ಜಿ20 ಶೃಂಗಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕೆ, ಅದೇ ಪಕ್ಷದ ಶಶಿ ತರೂರ್ ಪ್ರಶಂಸೆ

By Kannadaprabha News  |  First Published Sep 11, 2023, 8:00 AM IST

ಜಿ-20 ಶೃಂಗದ ಬಗ್ಗೆ ರಾಹುಲ್ ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ನ ಮತ್ತೋರ್ವ ನಾಯಕ ಶಶಿ ತರೂರ್ ಅವರು ಜಿ-20 ಶೃಂಗದ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  


ಜೈಪುರ: ಜಿ-20 ಶೃಂಗದ ಬಗ್ಗೆ ರಾಹುಲ್ ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ನ ಮತ್ತೋರ್ವ ನಾಯಕ ಶಶಿ ತರೂರ್ ಅವರು ಜಿ-20 ಶೃಂಗದ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಜಿ20 ಶೃಂಗದ ವೇಳೆ ದೆಹಲಿ ಘೋಷಣೆಯನ್ನು ಪೂರ್ಣ ಸಹಮತದೊಂದಿಗೆ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾದ ಭಾರತದ ಸಾಧನೆಗೆ ಕಾರಣವಾದ ಭಾರತದ ಶೆರ್ಪಾ ಅಮಿತಾಭ್‌ ಕಾಂತ್‌ ಅವರ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಘೋಷಣೆಯಲ್ಲಿ ರಷ್ಯಾ- ಉಕ್ರೇನ್‌ (Russia Ukraine) ಕುರಿತಾದ ಪ್ರಸ್ತಾಪಗಳಿಗೆ ಎಲ್ಲರ ಸಹಮತ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅಮಿತಾಭ್‌ ಕಾಂತ್‌ ಅವರಿಗೆ ಅಭಿನಂದನೆಗಳು. ನೀವು ಐಎಫ್‌ಎಸ್‌ (IFS) ಬದಲು ಐಎಎಸ್‌ ಆಯ್ಕೆ ಮಾಡಿಕೊಂಡಾಗ ನಾವು ಒಬ್ಬ ಅತ್ಯುತ್ತಮ ರಾಯಭಾರಿಯನ್ನು ಕಳೆದುಕೊಂಡೆವು ಎಂದು ಅಂದುಕೊಂಡಿದ್ದೆವು. ದೆಹಲಿ ಘೋಷಣೆಯ ಬಗ್ಗೆ ರಷ್ಯಾ ಮತ್ತು ಚೀನಾ (China) ಜೊತೆಗೆ ಶುಕ್ರವಾರ ತಡರಾತ್ರಿಯಷ್ಟೇ ಚರ್ಚೆ, ಚೌಕಾಸಿ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಇದು ನಿಜಕ್ಕೂ ಜಿ20ಯಲ್ಲಿ ಭಾರತಕ್ಕೆ ಹೆಮ್ಮೆಯ ಸಂದರ್ಭ ಎಂದು ತರೂರ್‌ ಹೇಳಿದ್ದಾರೆ.

