Kalaburagi Election Result 2023 : ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾದ ಕಲಬುರಗಿ!
ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ದಾಖಲಿಸಿದೆ.
ಕಲಬುರಗಿ(ಮೇ.13): ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಹೌದು, ಜಿಲ್ಲೆಯ 9 ಕ್ಷೇತ್ರಗಳ ಪೈಕಿ 7ರಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ದಾಖಲಿಸಿದೆ.
ಅಫಜಲ್ಪುರ ಕ್ಷೇತ್ರ (Afzalpur Assembly Constituency)
ಕಲಬುರಗಿ ಜಿಲ್ಲೆಯ ಅಫಜಲ್ಪುರ ಕ್ಷೇತ್ರ ಮೂರ್ನಾಲ್ಕು ಕಾರಣಗಳಿಗಾಗಿ ರಾಜ್ಯದ ಗಮನ ಸೆಳೆದಿತ್ತು. ಪ್ರತಿಷ್ಠಿತ ಗುತ್ತೇದಾರ್ ಕುಟುಂಬದಲ್ಲಿ ಸ್ಫೋಟಗೊಂಡಿದ್ದ ದಾಯಾದಿ ಕಲಹ, ಅದರಿಂದ ಕ್ಷೇತ್ರಾದ್ಯಂತ ಉಂಟಾಗಿರುವ ರಾಜಕೀಯ ಸಂಚಲನ, ವೈಯಕ್ತಿಕ ಸಂಬಂಧಗಳ ನಡುವಿನ ಗೊಂದಲ ಭಾರಿ ಧೂಳೆಬ್ಬಿಸಿತ್ತು. ಹೀಗಾಗಿ ಈ ಬಾರಿಯ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಏರ್ಪಟ್ಟಿತ್ತು. ಹಾಲಿ ಶಾಸಕ ಎಂ.ವೈ.ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಇಲ್ಲಿನ ಬಿಜೆಪಿ ಅಭ್ಯರ್ಥಿ. ಒಬಿಸಿ ಮತಗಳ ಮೇಲೆ ಕಣ್ಣಿಟ್ಟೇ ಪಕ್ಷ ಇವರನ್ನು ಕಣಕ್ಕಿಳಿಸಿದರೂ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರ ಕಿರಿಯ ಸಹೋದರ ನಿತಿನ್ ಗುತ್ತೇದಾರ್ ಬಂಡಾಯವೆದ್ದು ಕಣದಲ್ಲಿದ್ದರು.
Karnataka Election Result 2023: ಬೀದರ್‌ನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಮಪಾಲು, ಸಮಬಾಳು!
ಈ ಬಾರಿ ಅಫಜಲ್ಪುರ ಕ್ಷೇತ್ರದಲ್ಲಿ ಎಂ.ವೈ.ಪಾಟೀಲ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಎಂ.ವೈ.ಪಾಟೀಲ 55598 ಮತಗಳನ್ನ ಪಡೆದರೆ, ಮಾಲೀಕಯ್ಯ ಗುತ್ತೇದಾರ್ 30994 ಮತಗಳನ್ನ ಪಡೆದು ಪರಾಭವ ಹೊಂದಿದ್ದಾರೆ. ಈ ಮೂಲಕ ಎಂ.ವೈ.ಪಾಟೀಲ 24604 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಬಿಜೆಪಿ-ಮಾಲೀಕಯ್ಯ ಗುತ್ತೇದಾರ್(30994)
ಕಾಂಗ್ರೆಸ್-ಎಂ.ವೈ.ಪಾಟೀಲ (55598)
