ಅಮಿತ್ ಶಾ ಸೇರಿ ಹಲವರು ಇಲ್ಲಿಗೆ ಬಂದು ಪ್ರಚಾರ ಮಾಡಿದ್ದರೂ ಅವರ ಬಳಿ ರಾಜ್ಯಕ್ಕೆ ಅಂಟಿದ್ದ ಶೇ.40 ಕಮಿಷನ್ ಭ್ರಷ್ಟಾಚಾರದ ಹಣೆಪಟ್ಟಿ ಅಳಿಸಲು ಯಾವುದೇ ಅಸ್ತ್ರ ಇರಲಿಲ್ಲ. ಜೊತೆಗೆ ಅಭಿವೃದ್ಧಿಯ ಯಾವುದೇ ನೀಲನಕ್ಷೆಗಳನ್ನು ಅವರು ತರಲಿಲ್ಲ. ಇಲ್ಲಿಗೆ ಬಂದು ಕನ್ನಡಿಗರಿಗಾಗಿ ಏನು ಮಾಡುತ್ತೇವೆ ಎಂಬುದನ್ನೂ ಹೇಳಲಿಲ್ಲ. ಬದಲಿಗೆ ನಮ್ಮ ಅಸ್ಮಿತೆ ಬಗ್ಗೆ ಮಾತನಾಡಿದರು ಎಂದ ಪ್ರಿಯಾಂಕ್ ಖರ್ಗೆ
ಬೆಂಗಳೂರು(ಮೇ.14): ನಿರುದ್ಯೋಗ ನಿವಾರಣೆಗೆ, ಸಂವಿಧಾನ ಉಳಿಸಿಕೊಳ್ಳುವಿಕೆಗೆ, ಬೆಲೆ ಏರಿಕೆ ತಡೆಗೆ ಹಾಗೂ ಕನ್ನಡದ ಅಸ್ಮಿತೆಯ ಸಮಸ್ಯೆ ಸೇರಿ ಎಲ್ಲವನ್ನೂ ನಿವಾರಿಸಲು ಕಾಂಗ್ರೆಸ್ ಸೂಕ್ತ ಎಂದು ಜನತೆ ನಿರ್ಣಯಿಸಿ ಮತ ನೀಡಿದ್ದಾರೆ ಎಂದು ಚಿತ್ತಾಪುರದಿಂದ ಗೆಲವು ಸಾಧಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಸೇರಿ ಹಲವರು ಇಲ್ಲಿಗೆ ಬಂದು ಪ್ರಚಾರ ಮಾಡಿದ್ದರೂ ಅವರ ಬಳಿ ರಾಜ್ಯಕ್ಕೆ ಅಂಟಿದ್ದ ಶೇ.40 ಕಮಿಷನ್ ಭ್ರಷ್ಟಾಚಾರದ ಹಣೆಪಟ್ಟಿ ಅಳಿಸಲು ಯಾವುದೇ ಅಸ್ತ್ರ ಇರಲಿಲ್ಲ. ಜೊತೆಗೆ ಅಭಿವೃದ್ಧಿಯ ಯಾವುದೇ ನೀಲನಕ್ಷೆಗಳನ್ನು ಅವರು ತರಲಿಲ್ಲ. ಇಲ್ಲಿಗೆ ಬಂದು ಕನ್ನಡಿಗರಿಗಾಗಿ ಏನು ಮಾಡುತ್ತೇವೆ ಎಂಬುದನ್ನೂ ಹೇಳಲಿಲ್ಲ. ಬದಲಿಗೆ ನಮ್ಮ ಅಸ್ಮಿತೆ ಬಗ್ಗೆ ಮಾತನಾಡಿದರು ಎಂದರು.
Kalaburagi Election Result 2023 : ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾದ ಕಲಬುರಗಿ!
ಕಲ್ಯಾಣ ಕರ್ನಾಟಕದ ಜೊತೆಗೆ ಇಡೀ ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಗಿದೆ. ನಮ್ಮ ಭಾಗದ ಅಭಿವೃದ್ಧಿಗೆ ತುಕ್ಕು ಹಿಡಿದಿದೆ. ಅದನ್ನು ಮೊದಲು ಬಿಡಿಸಬೇಕಿದೆ. ಈ ಭಾಗದಲ್ಲಿ ಆರ್ಥಿಕತೆ ದಿವಾಳಿಯಾಗಿದ್ದು, ಸ್ಥಿರತೆ ತಂದುಕೊಡಬೇಕಿದೆ. ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ. ಇದನ್ನೆಲ್ಲವನ್ನೂ ಸರಿಪಡಿಸಬೇಕಿದೆ. ಹೀಗಾಗಿ ಮೊದಲು ಆ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.