ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯ್ತು: ಪ್ರಿಯಾಂಕ್ ಖರ್ಗೆ

By Gowthami K  |  First Published May 7, 2023, 1:06 PM IST

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೋತ್ತಾಯ್ತು. ಮಣಿಕಂಠನಿಗೆ ಸಾಷ್ಟಾಂಗ ಹಾಕಿ ಬಿಡ್ತಾರೆ ಅಂತಾ ಕಾಣಿಸುತ್ತದೆ ಎಂದಿದ್ದಾರೆ.


ಕಲಬುರಗಿ (ಮೇ.7): ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ. ಅವನು ಏನಿದ್ರು ಅಕ್ಕಿ ಪಕ್ಕಿ ಲೇವಲ್ ಅಲ್ಲೆ ಇದ್ದಾನೆ. ಅದಕ್ಕೆ ರವಿಕುಮಾರ್ ಅವರಿಗೆ ಚಿತ್ತಾಪುರಕ್ಕೆ ಉಸ್ತುವಾರಿಯ ಸುಪಾರಿ ಕೊಟ್ಟಿರೋದು . ಬಿಜೆಪಿಯವರು ಹತಾಶರಾಗಿದ್ದಾರೆ. ರವಿಕುಮಾರ್ ಅವರಿಗೆ ಜೇವರ್ಗಿ , ಅಫಜಲಪುರ ಟಿಕೆಟ್ ಮಾರಾಟ ಆಗಿದೆ  ಎಂದು ಈ ಹಿಂದೆನೇ ಕೇಳಿದ್ದೇನೆ.

ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೋತ್ತಾಯ್ತು. ಮಣಿಕಂಠನಿಗೆ ಸಾಷ್ಟಾಂಗ ಹಾಕಿ ಬಿಡ್ತಾರೆ ಅಂತಾ ಕಾಣಿಸುತ್ತದೆ. ಮೋದಿ ಚಿತ್ತಾಪುರಕ್ಕೆ ಬರದೆ ಇರೋದಕ್ಕೆ  ನನಗೆ ಬಹಳ ನಿರಾಸೆ ಆಗಿದೆ ಎಂದಿದ್ದಾರೆ.

Latest Videos

undefined

ಮಣಿಕಂಠ ಈ ಹಿಂದೆ ನವೆಂಬರ್ ನಲ್ಲಿ ನನಗೆ ಶೂಟ್ ಮಾಡ್ತೇನೆ ಅಂತಾ ಕ್ಯಾಮರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತೆತ್ತಿದ್ರೆ ರಾಮ ರಾಜ್ಯ ಕಟ್ಟತ್ತೇವೆ ಅಂತಾ ಹೇಳ್ತಾರೆ. ರಾಮರಾಜ್ಯವನ್ನ ರೌಡಿ ಗಳ ಜೊತೆ ಕಟ್ಟುತ್ತಿರಾ ಹೇಗೆ? ಬಿಜೆಪಿಯವರು ಎಂತಹವರಿಗೆ  ಟಿಕೆಟ್ ಕೊಟ್ಟಿದ್ದೀರಿ ಅಂತಾ ಯೋಚನೆ ಮಾಡಲಿ ಎಂದು ಕಿಡಿಕಾರಿದ್ದಾರೆ.

ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳರನ್ನ ಕಾಂಗ್ರೆಸ್ ನವರು ಖರೀದಿ ಮಾಡಿದ್ದಾರೆ ಎನ್ನುವ ಎನ್ ರವಿಕುಮಾರ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖರ್ಗೆ ವಿಶ್ವನಾಥ್ ಪಾಟೀಲ್ ಅವರ ಕಾಲು ಧೋಳಿನಷ್ಟು ಅನುಭವ  ರವಿಕುಮಾರ್ ಗೆ ಇಲ್ಲ. ವಿಶ್ವನಾಥ್ ಪಾಟೀಲ್ ಅವರನ್ನ ಖರೀದಿ ಮಾಡಿದ್ದೀವಿ ಎಂದು ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರೀದಿ ಆಗ್ತಾರೆ ಅಂತಾ ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರು ಇಲ್ಲ. ರವಿಕುಮಾರ್ ಗ್ರಾಂಮ ಪಂಚಾಯತ್ ಕೂಡ ಗೆಲ್ಲೊಕೆ ಆಗೋದಿಲ್ಲ ಎಂದರು.

ಏನಿದು ಮಣಿಕಂಠ ಆಡಿಯೋ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬದ ಸದಸ್ಯರನ್ನು ಸಾಫ್ ಮಾಡ್ತೇನೆ" ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹತ್ಯೆಯ ಬೆದರಿಕೆ ಒಡ್ಡಿದ ಆಡಿಯೋ ವೈರಲ್ ಆಗಿತ್ತು.

ನನ್ನನ್ನು ಸೋಲಿಸಲು ಇದೇನು ಗುಜರಾತ್‌ ಅಲ್ಲ: ಜಗದೀಶ್‌ ಶೆಟ್ಟರ್‌ ಕಿಡಿ

ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ. ಖರ್ಗೆ ಮತ್ತವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಅವರು ಬಿಜೆಪಿ ಮುಖಂಡರೊಬ್ಬರ ಜತೆ ಮಾತನಾಡಿರುವ ಆಡಿಯೊವನ್ನು ಶನಿವಾರ (ಮೇ 6) ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ ಮಣಿಕಂಠ ರಾಠೋಡ್ ವಿರುದ್ಧ ದೂರು ನೀಡಿದೆ.

ಐಟಿ ದಾಳಿ ಬೆನ್ನಲ್ಲೇ ಖರ್ಗೆ ಪತ್ರಿಕಾಗೋಷ್ಠಿ, ಕಾಂಗ್ರೆಸ್ ಸೇರಿ ಎರಡೇ ವಾರಕ್ಕೆ ಚವ್ಹಾಣ್‌ ಅಕ್ರಮ ಆಸ್ತಿ ಮಾಡಿದ್ರಾ?

ಈ ಆಡಿಯೋದಲ್ಲಿ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ ಸೇರಿ ಇನ್ನಿತರ ಹೆಸರನ್ನು ಕೂಡ ಹೇಳಲಾಗಿದ್ದು, ಅವರಿಗೂ ಜೀವ ಬೆದರಿಕೆ ಇದೆ ಎನ್ನಲಾಗಿದೆ. 

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!