ಜೆಡಿಎಸ್-ಶಿವಕುಮಾರ್ ನಾಟೀಕಾರ್ (8103)
ಸಮಾಜವಾದಿ ಪಕ್ಷ: ಆರ್.ಡಿ.ಪಾಟೀಲ್ (8596)
ಒಟ್ಟು ಮತಗಳು: 218,719ಪುರುಷ: 112,215ಸ್ತ್ರೀ: 106,488 ತೃತೀಯಲಿಂಗಿ: 16
2018ರಲ್ಲಿ ಎಂ.ವೈ.ಪಾಟೀಲ ಕಾಂಗ್ರೆಸ್‌ನಿಂದ 1,48,465 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಅಫ್ಜಲಪುರ ಜಾತಿ ಲೆಕ್ಕಾಚಾರ
ಲಿಂಗಾಯತ 72,000
ಕಬ್ಬಲಿಗ 38,000
ಮುಸ್ಲಿಂ 32,000
ಕುರುಬ 28,000
ದಲಿತ 36,000
ಲಂಬಾಣಿ 15,000
ಬ್ರಾಹ್ಮಣ 2,000
ಇತರೆ 10,618
ಆಳಂದ (Alanda Assembly Constituency)
ಬಿಜೆಪಿಯಿಂದ ಶಾಸಕ ಸುಭಾಶ್ ಗುತ್ತೇದಾರ್ ಮತ್ತೆ ಕಣದಲ್ಲಿದ್ದರು. ಇವರಿಗೆ ಕಾಂಗ್ರೆಸ್‌ನ ಭೋಜರಾಜ್ ಎದುರಾಳಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಭೋಜರಾಜ್ ಅವರು ಸುಭಾಶ್ ಗುತ್ತೇದಾರ್ ವಿರುದ್ಧ ಜಯಸಾಧಿಸಿದ್ದಾರೆ. ಸುಭಾಶ್ ಗುತ್ತೇದಾರ್ 73526 ಮತಗಳನ್ನ ಪಡೆದರೆ, ಭೋಜರಾಜ್ 83035 ಪಡೆದಿದ್ದಾರೆ.
ಬಿಜೆಪಿ-ಸುಭಾಶ್ ಗುತ್ತೇದಾರ್ (73526)
ಕಾಂಗ್ರೆಸ್-ಭೋಜರಾಜ್ (83035)
ಜೆಡಿಎಸ್-ಮಹೇಶ್ವರಿ ವಾಲಿ (1328)
ಒಟ್ಟು ಮತಗಳು: 229,638ಪುರುಷ: 119,328ಸ್ತ್ರೀ: 110,276 ತೃತೀಯಲಿಂಗಿ: 34
2018ರಲ್ಲಿ ಸುಭಾಶ್ ಗುತ್ತೇದಾರ್ ಬಿಜೆಪಿಯಿಂದ 1,59,164 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಆಳಂದ ಜಾತಿ ಲೆಕ್ಕಾಚಾರ
ಲಿಂಗಾಯತ 55,000
ದಲಿತ 44,000
ಮುಸ್ಲಿಂ 38,000
ಕುರುಬ 33,000
ಲಂಬಾಣಿ 26,000
ಕಬ್ಬಲಿಗ 20,000
ಭೋವಿ ವಡ್ಡರ 10,000
ಇತರೆ 9,000
ಸೇಡಂ (Sedam Assembly Constituency)
ಸೇಡಂ ಕ್ಷೇತ್ರದಲ್ಲಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಿಜೆಪಿಯಿಂದ ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದರು. ಇವರಿಗೆ ಕಾಂಗ್ರೆಸ್‌ನಿಂದ ಡಾ.ಶರಣಪ್ರಕಾಶ ಪಾಟೀಲ್, ಜೆಡಿಎಸ್‌ನಿಂದ ಹೊಸಮುಖ ಬಾಲರಾಜ್ ಗುತ್ತೇದಾರ್, ಕೆಆರ್‌ಪಿಪಿಯಿಂದ ಜಿ.ಲಲ್ಲೇಶ ರೆಡ್ಡಿ (ಜನಾರ್ದನ ರೆಡ್ಡಿ ಅಳಿಯ) ಪ್ರಮುಖ ಎದುರಾಳಿಗಳಿದ್ದರು.
