ಬಿಟ್‌ ಕಾಯಿನ್‌ ಪ್ರಕರಣ ಚುರುಕಾದ್ರೆ ಕರ್ನಾಟಕಕ್ಕೆ 3ನೇ ಸಿಎಂ: ಹೊಸ ಬಾಂಬ್‌ ಸಿಡಿಸಿದ ಖರ್ಗೆ

By Girish Goudar  |  First Published May 3, 2022, 6:55 AM IST

*  ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಚಾರ್ಜ್‌ ಆದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ\
*  ತನಿಖೆ ಕಲಬುರ್ಗಿಗೆ ಸೀಮಿತವಾಗಬಾರದು 
*  ಸರ್ಕಾರ ತನಿಖೆ ನಡೆಸದೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ


ಮೈಸೂರು(ಮೇ.03): ಬಿಟ್‌ ಕಾಯಿನ್‌(Bitcoin) ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ(Priyank Kharge) ಹೊಸದೊಂದು ಬಾಂಬ್‌ ಹಾಕಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಚಾರ್ಜ್‌ ಆದ ಮೇಲೆ ಯಾವುದೇ ರೀತಿಯ ತನಿಖೆ(Investigation) ನಡೆಯುತ್ತಿಲ್ಲ. ಅಂದು ಮತ್ತು ಇಂದು ಹೇಳುತ್ತಿದ್ದೇನೆ. ಬಿಟ್‌ ಕಾಯಿನ್‌ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ(BJP) 3ನೇ ಮುಖ್ಯಮಂತ್ರಿ(Chief Minister) ಸಿಗಲಿದ್ದಾರೆ ಎಂದು ಭವಿಷ್ಯ ನುಡಿದರು.

Latest Videos

undefined

ಪ್ರಿಯಾಂಕ ಖರ್ಗೆಗೆ ಪ್ರಚಾರದ ಹುಚ್ಚು Minister Sunil Kumar

ತನಿಖೆ ಕಲಬುರ್ಗಿಗೆ ಸೀಮಿತವಾಗಬಾರದು:

ಪಿಎಸ್‌ಐ ಪರೀಕ್ಷೆ ಹಗರಣದ(PSI recruitment Scam) ತನಿಖೆ ಕಲಬುರ್ಗಿಗೆ(Kalaburagi) ಮಾತ್ರ ಸೀಮಿತವಾಗಬಾರದು. ಸರ್ಕಾರ ತನಿಖೆ ನಡೆಸದೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಒಂದೇ ಪರೀಕ್ಷಾ ಸೆಂಟರ್‌ ಬಗ್ಗೆ ಎಫ್‌ಐಆರ್‌(FIR) ಮಾಡಿದ್ದಾರೆ. ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಪರೀಕ್ಷಾ ಅಭ್ಯರ್ಥಿಗಳು ಹಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ತನಿಖೆ ಮಾತ್ರ ನಡೆಯುತ್ತಿಲ್ಲ. ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ 545 ಮಂದಿ ವೈಎಂಆರ್‌ಶೀಟ್‌ ತರಿಸಿಕೊಂಡಿದ್ದಾದರೂ ಯಾಕೆ? ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಾಣುತ್ತಿದ್ದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆಗೆ ಎಷ್ಟುಜನರನ್ನ ಅರೆಸ್ವ್‌ ಮಾಡಿದ್ದಾರೆ? ಒಂದೆರಡು ಕಿಂಗ್‌ ಪಿನ್‌ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್

ಯಾದಗಿರಿ: ರಾಜ್ಯದಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಈಗ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಒಂದೆಡೆ ಸಿಐಡಿ ಅಧಿಕಾರಿಗಳ ತಂಡ ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್‌ಗಳು ಹಾಗೂ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ರಾಜಕೀಯ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದಾರೆ. 

ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರೋಪಕ್ಕೆ ಯಾದಗಿರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ ಖರ್ಗೆ ಅವರು ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಆರೋಪ ಮಾಡುವದು ಬಿಟ್ಟು ಸಾಕ್ಷಿ ಸಮೇತ ದೈರ್ಯವಿದ್ದರೆ ಸಿಐಡಿ  ಮುಂದೆ ವಿಚಾರಣೆಗೆ ಹಾಜರಾಗಲಿ ಎಂದರು. ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಖರ್ಗೆ ಹೇಳಿಕೆ ಕೊಡಬೇಕು. ಕಿಂಗ್ ಪಿನ್ ಯಾರು ಅಂತ ಗೊತ್ತಿದ್ದರೆ ಯಾರು ಅಂತ ಖರ್ಗೆ ಹೇಳಲಿ.

ವಿಧಾನಸೌಧದಲ್ಲಿರುವವರಿಗೆ ದುಡ್ಡು ಮುಟ್ಟಿದೆ ಎಂದ ಪ್ರಿಯಾಂಕ್ ಖರ್ಗೆಗೆ ಶೆಟ್ಟರ್ ಕಿಡಿ: 

ವಿಧಾನಸೌಧದಲ್ಲಿರುವರಿಗೆ ದುಡ್ಡು ಮುಟ್ಟಿದೆ ಎಂಬ ಪ್ರಿಯಾಂಕ ಖರ್ಗೆಗೆ ಶೆಟ್ಟರ್ ಕಿಡಿಕಾರಿದರು. ವಿಧಾನಸೌಧದಲ್ಲಿರುವ ಹಣ ಪಡೆದಿರುವ ಬಗ್ಗೆ ಗೊತ್ತಿದ್ದರೆ ಹೆಸರು ಧೈರ್ಯವಾಗಿ  ಹೇಳಲಿ. ಸಿಐಡಿ ತನಿಖೆಯಲ್ಲಿ ಯಾವುದಾದರೂ ಒಂದು ಸಣ್ಣ ಸಾಕ್ಷಿ ಕೊಟ್ಟಿದ್ದಿರಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಸರಕಾರಕ್ಕೆ ಸರಿಯಾದ ಮಾಹಿತಿ ಕೊಡುವ ಕೆಲಸ ಮಾಡಬೇಕು ಎಂದರು.
 

click me!