ಜನಾರ್ದನದಲ್ಲಿ ಸಿದ್ದರಾಮಯ್ಯ ದೋಸೆ ತಿನ್ನುವುದನ್ನು ಬಿಡಲು ಕಾರಣವೇನು?

By Suvarna NewsFirst Published Sep 15, 2021, 6:05 PM IST
Highlights

* ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ವಾಗ್ದಾಳಿ
* ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಿ
* ಬಾಂಡ್ ನಿಂದ ಹೆಚ್ಚಳವಾಗಿದೆ ಎಂದು ಸುಳ್ಳು ಹೇಳುತ್ತಿದ್ದೀರಾ?
* ಗೃಹ ಸಚಿವರಿಗೆ ಸಿದ್ದರಾಮಯ್ಯ ಹೋಂ ವರ್ಕ್

ಬೆಂಗಳೂರು(ಸೆ. 15)  ವಿಧಾನಸಭೆ ಕಲಾಪ ಹಲವು ರೋಮಾಂಚನಕರಿ ಅಂಶಗಳಿಗೆ ಸಾಕ್ಷಿಯಾಯಿತು. ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

ಈ ವೇಳೆ  ಸಿದ್ದರಾಮಯ್ಯ ಕಾಲೆಳದ ಸಚಿವ ಮಾಧುಸ್ವಾಮಿ , ಆಯಿಲ್ ಬಾಂಡ್ ರಾಜ್ಯ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರದ್ದು.. ಸಿದ್ದರಾಮಯ್ಯ ಅವರು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಬಗ್ಗೆ ಮಾತಾಡ್ತಾರೆ. ರಾಜ್ಯಕ್ಕೂ ಇದಕ್ಕೂ ಸಂಬಂಧವಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಪಾರ್ಲಿಮೆಂಟ್ ಗೆ ಹೋಗಿದ್ದೇನೆ ಅಂದ್ಕೊಂಡಿದ್ದಾರೆ ಎಂದರು.

ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯ ಅವರನ್ನ ಪಾರ್ಲಿಮೆಂಟ್ ಗೆ ಕಳಿಸಬೇಕು ಅಂತಿದ್ದೀರಾ‌?  ಎಂದಾಗ ಸಿದ್ದರಾಮಯ್ಯ ಅವರು ಇಲ್ಲೇ ಇರಬೇಕು ಎಂದು ಅಶೋಕ್ ಹೇಳಿದರು. ಬೇಡ..  ದೆಹಲಿಗೆ ಹೋಗಬೇಕು ಎಂದು ಮಾಧುಸ್ವಾಮಿ ಮತ್ತೊಮ್ಮೆ ಹೇಳಿದರು. 

ಈಶ್ವರಪ್ಪ ಅವರನ್ನ ಬಿಟ್ಟು ನಾನು ದೆಹಲಿಗೆ ಹೋಗಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ ಮಾತು ಮುಂದುವರಿಸಿದರು. ನಾನು ಪಾರ್ಲಿಮೆಂಟ್ ಗೆ ಹೋಗಲು ಟ್ರೈ ಮಾಡಿದ್ದೆ.. ಆದ್ರೆ ಜನ ಸೋಲಿಸಿದ್ರು. ಇನ್ಮುಂದೆ ಆಗಲ್ಲ.. ಹೆಚ್ಚಂದರೆ ಇನ್ನೊಂದು ಎಲೆಕ್ಷನ್ ಸ್ಪರ್ಧೆ ಮಾಡಬಹುದು ಅಷ್ಟೇ ಎಂದರು.

ವಾಜಪೇಯಿ ಮಾತುಗಳನ್ನು ಉಲ್ಲೇಖಿಸಿ ಸರ್ಕಾರದ ಮೇಲೆ ಸಿದ್ದು ಚಾಟಿ

ತಮಿಳುನಾಡು ಸಿಎಂ ಶೇ. 3 ತೆರಿಗೆ ಕಡಿತ ಮಾಡಿದ್ದಾರೆ. ನೀವು ರಾಜ್ಯದಲ್ಲಿ ಯಾಕೆ ಕಡಿಮೆ ಮಾಡ್ತಿಲ್ಲ? 24 ಲಕ್ಷ ಕೋಟಿ ತೆರಿಗೆಯಿಂದ ಬಂದಿದೆ. ಅದರಲ್ಲಿ 1.40 ಲಕ್ಷ ಕೋಟಿ ಬಾಂಡ್ ಅಷ್ಟೆ. ಕಳೆದ ಏಳು ವರ್ಷದಲ್ಲಿ ಇಷ್ಟು ಕಲೆಕ್ಟ್ ಆಗಿದೆ. ರಾಜ್ಯದಿಂದಲೇ ಒಂದು ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಬಾಂಡ್ ತೀರಿಸೋಕೆ ರೇಟ್ ಜಾಸ್ತಿ ಅಂತೀರಾ?  24 ಲಕ್ಷ ಕೋಟಿಯಲ್ಲಿ 1 ಲಕ್ಷ ಕೋಟಿ ತೀರಿಲ್ವೇ ಎಂದು ಪ್ರಶ್ನೆ ಮಾಡಿದರು.