ಈ ಬಾರಿ ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮತದಾರ ಜೈ ಎಂದಿದ್ದಾರೆ. ಬಿಜೆಪಿಯ ರಾಜಕುಮಾರ್ ಪಾಟೀಲ್ ತೇಲ್ಕೂರ್ 49816 ಮತಗಳನ್ನ ಪಡೆದರೆ, ಕಾಂಗ್ರೆಸ್‌ನಿಂದ ಡಾ.ಶರಣಪ್ರಕಾಶ ಪಾಟೀಲ್ 93377 ಪಡೆಯುವ ಮೂಲಕ ಗೆಲುವು ದಾಖಲಿಸಿದ್ದಾರೆ.
ಬಿಜೆಪಿ-ರಾಜಕುಮಾರ್ ಪಾಟೀಲ್ ತೇಲ್ಕೂರ್ (49816)
ಕಾಂಗ್ರೆಸ್-ಡಾ.ಶರಣಪ್ರಕಾಶ ಪಾಟೀಲ್ (93377)
ಜೆಡಿಎಸ್-ಬಾಲರಾಜ್ ಗುತ್ತೇದಾರ್ (21125)
ಕೆಆರ್‌ಪಿಪಿ-ಜಿ.ಲಲ್ಲೇಶ ರೆಡ್ಡಿ (6712)
ಒಟ್ಟು ಮತಗಳು: 213,263 ಪುರುಷ: 105,496 ಸ್ತ್ರೀ: 107,745 ತೃತೀಯ ಲಿಂಗಿ: 22
2018ರಲ್ಲಿ ರಾಜಕುಮಾರ್ ಪಾಟೀಲ್ ತೇಲ್ಕೂರ್ ಬಿಜೆಪಿಯಿಂದ 1,57,310 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಸೇಡಂ ಜಾತಿ ಲೆಕ್ಕಾಚಾರ
ಲಿಂಗಾಯತ 41,000
ದಲಿತ 39,000
ಲಂಬಾಣಿ 28,000
ಮುಸ್ಲಿಂ 27,000
ಕುರುಬ 28,000
ಕೋಲಿ 22,000
ಈಡಿಗ 14,000
ಇತರೆ 16,000
ಚಿತ್ತಾಪುರ (ಮೀಸಲು) (Chittapura Assembly Constituency)
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಹುರಿಯಾಳು. ಬಿಜೆಪಿ ಬಂಜಾರಾ ಸಮಾಜದ ಮಣಿಕಂಠ ರಾಠೋಡ್‌ರನ್ನು ಕಣಕ್ಕಿಳಿಸಿತ್ತು. ಈ ಬಾರಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಮಣಿಕಂಠ ರಾಠೋಡ್ ಅವರ ವಿರುದ್ಧ ಭರ್ಜರಿ ಗೆಲುವು ದಾಖಲಸಿದ್ದಾರೆ. ಪ್ರಿಯಾಂಕ್ ಖರ್ಗೆ 81323 ಮತಗಳನ್ನ ಪಡೆದರೆ, ಮಣಿಕಂಠ ರಾಠೋಡ್ 67683 ಪಡೆದಿದ್ದಾರೆ.
