ಈಗಾಗಲೇ ದೆಹಲಿಯ ಲೋಧಿ ರೋಡ್‌ನ ಮನೆ ಖಾಲಿ ಮಾಡಿ ಗುರುಗ್ರಾಮದ ಸ್ವಂತ ಮನೆಗೆ ರಾಬರ್ಟ್ ಮತ್ತು ಇಬ್ಬರು ಮಕ್ಕಳೊಂದಿಗೆ ಹೋಗಿರುವ ಪ್ರಿಯಾಂಕಾಗೋಸ್ಕರ ಲಖನೌನಲ್ಲಿ ಇನ್ನೊಂದು ಮನೆ ಸಿದ್ಧವಾಗುತ್ತಿದೆ.
ಲಕ್ನೋ (ಆ. 14): ಈಗಾಗಲೇ ದೆಹಲಿಯ ಲೋಧಿ ರೋಡ್‌ನ ಮನೆ ಖಾಲಿ ಮಾಡಿ ಗುರುಗ್ರಾಮದ ಸ್ವಂತ ಮನೆಗೆ ರಾಬರ್ಟ್ ಮತ್ತು ಇಬ್ಬರು ಮಕ್ಕಳೊಂದಿಗೆ ಹೋಗಿರುವ ಪ್ರಿಯಾಂಕಾಗೋಸ್ಕರ ಲಖನೌನಲ್ಲಿ ಇನ್ನೊಂದು ಮನೆ ಸಿದ್ಧವಾಗುತ್ತಿದೆ. ಪಂಡಿತ್ ನೆಹರೂರ ಮಿತ್ರನಾಗಿದ್ದ ಕೃಷ್ಣ ಕೌಲ್ ಮನೆ ಪ್ರಿಯಾಂಕಾ ವಾಸ್ತವ್ಯಕ್ಕೆ ರೆಡಿ ಆಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. 2022ರಲ್ಲಿ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಕಾಂಗ್ರೆಸ್ ನಾಯಕತ್ವ ವಹಿಸಲಿದ್ದಾರೆ. ಪ್ರಿಯಾಂಕಾ ಬ್ರಾಹ್ಮಣರ ಮತಗಳ ಮೇಲೆ ಕಣ್ಣು ಇಟ್ಟಿರುವಾಗ, ಏಕಾಏಕಿ ಮಾಯಾವತಿ ಕೂಡ ದಲಿತರು, ಬ್ರಾಹ್ಮಣರ ರಾಜಕೀಯ ಮೈತ್ರಿ ಬಗ್ಗೆ ಮಾತನಾಡತೊಡಗಿದ್ದಾರೆ.
ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಮೌನ ಮುರಿದು ಅಖಾಡಕ್ಕಿಳಿದ ವಸುಂಧರಾ ರಾಜೆ
ಮನೋಜ್ ಸಿನ್ಹಾ ಅದೃಷ್ಟ
ಅಧಿಕಾರ ಕಳೆದುಕೊಂಡ ಒಂದು ವರ್ಷದ ನಂತರ ಮನೋಜ್ ಸಿನ್ಹಾಗೆ ಪುನರಪಿ ಅಧಿಕಾರ ಸಿಕ್ಕಿದೆ. ಅವರನ್ನು ಕಾಶ್ಮೀರದ ರಾಜ್ಯಪಾಲರಾಗಿ ಕಳುಹಿಸಲಾಗಿದೆ. 2017ರಲ್ಲೇ ಯೋಗಿ ಆದಿತ್ಯನಾಥ್ ಅವರಿಗಿಂತ ಮೊದಲು ಮನೋಜ್ ಸಿನ್ಹಾ ಹೆಸರನ್ನು ಮೋದಿ, ಶಾ ಒಪ್ಪಿಕೊಂಡಿದ್ದರು. ಆದರೆ ಸಂಘ ಬೇಡ ಎಂದಿದ್ದರಿಂದ ಯೋಗಿ ಮುಖ್ಯಮಂತ್ರಿ ಆದರು. 2019ರಲ್ಲಿ ಮನೋಜ್ ಸಿನ್ಹಾ ಗಾಜಿಪುರದಿಂದ ಸೋತರು. ಹೀಗಾಗಿ ಬೇಸರದಲ್ಲಿದ್ದರು. ಆದರೆ ಅಮಿತ್ ಶಾ ಉತ್ತರಪ್ರದೇಶದ ಭೂಮಿಹಾರರ ನಾಯಕನಿಗೆ ಭರ್ಜರಿ ಪುನರ್‌ವಸತಿ ಕಲ್ಪಿಸಿಕೊಟ್ಟಿದ್ದಾರೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