3 ವರ್ಷದಲ್ಲೇಕೆ ಅಭಿವೃದ್ಧಿ ಮಾಡ್ಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

By Kannadaprabha News  |  First Published May 4, 2023, 4:37 AM IST

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರಾಜ್ಯದ ಪಾಲಿನ ಜಿಎಸ್‌ಟಿ ನೀಡದೆ ಒಂದೂವರೆ ಲಕ್ಷ ಕೋಟಿಯಷ್ಟು ಲೂಟಿ ಮಾಡಿದೆ. ಜೊತೆಗೆ, ಇಲ್ಲಿನ ಬಿಜೆಪಿ ಸರ್ಕಾರ ಕೂಡ ಲೂಟಿ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಮನೆಗಳಿಂದ, ಅಂಗಡಿಗಳಿಂದ ಹಾಗೂ ಜನರ ಜೇಬಿನಿಂದ ನೇರವಾಗಿ ಕಳ್ಳತನ ಮಾಡುತ್ತಿದೆ. ಇದರ ಜೊತೆಗೆ ಪ್ರಜಾಪ್ರಭುತ್ವದ ದಮನ, ಯುವಶಕ್ತಿಯನ್ನು ದಾರಿ ತಪ್ಪಿಸುವುದು ಬಿಜೆಪಿಯ ಕೊಡುಗೆಗಳಾಗಿವೆ ಎಂದ ಪ್ರಿಯಾಂಕಾ ಗಾಂಧಿ 


ಇಂಡಿ(ಮೇ.04):  ‘ಚುನಾವಣೆಯ ಈ ಸಂದರ್ಭದಲ್ಲಿ ಕರ್ನಾಟಕವನ್ನು ವಿಕಾಸ ಮಾಡುವುದು ನನ್ನ ಕನಸು ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಹಾಗಾದರೆ, ಕಳೆದ 3 ವರ್ಷಗಳಿಂದ ಅವರು ಏನು ಮಾಡುತ್ತಿದ್ದರು? ಇಷ್ಟುದಿನ ಏಕೆ ವಿಕಾಸ ಮಾಡಲಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಪ್ರಿಯಾಂಕಾ, ಬುಧವಾರ ವಿಜಯಪುರ ಜಿಲ್ಲೆಯ ಇಂಡಿ, ಕಲಬುರಗಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಹೊಸಕೋಟೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಬಿಜೆಪಿ ಹಾಗೂ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

ಗುಮ್ಮಟನಗರಿ ವಿಜಯಪುರದಲ್ಲಿ ಕಮಲ ಅರಳುತ್ತಾ, ಕೈ ಮೇಲಾಗುತ್ತಾ?: ಕುತೂಹಲ

ಇಂಡಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರಾಜ್ಯದ ಪಾಲಿನ ಜಿಎಸ್‌ಟಿ ನೀಡದೆ ಒಂದೂವರೆ ಲಕ್ಷ ಕೋಟಿಯಷ್ಟು ಲೂಟಿ ಮಾಡಿದೆ. ಜೊತೆಗೆ, ಇಲ್ಲಿನ ಬಿಜೆಪಿ ಸರ್ಕಾರ ಕೂಡ ಲೂಟಿ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಮನೆಗಳಿಂದ, ಅಂಗಡಿಗಳಿಂದ ಹಾಗೂ ಜನರ ಜೇಬಿನಿಂದ ನೇರವಾಗಿ ಕಳ್ಳತನ ಮಾಡುತ್ತಿದೆ. ಇದರ ಜೊತೆಗೆ ಪ್ರಜಾಪ್ರಭುತ್ವದ ದಮನ, ಯುವಶಕ್ತಿಯನ್ನು ದಾರಿ ತಪ್ಪಿಸುವುದು ಬಿಜೆಪಿಯ ಕೊಡುಗೆಗಳಾಗಿವೆ ಎಂದರು.