ಪೆಟ್ರೋಲ್ ಸೆಸ್ 32.98 ರೂ.  ಹಾಕಿದ್ದೀರ. ಇದರಲ್ಲಿ 20 ರೂ.ಕಡಿಮೆ ಮಾಡಿ ಪೆಟ್ರೋಲ್ ನಿಜವಾದ ಬೆಲೆ 38 ರೂಪಾಯಿ ಅಷ್ಟೇ. ನಿಮ್ಮ ಎಲ್ಲಾ ತೆರಿಗೆ ಸೇರಿ 67ರೂ. ಇದೆ. ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಿಂದ ಎಲ್ಲ ಬೆಲೆ ಹೆಚ್ಚಳವಾಗಿದೆ ಎರಡು ಇಡ್ಲಿವಡೆಗೆ 39 ರೂಪಾಯಿ ಕೊಡಬೇಕು. ಬರೀ ಇಡ್ಲಿ ವಡೆಗೆ ಇಷ್ಟು ಹೆಚ್ಚಾಗಿದೆ. ಪೆಟ್ರೋಲ್,ಗ್ಯಾಸ್ ಬೆಲೆ ಹೆಚ್ಚಳದಿಂದ ಇದು ಆಗಿದೆ. ಸಾಗಾಣಿಕೆ,ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ನಾನು ಜನಾರ್ದನ ಹೊಟೇಲ್ ಗೆ ದೋಸೆ ತಿನ್ನಲು‌ಹೋಗ್ತಿದ್ದೆ. ಒಂದು ದೋಸೆ ಬೆಲೆ 100 ರೂ ಆಗಿದೆ. ನಾನು ದೋಸೆ ತಿನ್ನುವುದನ್ನೇ ಕಡಿಮಾಡಿದೆ. ಇದನ್ನ ನೀವು ಡಿಫೆಂಡ್ ಮಾಡಿಕೊಳ್ತೀರಾ ಎಂದರು.

ಮಸಾಲೆ ದೋಸೆಗೆ ಮಾರುಹೋದ ಬ್ರಿಟಿಷ್ ಕಮಿಷನರ್

ದರ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಗೆ ಕೇಳಿ ಗೊತ್ತಾಗುತ್ತೆ!  ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಸಿದ್ದರಾಮಯ್ಯ ಕಿಚಾಯಿಸಿದರು. ಜನವರಿಯಲ್ಲಿ ಕಾಫಿ 15 ಇತ್ತು ಇವಾಗ 30 ಆಗಿದೆ ಎನ್ನುತ್ತಾ ಹೋದರು.

ಈ ವೇಳೆ, ಎಲ್ಲದಕ್ಕೂ ಡೀಸೆಲ್ ಪೆಟ್ರೋಲ್ ಕಾರಣವಾ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು..ಹೌದು ಡೀಸೆಲ್ ದರ ಏರಿಕೆ ಕಾರಣ ಎಂದ‌ ಸಿದ್ದರಾಮಯ್ಯ  ಡೀಸೆಲ್ ದರ ಹೆಚ್ಚಾದರೆ ಸಾಗಣಿಕೆ ದರ ಹೆಚ್ಚಾಗುತ್ತೆ, ಗ್ಯಾಸ್ ದರ ಹೆಚ್ಚಳವಾಗಿದೆ ದರ ಡಬಲ್ ಆಗಿರುವುದು ಸುಳ್ಳಾ? ಎಂದು ಸಿದ್ದರಾಮಯ್ಯ ಮತ್ತೆ ಕೇಳಿದರು.

ನೀವು ಮನೆಗೆ ಒಂದಿಷ್ಟು ದುಡ್ಡು ಕೊಡ್ತೀರಾ ಅನಿಸುತ್ತೆ. ಮಹಿಳೆಯರ ಕಷ್ಟ ಅರ್ಥವಾಗಲ್ಲ ನಿಮಗೆ. ಒಂದು ಬಾರಿ ನಿಮ್ಮ ಮನೆಯ ಹತ್ತಿರ ಕೇಳ್ಕೊಂಡು ಬಂದು ನಾಳೆ ಹೇಳಿ ಎಂದು ಹೋಮ್ ಮಿನಿಸ್ಟರ್ ಗೆ ಹೋಮ್ ವರ್ಕ್ ಕೊಟ್ಟರು.

 

 

click me!