ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಲ್ಲಿ ಜನಪರವಾದಂತಹ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ಬಿಜೆಪಿ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಅವರ ಸಾಧನೆಯಾಗಿದೆ ಎಂದು ಮಾಜಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಬೀಳಗಿ (ಏ.10) : ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಲ್ಲಿ ಜನಪರವಾದಂತಹ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ಬಿಜೆಪಿ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಅವರ ಸಾಧನೆಯಾಗಿದೆ ಎಂದು ಮಾಜಿ ಶಾಸಕ ಜೆ.ಟಿ.ಪಾಟೀಲ(GT Patil) ಹೇಳಿದರು.
ತಾಲೂಕಿನ ಕೊಪ್ಪ (ಎಸ್.ಕೆ.) ಗ್ರಾಮದಲ್ಲಿ ವಿವಿಧ ಪಕ್ಷಗಳಿಂದ ಬಂದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಸಿದ್ದರಾಮಯ್ಯ(Siddaramaiah) ಸರ್ಕಾರ ಹಿಂದುಳಿದವರ ಪರ ನಿಂತು ಅನೇಕ ಯೋಜನೆಗಳನ್ನು ಜಾರಿ ಮಾಡಿತು. ಬಡವರ ಅಭಿವೃದ್ಧಿಗಾಗಿ ಶ್ರಮಿಸಿತು. ಆದರೆ, ಬಿಜೆಪಿ ಅವಧಿಯಲ್ಲಿ ಪೆಟ್ರೋಲ್, ಡಿಸೈಲ್, ರಸಗೊಬ್ಬರ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದೆ ಎಂದು ಹೇಳಿದರು.
undefined
ಹೋಟೆಲ್ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ಗೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ
್ನ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮತ್ತಷ್ಟುಜನಪರ ಯೋಜನೆಗಳನ್ನು ಜರಿಗೊಳಿಸಲಾಗುತ್ತದೆ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ಗೆ ನೀಡಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಸೇರ್ಪಡೆ:
ವಾಲ್ಮೀಕಿ ಸಮಾಜದ ಮುಖಂಡ ಸುಭಾಸ ಹೊಸಕೋಟಿ, ಓಂಕಾರಯ್ಯ ಬಟಕುರ್ಕಿ, ರೈತ ಮುಖಂಡ ಎಸ್.ವಿ.ಜೀರಗಾಳ, ಈರಪ್ಪ ಮಲಘಾಣ, ಲಚ್ಚಪ್ಪ ಜೀರಗಾಳ, ವೆಂಕಪ್ಪ ಹಲಗಲಿ, ಲಚ್ಚಪ್ಪ ಮುಚ್ಚಳಗುಡ್ಡ, ರಾಮಣ್ಣ ಕಗಲಗೊಂಬ, ತಿಮ್ಮಣ್ಣ ಬೂದಿಹಾಳ, ಸೋಮಲಿಂಗ ಮುಚ್ಚಳಗುಡ್ಡ ಸೇರಿದಂತೆ 45ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಬಿಜೆಪಿ ಸರ್ಕಾರ ಪತನಗೊಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ: ಸತೀಶ್ ಜಾರಕಿಹೊಳಿ
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ಮಲ್ಲಪ್ಪ ಕೌಜಲಗಿ, ಎಲ್.ಜಿ.ಮಲಘಾಣ, ರುದ್ರಗೌಡ ಪಾಟೀಲ, ಹೊಳಬಸಯ್ಯ ಲಿಂಗದಮಠ, ಮಲ್ಲು ಹೋಳಿ, ಚಿದಾನಂದ ನಂದ್ಯಾಳ, ಬಸವರಾಜ ಹಳ್ಳದಮನಿ, ಶಿವಾನಂದ ಮಾದರ, ಮಹಾದೇವ ಅಸೋದಿ, ಪಿ.ಬಿ.ಮೇಟಿ, ಹನಂತ ನಾಯ್ಕರ, ಪೀರಸಾಬ್ ನದಾಫ, ಅಶೋಕ ವಜ್ಜರಮಟ್ಟಿ, ಕೆ.ಬಿ.ಮಲಘಾಣ, ಹನಮಂತ ಅಸೋದಿ, ವಿಠ್ಠಲ ಕಂಬಾರ, ಸದಾಶಿವ ಜುಂಜೂರಿ, ಶ್ರೀಶೈಲ ಜೋಗೆನ್ನವರ ಮತ್ತಿತರಿದ್ದರು.