿತ್ತು. ನಾನು ಸುಧಾಕರ್‌ ಜತೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ನಿಮ್ಮ ಮೇಲೆ ನನಗೆ ಗೌರವ ಇದೆ ಎಂದರ್ಥ ಎಂದರು.

ಸಚಿವ ಸುಧಾಕರ್‌ ಮೆಡಿಕಲ್‌ ಕಾಲೇಜು ಕಿತ್ಕೊಂಡರು: ಸಂಸದ ಡಿ.ಕೆ.ಸುರೇಶ್

ರಾಜ್ಯ​ ರಾ​ಜ​ಕಾ​ರ​ಣಕ್ಕೆ ಬರಲು ಆಸಕ್ತಿ ಇಲ್ಲ: ನಾಲ್ಕೈದು ಕ್ಷೇತ್ರ​ಗ​ಳಲ್ಲಿ ಸ್ಪರ್ಧಿಸಲು ನನಗೆ ಆಹ್ವಾನವಿದೆ. ಆದರೆ, ನನಗೆ ರಾಜ್ಯ ರಾಜ​ಕಾ​ರ​ಣಕ್ಕೆ ಬರುವ ಆಸಕ್ತಿ ಇಲ್ಲ ಎಂದು ಸಂಸದ ಡಿ.ಕೆ.​ಸು​ರೇಶ್‌ ತಿಳಿಸಿದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ನಾನು ಸದ್ಯಕ್ಕೆ ಲೋಕಸಭಾ ಸದಸ್ಯನಾಗಿ​ದ್ದೇನೆ. ಹಾಗಾಗಿ, ನನ್ನ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷ ಸಂಘ​ಟ​ನೆ​ಗಾಗಿ ಪ್ರವಾಸ ಮಾಡುತ್ತಿದ್ದೇನೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇರುವು​ದ​ರಿಂದ ಅದನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ನಾಲ್ಕೈದು ವಿಧಾ​ನ​ಸಭಾ ಕ್ಷೇತ್ರ​ಗ​ಳಲ್ಲಿ ಸ್ಪರ್ಧಿಸಲು ನನಗೆ ಆಹ್ವಾನವಿದೆ. ಆದರೆ, ರಾಜ್ಯ​ ರಾ​ಜ​ಕಾ​ರ​ಣಕ್ಕೆ ಬರಲು ಆಸಕ್ತಿ ಇಲ್ಲ ಎಂದರು. ಹೈಕಮಾಂಡ್‌ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕ​ಮಾಂಡ್‌ ಬಳಿಯೇ ಕೇಳ​ಬೇಕು ಎಂದು ಪ್ರಶ್ನೆ​ಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಚುನಾ​ವಣೆಯಲ್ಲಿ ಸ್ಪರ್ಧೆಸಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್‌

ಬಿಜೆಪಿ ಅಧಿ​ಕಾ​ರ​ಕ್ಕಾಗಿ ಏನು ಬೇಕಾ​ದರು ಮಾಡುವ ಪಕ್ಷ​: ಬಿಜೆ​ಪಿಗೆ ಮುಂದೆ ಒಂದು ರೀತಿಯ ಮುಖ, ಹಿಂದೆ ಮತ್ತೊಂದು ರೀತಿಯ ಮುಖ ಇದೆ. ಸುಳ್ಳು ಹೇಳಿ ಸತ್ಯ ಮರೆ ಮಾಚುತ್ತಿರುವ ಅವರು ಅಧಿ​ಕಾ​ರ​ಕ್ಕಾಗಿ ಏನು ಬೇಕಾ​ದರೂ ಮಾಡು​ತ್ತಾರೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕರಿಂದ ಹಿಡಿದು ಕೆಳಗಿನ ನಾಯಕರವೆರಿಗೂ ಸುಳ್ಳೇ ಮನೆ ದೇವರು. ರಾಜ್ಯದಲ್ಲಿಯೂ ಜನರ ದಾರಿತಪ್ಪಿಸುವ ಕೆಲವನ್ನು ಮಾಡು​ತ್ತಿದೆ. ಭ್ರಷ್ಟಾ​ಚಾರ, ಶೇಕಡ 40 ಕಮಿ​ಷನ್‌, ನೇಮ​ಕಾತಿ ಹಗ​ರಣ, ಕೋಮುವಾದ ಸೃಷ್ಟಿಮಾಡುವ ಕೆಲಸಕ್ಕೆ ಮುಂದಾ​ಗಿ​ರುವ ಬಿಜೆಪಿ, ಇದೀಗ ಮತದಾರರ ಪಟ್ಟುಗೆ ಕನ್ನಹಾಕಿದ್ದಾರೆ. ಅಂತಿಮವಾಗಿ ರೌಡಿಗಳನ್ನು ಇಟ್ಟುಕೊಂಡು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಬಹುಶಃ ಬಿಜೆಪಿಯಲ್ಲಿ ರೌಡಿಗಳಿಗೆ ಭವಿಷ್ಯ ಇರಬಹುದು. ಅವರು ಅಧಿ​ಕಾ​ರ​ದಲ್ಲಿ ಇರು​ವ​ವರು ರೌಡಿಗಳಿಗೆ ಆಶ್ರಯ ಕೊಡುತ್ತಾರಾ ಕೊಡಲಿ. ಅವರ ಇತಿಹಾಸ, ನಡವಳಿಕೆ ಎಲ್ಲರಿಗೂ ಗೊತ್ತಿದೆ ಎಂದು ಸುರೇಶ್‌ ವಾಗ್ದಾಳಿ ನಡೆ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