ಬಿಜೆಪಿ-ಮಣಿಕಂಠ ರಾಠೋಡ್ (67683)
ಕಾಂಗ್ರೆಸ್-ಪ್ರಿಯಾಂಕ್ ಖರ್ಗೆ (81323)
ಜೆಡಿಎಸ್-ಸುಭಾಶಚಂದ್ರ ರಾಠೋಡ್ (643)
ಒಟ್ಟು ಮತಗಳು: 228,618 ಪುರುಷ: 114,714 ಸ್ತ್ರೀ: 113,872 ತೃತೀಯ ಲಿಂಗಿ: 32
2018ರಲ್ಲಿ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್‌ನಿಂದ 1,39,317 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಚಿತ್ತಾಪೂರ ಜಾತಿ ಲೆಕ್ಕಾಚಾರ
ಲಿಂಗಾಯತ 38,000
ದಲಿತ 42,000
ಲಂಬಾಣಿ 36,000
ಮುಸ್ಲಿಂ 28,000
ಈಡಿಗ 15,000
ಕಬ್ಬಲಿಗ 21,000
ಕುರುಬ 19,000
ಭೋವಿ ವಡ್ಡರ್ 8,000
ಇತರೆ 15,000
ಜೇವರ್ಗಿ (Jevargi Assembly Constituency)
ಬಿಜೆಪಿ ಇಲ್ಲಿ ಹೊಸಮುಖ ಶಿವರಾಜ ಪಾಟೀಲ್ ರದ್ದೇವಾಡಗಿ ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ದೊಡ್ಡಪ್ಪಗೌಡ ಅವರು ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್‌ನಿಂದ ಡಾ.ಅಜಯ್ ಸಿಂಗ್ ಅವರು ಸ್ಪರ್ಧಿಸಿ ಜಯ ದಾಖಲಿಸಿದ್ದಾರೆ. ಡಾ.ಅಜಯ್ ಸಿಂಗ್ 70810 ಮತಗಳನ್ನ ಪಡೆದರೆ, ಜೆಡಿಎಸ್‌ನ ದೊಡ್ಡಪ್ಪಗೌಡ 60532 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಶಿವರಾಜ ಪಾಟೀಲ್ ರದ್ದೇವಾಡಗಿ (29564)
ಕಾಂಗ್ರೆಸ್-ಡಾ.ಅಜಯ್ ಸಿಂಗ್ (70810)
ಜೆಡಿಎಸ್-ದೊಡ್ಡಪ್ಪಗೌಡ (60532)
ಒಟ್ಟು ಮತಗಳು: 231,847 ಪುರುಷ: 116,404 ಸ್ತ್ರೀ: 115,411 ತೃತೀಯ ಲಿಂಗಿ: 32
2018ರಲ್ಲಿ ಡಾ.ಅಜಯ್ ಸಿಂಗ್ ಕಾಂಗ್ರೆಸ್‌ನಿಂದ 1,60,436 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಜೇವರ್ಗಿ ಜಾತಿ ಲೆಕ್ಕಾಚಾರ
ಲಿಂಗಾಯತ 55,000
ದಲಿತ 35,000
ಕುರುಬ 33,000
ಕೋಲಿ 30,000
ಮುಸ್ಲಿಂ 24,000
ಲಂಬಾಣಿ 22,000
ಭೋವಿ ವಡ್ಡರ್ 18,000
ಇತರೆ 11,000
ಕಲಬುರಗಿ (ಉತ್ತರ) (Kalaburagi Assembly Constituency)
ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದ ಖನೀಜ್ ಫಾತೀಮಾ ಅವರು ಜಯ ದಾಖಲಿಸಿದ್ದಾರೆ. ಬಿಜೆಪಿಯಿಂದ ಚಂದು ಪಾಟೀಲ ಹಾಗೂ ಜೆಡಿಎಸ್‌ನಿಂದ ನಾಸಿರ್ ಹುಸೇನ್ ಅಭ್ಯರ್ಥಿಯಾಗಿದ್ದಾರೆ. ಖನೀಜ್ ಫಾತೀಮಾ 80973 ಮತಗಳನ್ನ ಗಳಿಸಿದರೆ, ಚಂದು ಪಾಟೀಲ 78261 ಹಾಗೂ ನಾಸಿರ್ ಹುಸೇನ್ 17114 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ಚಂದು ಪಾಟೀಲ (78261)