Tap to resize

Latest Videos

ಬಿಜೆಪಿ ನಡತೆ ಹಿಂದುತ್ವದ ರೀತಿ ಇಲ್ಲ: ರಾಹುಲ್‌ ಗಾಂಧಿ

ಮೋದಿ ವಿದೇಶ ಯಾತ್ರೆಯಿಂದ ಶ್ರೀಮಂತರಿಗೆ ಲಾಭ: ಪ್ರಿಯಾಂಕಾ

ಆದರೆ ಮತ್ತೊಂದೆಡೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (priyankha Gandhi) ಜಿ-20 ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಚುನಾವಣೆ ಪ್ರಚಾರದಲ್ಲಿರುವ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಟೋಂಕ್‌ನಲ್ಲಿ ಭಾನುವಾರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ವಿದೇಶಕ್ಕೆ ತೆರಳುವುದು ಅಲ್ಲಿನ ಉದ್ಯಮಿ ಸ್ನೇಹಿತದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹೊರತು ಬಡವರಿಗೆ ಸಹಾಯವಾಗಲೆಂದಲ್ಲ. ಇವರ ವ್ಯವಹಾರಗಳೆಲ್ಲವೂ ಶ್ರೀಮಂತರ ಆಶೋತ್ತರಗಳ ಪೂರೈಕೆಗೆ ಹೊರತು ಬಡವರ ಕಲ್ಯಾಣಕ್ಕಲ್ಲ. ಬಿಜೆಪಿಗೆ ಬಡವರು ಹಾಗೂ ಮಧ್ಯಮ ವರ್ಗವನ್ನು ಮೇಲೆತ್ತುವ ಬದಲು ಅಧಿಕಾರ ದಾಹವೇ ಹೆಚ್ಚು ಎಂದು ವಾಗ್ದಾಳಿ ನಡೆಸಿದರು. ಹೀಗಾಗಿಯೇ ಜಿ20 ಸಭೆ (G-20 Summit)ನಡೆಯುವ ಸ್ಥಳದಲ್ಲಿ ನೀರು ತುಂಬಿಕೊಂಡಿರುವುದು. ಏಕೆಂದರೆ ಅಹಂ ಕಡಿಮೆ ಮಾಡಿ ಜನರ ಅಭಿವೃದ್ಧಿ ಮಾಡಿ ಎಂದು ದೇವರೇ ಮಳೆಗರೆದಿದ್ದಾನೆ ಎಂದು ಕಿಡಿಕಾರಿದರು.

ಜವಾನ್‌ ಯಶಸ್ಸಿನ ಬೆನ್ನಲ್ಲೇ ಪ್ರಧಾನಿ ಮೋದಿ ಹಾಡಿ ಹೊಗಳಿದ ಶಾರುಖ್‌ ಖಾನ್‌ 

ಮಂಡಿಯೂರಿ ಶೇಖ್‌ ಹಸೀನಾ ಜೊತೆ ರಿಷಿ ಮಾತುಕತೆ!

ನವದೆಹಲಿ: ಜಿ20 ಶೃಂಗಕ್ಕಾಗಿ ದೆಹಲಿಗೆ ಆಗಮಿಸಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಭಾನುವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದರು. ಭಾನುವಾರ ಬೆಳಗ್ಗೆ ಎಲ್ಲಾ ಜಾಗತಿಕ ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಲು ತೆರಳಿದ್ದರು. ಈ ವೇಳೆ ರಾಜ್‌ಘಾಟ್‌ ಆವರಣದಲ್ಲಿ ಹಸೀನಾ ಅವರು ಕುರ್ಚಿಯಲ್ಲಿ ಕುಳಿತಿದ್ದನ್ನು ಗಮನಿಸಿದ ರಿಷಿ, ಅವರು ಇದ್ದ ಸ್ಥಳಕ್ಕೆ ತೆರಳಿ ಮಂಡಿಯೂರಿ ಕುಳಿತು ಬಾಂಗ್ಲಾ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಾಯಕಿಯೊಂದಿಗೆ ರಿಷಿ ನಡೆದುಕೊಂಡ ರೀತಿಯ ಬಗ್ಗೆ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಮಾಧ್ಯಮಕ್ಕೆ ಮೋದಿ ಗೌರವ

ಜಿ20 ಸಭೆಯ ಅಂತಿಮ ದಿನದ ಕೊನೆ ಕ್ಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೃಂಗದ ವರದಿಗಾರಿಕೆ ಮಾಡುತ್ತಿದ್ದ ಇಂಟರ್‌ನ್ಯಾಷನಲ್‌ ಮೀಡಿಯಾ ಸೆಂಟರ್‌ಗೆ ಆಗಮಿಸಿ ನೆರೆದಿದ್ದ ಮಾಧ್ಯಮ ವರ್ಗದವರತ್ತ ಕೈಬೀಸಿದರು. ಈ ವೇಳೆ ಶೃಂಗದ ವರದಿಗಾರಿಕೆಗಾಗಿ ‘ಬಹುತ್‌ ಬಹುತ್‌ ಧನ್ಯವಾದ್‌’ ಎಂದು ಕೃತಜ್ಞತೆ ಅರ್ಪಿಸಿದರು.

click me!