ಕರ್ನಾಟಕದಲ್ಲಿ ಮೋದಿ ದಂಡಯಾತ್ರೆಗೆ ಪ್ರತಿಯಾಗಿ 'ಕೈ' ಬ್ರಹ್ಮಾಸ್ತ್ರ..!

By Web DeskFirst Published Feb 3, 2019, 9:14 PM IST
Highlights

ಕರ್ನಾಟಕದಲ್ಲಿ ಮೋದಿ ದಂಡಯಾತ್ರೆಗೆ ಪ್ರತಿಯಾಗಿ 'ಕೈ' ಬ್ರಹ್ಮಾಸ್ತ್ರ! ಪ್ರಧಾನಿ ಮೋದಿ ರ‍್ಯಾಲಿಗೆ ಪ್ರತಿಯಾಗಿ ಕಾಂಗ್ರೆಸ್ ನಿಂದ ಸ್ಟಾರ್ ಪ್ರಚಾರಕಿ!

ಬೆಂಗಳೂರು, [ಫೆ.03]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಭರ್ಜರಿ ತಯಾರಿ ನಡೆಸಿವೆ.

 ಇದೇ ಫೆಬ್ರವರಿ 10ರಂದು ರಾಜ್ಯ ಬಿಜೆಪಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ರಣಕಹಳೆ ಊದಲಿದ್ದಾರೆ.

ಕರ್ನಾಟಕದಲ್ಲಿ ಕಮಲ ಅರಳಿಸಲು ಬರುತ್ತಿದ್ದಾರೆ ನಮೋ..!

ಈ ಮೋದಿ ರ‍್ಯಾಲಿಗೆ ಪ್ರತಿಯಾಗಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಚುನಾವಣಾ ಸಮಾವೇಶಗಳಲ್ಲಿ ಎಐಸಿಸಿ ನೂತನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಬಳಸಿಕೊಳ್ಳಲು ನಿರ್ಧರಿಸಿದೆ. 

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಎಚ್‌ ಕೆ ಪಾಟೀಲ್ ಈಗಾಗಲೇ ಪ್ರಿಯಾಂಕ ಗಾಂಧಿ ಅವರು ವಿವಿಧ ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸುವ ಸುಳಿವು ನೀಡಿದ್ದಾರೆ. 

ಮೋದಿ ರ‍್ಯಾಲಿಗೆ ಪ್ರತಿಯಾಗಿ ಪ್ರಿಯಾಂಕ ಗಾಂಧಿ ರ‍್ಯಾಲಿ ಆಯೋಜಿಸಿದರೆ, ಮತದಾರರನ್ನು ಸೆಳೆಯಬಹುದು ಎನ್ನುವುದು ರಾಜ್ಯ ಕಾಂಗ್ರೆಸ್ ನ ಲೆಕ್ಕಾಚಾರ. ಹೀಗೆ ಎರಡು ರಾಷ್ಟ್ರೀಯ ಪಕ್ಷಗಳು ಸ್ಟಾರ್ ಪ್ರಚಾರಕನ್ನು ರಾಜ್ಯಕ್ಕೆ ಕರೆತಂದು ಮತದಾರರ ಮನ ಓಲೈಸುವ ತಂತ್ರಗಳನ್ನು ರೂಪಿಸುತ್ತಿವೆ.

ಆದ್ರೆ ಈ ಸ್ಟಾರ್ ಪ್ರಚಾರನ್ನು ಕರೆತರುವುದರಿಂದ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವುದು ಫಲಿತಾಂಶ ಹೊರಬಿದ್ದ ಬಳಿಕ ತಿಳಿಯಲಿದೆ.

ಒಟ್ಟಿನಲ್ಲಿ ಈ ಬಾರಿ ಲೋಕಸಭೆ ಚುನಾವಣೆ  ರಾಜ್ಯದಲ್ಲಿ ರಂಗೇರಲಿದ್ದು, ಒಟ್ಟು 28 ಕ್ಷೇತ್ರಗಳ ಪೈಕಿ ಯಾರು ಎಷ್ಟು ಗೆಲ್ಲಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

click me!