ಕಾಂಗ್ರೆಸ್- ಖನೀಜ್ ಫಾತೀಮಾ (80973)
ಜೆಡಿಎಸ್-ನಾಸಿರ್ ಹುಸೇನ್ (17114)
ಒಟ್ಟು ಮತಗಳು: 276,959 ಪುರುಷ: 140,459 ಸ್ತ್ರೀ: 136,402 ತೃತೀಯ ಲಿಂಗಿ: 98
2018ರಲ್ಲಿ ಖನೀಜ್ ಫಾತೀಮಾ ಕಾಂಗ್ರೆಸ್‌ನಿಂದ 1,47,436 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಕಲಬುರಗಿ ಉತ್ತರ ಜಾತಿ ಲೆಕ್ಕಾಚಾರ
ಮುಸ್ಲಿಂ 1,20,000
ಲಿಂಗಾಯತ 70,000
ದಲಿತ 20,000
ಕಬ್ಬಲಿಗ 15,000
ಕುರುಬ 11,000
ಲಂಬಾಣಿ 12,000
ಮರಾಠ 5,000
ಬ್ರಾಹ್ಮಣ 10,000
ಇತರೆ 9,270
ಕಲಬುರಗಿ ಗ್ರಾಮೀಣ (ಮೀಸಲು) (Kalaburagi Rural Assembly Constituency (Reserved))
ಶಾಸಕ ಬಸವರಾಜ ಮತ್ತಿಮೂಡ್ ಅವರು ಬಿಜೆಪಿಯಿಂದ ಪುನರಾಯ್ಕೆ ಬಯಸಿ, ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್‌ನಿಂದ ಕುಸ್ತಿಪಟು, ಬಂಜಾರಾ ಸಮುದಾಯದ ರೇವು ನಾಯಕ ಬೆಳಮಗಿ ಕಣದಲ್ಲಿದ್ದರು. ಜೆಡಿಎಸ್ ಇಲ್ಲಿ ಯಾರನ್ನೂ ಕಣಕ್ಕಿಳಿಸಿರಲಿಲ್ಲ. ಬಸವರಾಜ ಮತ್ತಿಮೂಡ್ 84466 ಮತಗಳನ್ನ ಪಡೆದರೆ, ರೇವು ನಾಯಕ ಬೆಳಮಗಿ 71839 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ- ಬಸವರಾಜ ಮತ್ತಿಮೂಡ್ (84466)
ಕಾಂಗ್ರೆಸ್- ರೇವು ನಾಯಕ ಬೆಳಮಗಿ (71839)
ಒಟ್ಟು ಮತಗಳು: 248,958 ಪುರುಷ: 127,856 ಸ್ತ್ರೀ: 121,068 ತೃತೀಯ ಲಿಂಗಿ: 34
2018ರಲ್ಲಿ ಬಸವರಾಜ ಮತ್ತಿಮೂಡ್ ಬಿಜೆಪಿಯಿಂದ 1,50,883 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಕಲಬುರಗಿ ಗ್ರಾಮೀಣ ಜಾತಿ ಲೆಕ್ಕಾಚಾರ
ಲಂಬಾಣಿ 70,000
ಲಿಂಗಾಯತ 56,000
ಮುಸ್ಲಿಂ 21,000
ಕುರುಬ 9,000
ಕಬ್ಬಲಿಗ 12,000
ದಲಿತ 44,000
ಬ್ರಾಹ್ಮಣ 1,500
ಇತರೆ 10,770
ಕಲಬುರಗಿ ದಕ್ಷಿಣ (Kalaburagi south Assembly Constituency)
ಬಿಜೆಪಿಯ ದತ್ತಾತ್ರೇಯ ಪಾಟೀಲ್ ರೇವೂರ್ ಎದುರು ಕಾಂಗ್ರೆಸ್ ಪಕ್ಷ ಅಲ್ಲಂಪ್ರಭು ಪಾಟೀಲರನ್ನು ಕಣಕ್ಕಿಳಿಸಿತ್ತು, ಜೆಡಿಎಸ್‌ನಿಂದ ಕೃಷ್ಣಾರೆಡ್ಡಿ ಕಣದಲ್ಲಿದ್ದರು. ದತ್ತಾತ್ರೇಯ ಪಾಟೀಲ್ ರೇವೂರ್ 65137 ಮತಗಳನ್ನ ಪಡೆದರೆ, ಅಲ್ಲಂಪ್ರಭು ಪಾಟೀಲ 86219, ಕೃಷ್ಣಾರೆಡ್ಡಿ 1399 ಮತಗಳನ್ನ ಪಡೆದಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಅಲ್ಲಂಪ್ರಭು ಪಾಟೀಲರಿಗೆ ಮತದಾರ ಪ್ರಭು ಜೈ ಎಂದಿದ್ದಾನೆ.
