ಮತಾಂತರ ಕಾಯ್ದೆ ರದ್ದು: ರಾಜ್ಯ ಸರ್ಕಾರದ ವಿರುದ್ಧ ಸಂಸದ ಕರಡಿ ಸಂಗಣ್ಣ ವಾಗ್ದಾಳಿ

By Kannadaprabha News  |  First Published Jun 17, 2023, 3:14 PM IST

) ವಿದ್ಯುತ್‌ ಬಿಲ್‌ ಏರಿಕೆ, ಮತಾಂತರ ಕಾಯ್ದೆ ತಿದ್ದುಪಡಿ ರದ್ದು ಪಡಿಸಿರುವುದು ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ನೀತಿಯನ್ನು ವಿರೋಧಿಸಿ ಬಿಜೆಪಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.


ಕೊಪ್ಪಳ (ಜೂ.17) ವಿದ್ಯುತ್‌ ಬಿಲ್‌ ಏರಿಕೆ, ಮತಾಂತರ ಕಾಯ್ದೆ ತಿದ್ದುಪಡಿ ರದ್ದು ಪಡಿಸಿರುವುದು ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ನೀತಿಯನ್ನು ವಿರೋಧಿಸಿ ಬಿಜೆಪಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಂಸದ ಸಂಗಣ್ಣ ಕರಡಿ(Sanganna karadi) ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು.

Tap to resize

Latest Videos

undefined

ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದ್ದಲ್ಲದೇ ಅವುಗಳಿಗೆ ಷರತ್ತು ವಿಧಿಸುವ ಮೂಲಕ ಮೋಸ ಮಾಡುತ್ತಿದೆ. ಅಧಿಕಾರಕ್ಕೆ ಬಂದು ಜನರ ಮೇಲೆ ಒಂದಿಲ್ಲೊಂದು ಹೊರೆ ಹಾಕಲಾಗುತ್ತದೆ. ಇದನ್ನು ಸಹಿಸಲಸಾಧ್ಯ. ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ನಾಯಕರು ಕಿಡಿಕಾರಿದ್ದಾರೆ.

ಮತಾಂತರ ನಿಷೇಧ ಕಾಯಿದೆ ವಾಪಾಸ್‌ ನಿರ್ಧಾರ ಸರಿಯಲ್ಲ: ಕೆಎಸ್‌ ಈಶ್ವರಪ್ಪ ಆಕ್ರೋಶ

ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ದಿಢೀರನೇ ರದ್ದು ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿಯುಂಟಾಗುತ್ತದೆ. ಒತ್ತಾಯದಿಂದ ನಡೆಯುತ್ತಿದ್ದ ಆಮಿಷಗಳನ್ನು ರದ್ದು ಮಾಡಬೇಕು. ಆಮಿಷಗಳ ಮೂಲಕ ನಡೆಯುತ್ತಿದ್ದ ಮತಾಂತರಗಳಿಗೂ ಕಡಿವಾಣ ಹಾಕಬೇಕು ಎನ್ನುವ ಕಾರಣಕ್ಕಾಗಿ ತಿದ್ದುಪಡಿ ಮಾಡಲಾಗಿದ್ದ ಮತಾಂತರ ಕಾಯ್ದೆಯನ್ನು ಈಗ ಏಕಾಏಕಿ ತೆಗೆದು ಹಾಕಿದ್ದು, ರಾಜ್ಯದ ಜನರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ದೂರಿದ್ದಾರೆ.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಇಂಥ ಜನವಿರೋಧಿ ಆಡಳಿತ ನಡೆಸಲು ಜನರು ಕಾಂಗ್ರೆಸ್ಸಿಗೆ ಅಧಿಕಾರ ನೀಡಿಲ್ಲ. ರಾಜ್ಯದಲ್ಲಿ ಅಶಾಂತಿ ಕದಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ತಾನೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ದಿಢೀರನೇ ವಿದ್ಯುತ್‌ ಬಿಲ್‌ ಏರಿಕೆ ಮಾಡಿದೆ. ಕೇಳಿದರೆ ಅದನ್ನು ಹಿಂದಿನ ಸರ್ಕಾರ ಮಾಡಿದೆ ಎಂದು ಹೇಳುತ್ತಾರೆ. ಆದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ‘ನಾನು ಮಾಡಿಯೇ ಇಲ್ಲ. ಪ್ರಸ್ತಾವನೆ ಬಂದಿದ್ದನ್ನು ತಿರಸ್ಕರಿಸಿದ್ದೇನೆ. ಅದು ಏನೇ ಆಗಲಿ, ಈಗ ಆಡಳಿತದಲ್ಲಿ ಬಂದವರು ತಡೆಹಿಡಿಯಬೇಕಾಗಿತ್ತು. ಅದನ್ನು ಯಾಕೆ ತಡೆ ಹಿಡಿಯಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ವಿರುದ್ಧ ಘೋಷಣೆ:

ಬಸವೇಶ್ವರ ವೃತ್ತದಲ್ಲಿ ಸೇರಿದ ಬಿಜೆಪಿ ನಾಯಕರು, ಪದಾಧಿಕಾರಿಗಳು ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿದ್ಯುತ್‌ ಬಿಲ್‌ ಏರಿಕೆ ಹಿಂಪಡೆಯಬೇಕು, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಮಾಡಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.

 

ಪ್ರಧಾನಿ ವಯಸ್ಸಿನಷ್ಟೇ ನಾವೂ ಇದ್ದೇವೆ; ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್‌ ಪರೋಕ್ಷ ಬೇಡಿಕೆ ಇಟ್ಟ ಕರಡಿ ಸಂಗಣ್ಣ!

ಪ್ರತಿಭಟನೆಯಲ್ಲಿ ಚಂದ್ರಶೇಖರ ಕವಲೂರು, ನವೀನ ಗುಳಗಣ್ಣವರ, ಮಹಾಲಕ್ಷ್ಮಿ ಕಂದಾರಿ, ಮಂಜುಳಾ ಕರಡಿ, ಡಿ.ಮಲ್ಲಣ್ಣ ಮಧುರಾ ಕರಣಂ ಸೇರಿದಂತೆ ಮೊದಲಾದವರು ಇದ್ದರು.

click me!