ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಮಹತ್ವದ ಹೆಜ್ಜೆ ಇಟ್ಟ ಬಿಜೆಪಿ: ನಡ್ಡಾ ಚಾಲನೆ

Published : Aug 14, 2020, 06:06 PM IST
ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಮಹತ್ವದ ಹೆಜ್ಜೆ ಇಟ್ಟ ಬಿಜೆಪಿ: ನಡ್ಡಾ ಚಾಲನೆ

ಸಾರಾಂಶ

ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಈಗಿನಿಂದಲೇ ಹೊತ್ತು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿ ಹಂಗಿನಲ್ಲರುವ ಬಿಜೆಪಿ ಕಚೇರಿಗಳನ್ನ ಖಾಲಿ ಮಾಡಿ ಸ್ವತಂ ಕಟ್ಟಡ ನಿರ್ಮಿಸಲು ಹೆಜ್ಜೆ ಇಟ್ಟಿದೆ.

ಬೆಂಗಳೂರು, (ಆ.14): ರಾಜ್ಯದಲ್ಲಿ ಸಂಘಟನೆ ಬಲಪಡಿಸಲು ಬಿಜೆಪಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ  ರಾಜ್ಯಾದ್ಯಂತ ಸ್ವಂತ ಕಚೇರಿ ನಿರ್ಮಾಣಕ್ಕೆ ಬಿಜೆಪಿ ಮುಂದಾಗಿದೆ.

ರಾಜ್ಯದ ಕೆಲವೆಡೆ ಶಾಸಕರು, ಸಂಸದರ ಒಡೆತನದ ಕಟ್ಟಡಳಲ್ಲಿ ಬಿಜೆಪಿ ಕಚೇರಿಗಳು ಇದ್ದು, ಅಂತಹ ಎಲ್ಲಾ ಕಚೇರಿಗಳನ್ನ ಖಾಲಿ ಮಾಡಿಸಿ, ಹೊಸ ಕಚೇರಿ ನಿರ್ಮಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ಕೊಟ್ಟಿದ್ದಾರೆ.

ಇಂದು (ಶುಕ್ರವಾರ) ಕರ್ನಾಟಕ ರಾಜ್ಯದ 8 ಜಿಲ್ಲೆ ಹಾಗೂ 1 ಮಂಡಲದ ಬಿಜೆಪಿ ಕಾರ್ಯಾಲಯಗಳ ಭವನ ಶಿಲಾನ್ಯಾಸ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ವರ್ಚ್ಯವಲ್ ಸಭೆ ಮೂಲಕ ಉದ್ಘಾಟಿಸಿದರು. 

ಮುಖ್ಯಮಂತ್ರಿ ಸ್ಥಾನಕ್ಕೆ ಆಗಾಗ ಸಂತೋಷ್‌ ಜಿ ಹೆಸರು ಕೇಳಿ ಬರೋದ್ಯಾಕೆ?

ಕಟೀಲ್ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್, ಎರಡ್ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಕ್ಷದ ಕಾರ್ಯಾಲಯಗಳನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಕ್ಷದ ಕಾರ್ಯಾಲಯಗಳನ್ನು ಪ್ರಾರಂಭಿಸಲು ಭೂಮಿ ಖರೀದಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿಜಯಪುರ, ರಾಯಚೂರು, ಬಳ್ಳಾರಿ, ಬೀದರ್, ಬಾಗಲಕೋಟೆ, ಕೋಲಾರ, ಚಾಮರಾಜನಗರ ಮತ್ತು ತಿಪಟೂರಿನಲ್ಲಿ ಕಾರ್ಯಾಲಯ ಆರಂಭವಾಗುತ್ತಿವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹಾವೇರಿ, ರಾಮನಗರ, ಉತ್ತರ ಕನ್ನಡ ಸೇರಿದಂತೆ ಒಟ್ಟು 11 ಕಡೆ ಕಾರ್ಯಾಲಯಗಳನ್ನು ಪ್ರಾರಂಭಿಸಲಾಗುವುದು. ಈ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಇರುವ ಕಾರಣ ಭೂಮಿ ಖರೀದಿ ವಿಳಂಬವಾಗಿದೆ. ಒಂದೆರಡು ತಿಂಗಳಲ್ಲಿ ಇದು ಕೂಡ ಪೂರ್ಣಗೊಳ್ಳಲಿದ್ದು, ಎರಡು- ಮೂರು ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಕಾರ್ಯಾಲಯಗಳು ಪ್ರಾರಂಭವಾಗಲಿವೆ ಎಂದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