ಬಿಜೆಪಿಯವರು ಕಳ್ಳರಲ್ಲಿ ಅತಿ ದೊಡ್ಡ ಕಳ್ಳರು. ಬಿಜೆಪಿಯವರು ಲೂಟಿ ಮಾಡಿದ ಹಣದಲ್ಲಿ 100 ಏಮ್ಸ್‌ ಆಸ್ಪತ್ರೆ, 175 ಇಎಸ್‌ಐ ಆಸ್ಪತ್ರೆ, 3,000 ಸ್ಮಾರ್ಚ್‌ ಕ್ಲಾಸ್‌ರೂಂ, 30 ಲಕ್ಷ ಬಡವರಿಗೆ, ದಲಿತರಿಗೆ ಮನೆ ನೀಡಬಹುದಿತ್ತು. ಆದರೆ, ಮೋದಿಯವರು ಕನಸುಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ನಡೆದ ಲೂಟಿ ಬಗ್ಗೆ ಕಣ್ಣು ಮುಚ್ಚಿಕೊಂಡಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಲೂಟಿ ಮತ್ತು ಕಳ್ಳತನ ಮಾಡಲು ಅವರೇ ಅವಕಾಶ ಮಾಡಿಕೊಟ್ಟಿದ್ದಾರೆ. ಲೂಟಿ ಮಾಡುವವರನ್ನು ತಡೆಯಲಿಲ್ಲ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. 40% ಕಮಿಷನ್‌ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಮಾಡಿ ಪತ್ರ ಬರೆದರೂ ಮೋದಿಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಆರೋಪಿಸಿದರು.

ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ!

ರಾಜ್ಯದಲ್ಲಿ ಬಿಜೆಪಿ ಸರ್ಕಾರ 2.5 ಲಕ್ಷ ಸರ್ಕಾರಿ ಉದ್ಯೋಗ ಖಾಲಿ ಇಟ್ಟಿದ್ದು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಭರ್ತಿ ಮಾಡಲಾಗುವುದು. ಕಾಂಗ್ರೆಸ್‌, ರಾಜ್ಯದ ಜನರಿಗೆ ಹಲವು ಗ್ಯಾರಂಟಿಗಳನ್ನು ನೀಡಿದೆ. ಕಳೆದ ಬಾರಿಯ ಕಾಂಗ್ರೆಸ್‌ ಸರ್ಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಜನಪರ ಯೋಜನೆಗಳ ಮೂಲಕ ಬಡತನ ನಿರ್ಮೂಲನೆಗೆ ಯೋಜನೆ ಜಾರಿ ಮಾಡಲಾಗಿತ್ತು. ಹೀಗಾಗಿ, ನಾನಿಲ್ಲಿ ಮತಯಾಚಿಸಲು ಬಂದಿಲ್ಲ. ಬಿಜೆಪಿ ಬಗ್ಗೆ ನಿಮ್ಮನ್ನು ಎಚ್ಚರಿಸಲು ಬಂದಿದ್ದೇನೆ ಎಂದರು.

1.5 ಲಕ್ಷ ಕೋಟಿ ಲೂಟಿ

ಬಿಜೆಪಿಯವರು ಕಳ್ಳರಲ್ಲಿ ಅತಿ ದೊಡ್ಡ ಕಳ್ಳರು. ಬಿಜೆಪಿಯವರು ಲೂಟಿ ಮಾಡಿದ ಹಣದಲ್ಲಿ 100 ಏಮ್ಸ್‌ ಆಸ್ಪತ್ರೆ, 175 ಇಎಸ್‌ಐ ಆಸ್ಪತ್ರೆ, 3,000 ಸ್ಮಾರ್ಟ್‌ ಕ್ಲಾಸ್‌ರೂಂ, 30 ಲಕ್ಷ ಬಡವರಿಗೆ, ದಲಿತರಿಗೆ ಮನೆ ನೀಡಬಹುದಿತ್ತು. ರಾಜ್ಯದ ಪಾಲಿನ ಜಿಎಸ್‌ಟಿ ನೀಡದೆ 1.5 ಲಕ್ಷ ಕೋಟಿ ರು. ಲೂಟಿ ಮಾಡಿದ್ದಾರೆ ಅಂತ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. 

click me!