ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷ: ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Jan 7, 2023, 11:30 PM IST

ರಾಜ್ಯ ಸರ್ಕಾರವನ್ನು ಬಿಜೆಪಿ ನಡೆಸುತ್ತಿಲ್ಲ ಬದಲಿಗೆ ರೌಡಿ ಎಲೆಮೆಂಟ್ಸ್‌ ನಡೆಸುತ್ತಿದ್ದಾರೆ ಎಂದು ಅನಿಸುತ್ತದೆ: ಪ್ರಿಯಾಂಕ್‌ ಖರ್ಗೆ ಟೀಕೆ


ಕಲಬುರಗಿ(ಜ.07):  ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದು ಲೇವಡಿ ಮಾಡಿರುವ ಮಾಜಿ ಸಚಿವ, ಕಾಂಗ್ರೆಸ್‌ ಸಂವಹನ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿರುವ ಪ್ರಿಯಾಂಕ್‌ ಖರ್ಗೆ ಪ್ರಗತಿಪರತೆಗೆ ಹೆಸರಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದಿಂದಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ದೂರಿದ್ದಾರೆ. ಬಿಜೆಪಿಯವರು ಎಲ್ರೂ ಸೇರಿಕೊಂಡು ವಿಧಾನಸೌಧ ವನ್ನು ದೊಡ್ಡ ಮಾಲ್‌ ಆಗಿ ಪರಿವರ್ತನೆ ಮಾಡಿದ್ದಾರೆ. ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ಸೇರಿದಂತೆ ಪ್ರಮುಖ ವ್ಯವಹಾರಗಳು ನಡೆಯುತ್ತಿವೆ ಇದನ್ನು ನಡೆಸಲು ರಾಜಕಾರಣಿಗಳು ಸೇಲ್ಸ್‌ ಮನ್‌ ಆಗಿ ಕೆಲಸ ಮಾಡುತ್ತಿದ್ದಾರೆಂದು ಕುಟುಕಿರು.

ಒಬ್ಬ ಎಂಎಲ್‌ಎ ಪಿಎಸ್‌ಐ ನೇಮಕಾತಿ ಸಂಬಂಧಿಸಿದಂತೆ ರೋಲ್‌ ಕಾಲ್‌ ಮಾಡಿದ್ದಾರೆ. ಇತ್ತೀಚಿಗೆ ಒಬ್ಬ ಜೆಇ ಹತ್ತು ಲಕ್ಷ ಹಣದ ಬ್ಯಾಗ್‌ ನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಅದೇಗೆ ಧೈರ್ಯ ಬಂತು? ಹಣ ಯಾರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದ? ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.

Latest Videos

undefined

ಬಿಜೆಪಿಯರಿಂದ ವಿಧಾನಸೌಧ ವರ್ಲ್ಡ್ ಬಿಗ್ಗೆಸ್ಟ್ ಶಾಪಿಂಗ್ ಮಾಲ್ ಆಗಿದೆ: ಪ್ರಿಯಾಂಕ್ ಖರ್ಗೆ

ಸಿಎಂ ಹೈಕಮಾಂಡ್‌ಗೆ ಮಧ್ಯಮರ್ತಿ, ಎಂಎಲ್‌ಎ ಗಳು ಸಚಿವರಿಗೆ, ಅಧಿಕಾರಿಗಳು ಎಂಎಲ…ಎಗಳಿಗೆ ಮಧ್ಯವರ್ತಿಗಳಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ರೌಡಿಗಳು ಕೂಡಾ ಮಧ್ಯವರ್ತಿಗಳಾಗಿದ್ದಾರೆ. ಇದನ್ನು ನೋಡಿದರೆ ಸಿಎಂ ಸರ್ಕಾರ ನಡೆಸುತ್ತಿದ್ದಾರೆ ಎನಿಸುತ್ತಿಲ್ಲ. ಸರ್ಕಾರದಲ್ಲೂ ರೌಡಿ ಮೋರ್ಚಾ ಓಪನ್‌ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎನ್ನುವವನು ಸಿಎಂ ಗೆ ಹತ್ತಿರದವನಾಗಿದ್ದಾನೆ. ಈತ ಆಡಿಯೋ ಒಂದರಲ್ಲಿ ತಾನು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ ಎಂದಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು.

ಯಾರು ಕಂಬಿ ಎಣಿಸಬೇಕಿತ್ತೋ ಅವರು ಕುಮಾರಕೃಪಾದಲ್ಲಿ ಕುಳಿತು ಡೀಲ್‌ ಮಾಡುತ್ತಿದ್ದಾರೆ. ಕೆಲ ಪ್ರಶ್ನೆಗಳಿಗೆ ಸಿಎಂ ಅಥವಾ ಹೋಂ ಮಿನಿಸ್ಟರ್‌ ಉತ್ತರ ಕೊಡಬೇಕು. ಮಾಜಿ ಸಿಎಂ ಒಬ್ರು ಹೇಳುತ್ತಾರೆ ರವಿ ಮೂಲಕ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದಿದ್ದಾರೆ. ಈ ಹಿಂದಿನ ಸತ್ಯಾಂಶ ಜನರಿಗೆ ಬಿಜೆಪಿ ತಿಳಿಸಲಿ. ರವಿಗೆ ಕುಮಾರ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು? ಈ ಬಗ್ಗೆ ಸತ್ಯಾಂಶ ಹೊರಬರಲಿ. ಪೊಲೀಸ್‌ ಅಧಿಕಾರಿಗಳು ರವಿಗೆ ಫೋನ್‌ ಮಾಡಿ ವರ್ಗಾವಣೆಗೆ ಕೇಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಯಾಕೆ ಸುಮ್ಮನಿವೆ. ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್‌ ನಾಯಕರ ವಿರುದ್ದ ಮಾತ್ರವೇ? ಈ ಬಗ್ಗೆ ಸ್ವಯಂ ಪ್ರೇರಿತ ದೂರು ಯಾಕೆ ದಾಖಲಿಸಿಕೊಳ್ಳುತ್ತಿಲ್ಲ.? ಗೃಹ ಸಚಿವರಿಗೆ ಯಾರು ತಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಸರ್ಕಾರ ಈ ಕೂಡಲೇ ಎಲ್ಲ ಇಲಾಖೆಗಳ ವರ್ಗಾವಣೆ ನಿಲ್ಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

click me!