ಕಾಂಗ್ರೆಸ್‌ ಸರ್ಕಾರದಿಂದ ದ್ವೇಷ ರಾಜಕಾರಣ; ಮಹೇಶ ಕುಮಟಳ್ಳಿ ಕಿಡಿ

By Ravi Janekal  |  First Published Sep 11, 2023, 7:56 AM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅವುಗಳನ್ನು ರದ್ದು ಮಾಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಆರೋಪಿಸಿದರು.


ಅಥಣಿ (ಸೆ.11) :  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅವುಗಳನ್ನು ರದ್ದು ಮಾಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಥಣಿ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿಯೇ ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕು, ವಿದ್ಯುತ್‌ ನಿಗಮ ಅನಿಯಮಿತ ವಿದ್ಯುತ ಪೂರೈಕೆಯಿಂದಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಬೆಳೆಗಳು ಕಮರುತ್ತಿವೆ. ಅಲ್ಲದೇ ಎಲ್ಲರಿಗೂ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಭರವಸೆ ಕೊಟ್ಟಂತೆ ನಡೆಯದೆ ಮಾನದಂಡ ಅಳವಡಿಸುತ್ತಿರುವುದು ಸರಿಯಲ್ಲ. ನಾವು ನುಡಿದಂತೆ ನಡೆದ ಸರ್ಕಾರ ಎಂದು ಜಂಬ ಕೊಚ್ಚಿ ಕೊಳ್ಳುತ್ತಿದ್ದು, ಮುಂದೆ ಜನರಿಗೆ ಮೋಸ ಮಾಡಿದ ಸರ್ಕಾರ ಅಂದು ಕೊಳ್ಳಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

Tap to resize

Latest Videos

ರಾಜಕೀಯದ ತೆವಲುಗಳಿಗೆ ಅಮಾಯಕರ ಜೀವದ ಜೊತೆ ಚೆಲ್ಲಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಈ ಮೊದಲು ನಾನು ಶಾಸಕನಾಗಿದ್ದ ವೇಳೆಯಲ್ಲಿ ಮಳೆಯಿಂದ ಭಾದಿತವಾದ ರಸ್ತೆ ಸುಧಾರಣೆಗಾಗಿ ಸುಮಾರು ₹ 10 ಕೋಟಿ ಅನುದಾನ ತಂದಿದ್ದೇನೆ. ಆದರೆ ಈಗಿನ ಸ್ಥಳೀಯ ಶಾಸಕರು ಅವುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವ ಕ್ರಮ ಸರಿಯಾದದ್ದು ಅಲ್ಲ, ಬೇಕಾದರೆ ಅವರು ಹೆಚ್ಚಿನ ಅನುದಾನ ತಂದು ರಸ್ತೆ, ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕು. ರಾಜ್ಯದಲ್ಲಿ ಈಗ ಅವರದೇ ಸರ್ಕಾರವಿದ್ದು, ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲಿ. ತಾಲೂಕಿನ ಪೂರ್ವಭಾಗದ ರೈತರ ಅನುಕೂಲಕ್ಕಾಗಿ ಅಮ್ಮಾಜೇಶ್ವರಿ ಯೋಜನೆ ಅದಷ್ಟು ಬೇಗ ಪ್ರಾರಂಭಿಸಬೇಕು.ಇಲ್ಲವಾದರೇ ರೈತರೊಂದಿಗೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.

ಅಮಿತ್‌ ಶಾಗೆ ದ್ವೇಷ ರಾಜಕೀಯ ಬೇಡ ಎಂದು ಹೇಳಿದ್ದೇನೆ :ಸಿಎಂ ಸಿದ್ದರಾಮಯ್ಯ

ಈ ವೇಳೆ ಮುಖಂಡರಾದ ಸಿದ್ದಪ್ಪ ಮುದಕಣ್ಣವರ, ಧರೇಪ್ಪ ಠಕ್ಕಣ್ಣವರ ,ರೈತ ಮೋರ್ಚಾ ಅದ್ಯಕ್ಷ ಶಿವಾನಂದ ಇಂಗಳಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಳ ಅದ್ಯಕ್ಷ ರವಿ ಸಂಕ , ಮುಖಂಡರಾದ ರಮೇಶಗೌಡಾ ಪಾಟೀಲ , ಗಿರೀಶ ಬುಟಾಳಿ ,ಪ್ರಭಾಕರ ಚವ್ಹಾಣ , ಮಲ್ಲಪ್ಪಾ ಹಂಚಿನಾಳ ,ಸಂತೋಷ ಕಕಮರಿ, ಶಿವು ಸಿಂಧೂರ, ರಾಜೇಂದ್ರ ಐಹೋಳೆ, ಶಿವಪ್ರಸನ್ನ ಹೀರೆಮಠ , ಕುಮಾರ ಪಡಸಲಗಿ, ಮಲ್ಲು ಅಂದಾನಿ, ವಿನಯ ಪಾಟೀಲ , ಮಾರುತಿ ಮೊಹಿತೆ , ಅಶೋಕ ಯಲ್ಲಡಗಿ , ಚಂದ್ರಕಾಂತ ಕೆಂಚನ್ನವರ, ಅಣ್ಣಪ್ಪ ಭಜಂತ್ರಿ, ವಿಠ್ಠಲ ಮಾಚಕನೂರ, ಚಿದಾನಂದ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

click me!