ಪ್ರಿಯಾಂಕ್‌ ಖರ್ಗೆ ಸೂಪರ್ ಸಿಎಂ: ಮಾಜಿ ಸಚಿವ ಎನ್.ಮಹೇಶ್‌

By Kannadaprabha News  |  First Published May 27, 2024, 4:46 PM IST

ರಾಜ್ಯದಲ್ಲಿ ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಸಚಿವ ಪ್ರಿಯಾಂಕ ಖರ್ಗೆ ಈಗ ಸೂಪರ್ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಪ್ರಿಯಾಂಕ ಖರ್ಗೆ ಅವರನ್ನು ಕಟುವಾಗಿ ಟೀಕಿಸಿದರು. 


ಕೊಪ್ಪಳ (ಮೇ.27): ರಾಜ್ಯದಲ್ಲಿ ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಸಚಿವ ಪ್ರಿಯಾಂಕ ಖರ್ಗೆ ಈಗ ಸೂಪರ್ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಪ್ರಿಯಾಂಕ ಖರ್ಗೆ ಅವರನ್ನು ಕಟುವಾಗಿ ಟೀಕಿಸಿದರು. ಪ್ರಿಯಾಂಕ ಖರ್ಗೆ ಮೊದಲು ಜೆಜೆಎಂ ಕಾಮಗಾರಿ ಹೇಗಿದೆ ನೋಡಿಕೊಳ್ಳಲಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಇದ್ದು, ಅದನ್ನು ಸರಿಪಡಿಸಲಿ ಎಂದು ಕಿಡಿಕಾರಿದರು. ಶಿಕ್ಷಣ ಸಚಿವರಿಗೆ ಕನ್ನಡ ಬಾರದಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಇದನ್ನು ಇನ್ನೇನು ಹೇಳಲು ಸಾಧ್ಯ? ಕನ್ನಡ ಬಾರದಿರುವವರು ಶಿಕ್ಷಣ ಇಲಾಖೆಯ ಸಚಿವರಾಗಿರುವುದು ದುರಂತ ಎಂದರು.

ಪ್ರಾಥಮಿಕ ಶಿಕ್ಷಣ ಸಚಿವರಾದವರಿಗೆ ಡಬಲ್ ಬ್ರೈನ್ ಇರಬೇಕು. ಚೈಲ್ಡ್ ಸೈಕಾಲಜಿ, ಟೀಚರ್ ಸೈಕಾಲಜಿ ಅರ್ಥ ಮಾಡಿಕೊಳ್ಳಬೇಕು. ಮಿನಿಸ್ಟರ್ ಇರುವುದು ಸುಮ್ಮನೇ ಮಜಾ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ರಾಜ-ಮಹಾರಾಜರ ಕಾಲದಿಂದ ಸಿದ್ದರಾಮಯ್ಯ ಕಾಲದ ವರೆಗೂ ಗೂಢಾಚಾರರು ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡುತ್ತಿದ್ದರು. ರಾತ್ರಿ ಮಲಗುವ ಮೊದಲು ಗುಪ್ತಚರ ಐಜಿಯನ್ನು ಭೇಟಿ ಮಾಡುತ್ತಿದ್ದರು. ಆದರೆ, ಈಗ ಅದ್ಯಾವುದೂ ನಡೆಯುತ್ತಿಲ್ಲ ಎಂದು ಕಾಣಿಸುತ್ತಿದೆ. ಹೀಗಾಗಿ, ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣವಾಗಿದೆ ಎಂದರು.

Tap to resize

Latest Videos

undefined

ರವಿಶಂಕರ್ ಗುರೂಜಿಯನ್ನು ಭೇಟಿಯಾದ ಗುಜರಾತಿನ ರಾಜ್ಯಪಾಲ ಆಚಾರ್ಯ ದೇವವ್ರತ್!

ಚನ್ನಗಿರಿಯಲ್ಲಿ ಲಾಕಪ್‌ಡೆತ್ ಪ್ರಕರಣದಲ್ಲಿ ಸಿಎಂ, ಗೃಹ ಮಂತ್ರಿಗಳು ಮೊದಲೇ ಅಭಿಪ್ರಾಯ ತಿಳಿಸುತ್ತಾರೆ. ಆಗ ಅಧಿಕಾರಿಗಳು ಯಾವ ರೀತಿ ವರದಿ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಇನ್ಮೊಮ್ಮೆ ಮೋದಿ ಪಿಎಂ ಆದರೆ ತಮ್ಮ ದೇವಸ್ಥಾನ ಕಟ್ಟಿಸಿಕೊಳ್ಳುತ್ತಾರೆ ಎಂದು ತಂಗಡಗಿ ಹೇಳುತ್ತಿದ್ದಾರೆ. 10 ವರ್ಷದಲ್ಲಿ ತನ್ನ ಬಗ್ಗೆ ಎಷ್ಟು ಗಂಟೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಚನೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ ಅವರು, ಈ ರೀತಿಯಲ್ಲಿ ಮಾತನಾಡಬಾರದು ಎಂದರು.

ಮೋದಿ ಅವರ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ಜಸ್ಟಿಸ್ ಗೋಪಾಲಗೌಡ ಟೀಕೆಗೆ ಪ್ರತಿಕ್ರಿಯಿಸಿ ನೀವೋಬ್ಬರೆ ಹಾಗೆ ಮಾತನಾಡುತ್ತೀರಿ. ಜನರು ಮೋದಿ ಪರವಾಗಿ ಮಾತನಾಡುತ್ತಿದ್ದಾರೆ ಎಂದರು. ಕೆ.ಎಸ್. ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮರು ಆರಂಭಿಸುವ ಕುರಿತು ಪ್ರಶ್ನೆಗೆ, ಅವರು ದೊಡ್ಡವರು, ಅವರು ಏನು ಬೇಕಾದರೂ ಮಾಡಬಹುದು ಎಂದಷ್ಟೇ ಹೇಳಿದರು. ಎನ್‌ಇಪಿ ಚೆನ್ನಾಗಿಯೇ ಇದೆ. ಅದು ರಾಷ್ಟ್ರದ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಲಾಗಿದೆ. ಆದರೆ, ಬಿಜೆಪಿ ಅದನ್ನು ಜಾರಿಗೊಳಿಸಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನವರು ವಿರೋಧ ಮಾಡುತ್ತಾರೆ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳು ಜಾಸ್ತಿ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ, ಪಕ್ಷ ಎರಡನೆಯ ಬಾರಿ ನನಗೆ ಅವಕಾಶ ನೀಡಿದೆ. 2012-18ರ ವರೆಗೆ ನಾನು ವಿಧಾನಪರಿಷತ್‌ಗೆ ಆಯ್ಕೆಯಾಗಿ, ಈ ಭಾಗದಲ್ಲಿ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಾರಣ ಮತ ನೀಡುವಂತೆ ಮನವಿ ಮಾಡುತ್ತೇನೆ ಎಂದರು. ಹೇಮಲತಾ ನಾಯಕ, ಡಾ. ಬಸವರಾಜ ಕ್ಯಾವಟರ, ನವೀನ ಗುಳಗಣ್ಣನವರ, ಅಪ್ಪಣ್ಣ, ಸೋಮನಗೌಡ ಸೋಂಪುರ, ಚಂದ್ರಶೇಖರ ಪಾಟೀಲ ಹಲಗೇರಿ ಇದ್ದರು.

click me!