ಬಿಜೆಪಿ-ದತ್ತಾತ್ರೇಯ ಪಾಟೀಲ್ ರೇವೂರ್ (65137)
ಕಾಂಗ್ರೆಸ್-ಅಲ್ಲಂಪ್ರಭು ಪಾಟೀಲ (86219)
ಜೆಡಿಎಸ್- ಕೃಷ್ಣಾರೆಡ್ಡಿ (1399)
ಒಟ್ಟು ಮತಗಳು: 258,960 ಪುರುಷ: 129,110 ಸ್ತ್ರೀ: 129,784 ತೃತೀಯ ಲಿಂಗಿ: 66
2018ರಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಬಿಜೆಪಿಯಿಂದ 1,43,248 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
Karnataka Assembly Election 2023 Result: ಪಕ್ಷಾಂತರಿಗಳನ್ನು ಮನೆಯಲ್ಲೇ ಕೂರಿಸಿದ ಮತದಾರ ಪ್ರಭು
ಕಲಬುರಗಿ ದಕ್ಷಿಣ ಜಾತಿ ಲೆಕ್ಕಾಚಾರ
ಲಿಂಗಾಯತ 85,000
ಬ್ರಾಹ್ಮಣ 25,000
ಮುಸ್ಲಿಂ 32,000
ದಲಿತ 40,000
ಕುರುಬ 20,000
ಕಬ್ಬಲಿಗ 18,000
ಲಂಬಾಣಿ 15,000
ರೆಡ್ಡಿ 17,000
ಇತರೆ 11,500
ಚಿಂಚೋಳಿ ಮೀಸಲು (Chincholi Assembly Constituency)
ಡಾ.ಅವಿನಾಶ ಜಾಧವ್ ಬಿಜೆಪಿಯಂದ ಮತ್ತೆ ಕಣದಲ್ಲಿದ್ದರು. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸುಭಾಶ ರಾಠೋಡ ಕಣಕ್ಕೆ ಇಳಿದಿದ್ದರು. ಜೆಡಿಎಸ್‌ನಿಂದ ಪಜಾ ಸಮುದಾಯದ ಸಂಜೀವನ ಯಾಕಾಪೂರ ಕಣದಲ್ಲಿದ್ದರು. ಡಾ.ಅವಿನಾಶ ಜಾಧವ್ 69963 ಮತಗಳನ್ನ ಪಡೆದರೆ, ಸುಭಾಶ ರಾಠೋಡ 69105 ಮತಗಳನ್ನ ಪಡೆದರೆ, ಸಂಜೀವನ ಯಾಕಾಪೂರ 6555 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಡಾ.ಅವಿನಾಶ ಜಾಧವ್ (69963)
ಕಾಂಗ್ರೆಸ್-ಸುಭಾಶ ರಾಠೋಡ (69105)
ಜೆಡಿಎಸ್-ಸಂಜೀವನ ಯಾಕಾಪೂರ (6555)
ಒಟ್ಟು ಮತಗಳು: 190,976 ಪುರುಷ: 97,243 ಸ್ತ್ರೀ: 93,718 ತೃತೀಯ ಲಿಂಗಿ: 15
2018ರಲ್ಲಿ ಉಮೇಶ ಜಾಧವ್ ಬಿಜೆಪಿಯಿಂದ 1,31,916 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಚಿಂಚೋಳಿ ಜಾತಿ ಲೆಕ್ಕಾಚಾರ
ಲಿಂಗಾಯತ 40,000
ಕಬ್ಬಲಿಗ 32,000
ದಲಿತ 40,000
ಲಂಬಾಣಿ 38,000
ಕುರುಬ 20,000
ಮುಸ್ಲಿಂ 20,000
ಭೋವಿ ವಡ್ಡರ್ 9,000
ಇತರೆ 11,000