ಅರಕಲಗೂಡು (ಡಿ.17) : ಮಾಜಿ ಸಚಿವ ಎ.ಮಂಜು ಅವರು ಹಾಸನ (Hassan) ಶಾಸಕ ಪ್ರೀತಂ ಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಡಿಕೇರಿಯಲ್ಲಿ ನನ್ನ ಮಗನ ಸೋಲಿಗೆ ಹಾಸನ ಶಾಸಕ ಪ್ರೀತಂ ಗೌಡರೇ ಕಾರಣ. ಅವರಿಂದಾಗಿ ನನ್ನ ಕುಟುಂಬದಲ್ಲೀಗ ಒಡಕು ಮೂಡಿದೆ ಎಂದು ಎಂದು ಎ.ಮಂಜು (A Manju) ಆರೋಪಿಸಿದ್ದಾರೆ. ಹಾಸನದಿಂದ ಪರಿಷತ್‌ಗೆ ನನ್ನ ಮಗ ಮಂಥರ್ ಗೌಡರಿಗೆ ಟಿಕೆಟ್ (Ticket) ಕೊಡಿ ಎಂದು ನಾನು ಯಾವತ್ತೂ ಕೇಳಿರಲಿಲ್ಲ. ಬಿಜೆಪಿಯವರೇ (BJP) ಟಿಕೆಟ್ ಕೊಡುವುದಾಗಿ ಹೇಳಿದ್ದರು. ನಂತರ ಇದೇ ವಿಚಾರವಾಗಿ ಪ್ರೀತಂ ಗೌಡ ತಮ್ಮ ಬೆಂಬಲಿಗ ಕ್ವಾಲಿಟಿ ಬಾರ್ ಶರತ್‌ನನ್ನು ಮಂಥರ್ ಗೌಡನ ಬಳಿ ಕಳುಹಿಸಿ ಹಾಸನದಿಂದ ಸ್ಪಧಿರ್ಸಬೇಡ ಎಂದೂ ಹೇಳಿ ಕಳುಹಿಸಿದ್ದರು. ಟಿಕೆಟ್ ಕೈತಪ್ಪಿದ ವಿಚಾರ ನಮ್ಮ ಕುಟುಂಬದಲ್ಲಿ ಸಮಸ್ಯೆಗೆ ಕಾರಣವಾಗಿದೆ. ನಿಮ್ಮ ಪಕ್ಷದವರು ಈ ರೀತಿ ಹೇಳುತ್ತಾರೆ, ‘ಡ್ಯಾಡಿ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ’ ಎಂದು ನನ್ನ ಮಗ ನನ್ನ ಬಗ್ಗೆಯೇ ಅಸಮಾಧಾನಗೊಂಡಿದ್ದಾನೆ. ಆದರೆ ಕಾಂಗ್ರೆಸ್ ಪಕ್ಷ ಮಂಥರ್ ಗೌಡರನ್ನು ಗುರುತಿಸಿ ಕೊಡಗಿನಲ್ಲಿ ಟಿಕೆಟ್ ನೀಡಿತು ಎಂದರು.
ಮತದಾರರು ಸರ್ಕಾರದ ಪರ ಮತ ಚಲಾಯಿಸಿ ಬಿಜೆಪಿ (BJP) ಗೆದ್ದಿದೆಯಾದರೂ, ಕೇವಲ 15 ದಿನಗಳಲ್ಲಿ ಕಾಂಗ್ರೆಸ್ ಉತ್ತಮ ಪೈಪೋಟಿ ಇದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ (Congress) ಪರ ಅಲೆ ಇದೆ ಎಂಬುದರ ದಿಕ್ಸೂಚಿ ಎಂದರು. ಇದೇ ವೇಳೆ ಹಾಸನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಸೋಲಲು ನಾಯಕತ್ವ ಕೊರತೆಯೇ ಕಾರಣ ಎಂದೂ ಎ.ಮಂಜು ಆರೋಪಿಸಿದ್ದಾರೆ.
undefined
ಶಿಸ್ತು ಕ್ರಮಕ್ಕೆ ವ್ಯಂಗ್ಯ: ನನ್ನ ವಿರುದ್ದ ಬಿಜೆಪಿ ಅಧ್ಯಕ್ಷರು ಶಿಸ್ತು ಕ್ರಮ ಕೈಗೊಂಡು ಷೋಕಾಸ್ ನೋಟೀಸ್ ನೀಡಿರುವ ಬಗ್ಗೆ ವ್ಯಂಗ್ಯವಾಡಿ, ನಾನು ಯಾವುದೇ ಪಕ್ಷ ವಿರೋಧಿ ಕೆಲಸವನ್ನೂ ಮಾಡಿಲ್ಲ. ಯಾರೋ ಹೇಳಿದ ಮಾತುಗಳಿಗೆ ಅಧ್ಯಕ್ಷರು ಈ ರೀತಿ ಮಾಡಿರಬಹುದು. ಪರಿಷತ್ ಚುನಾವಣೆಯಲ್ಲಿ (MLC Election) ತಟಸ್ಥ ನೀತಿ ಅನುಸರಿಸಿದ್ದೇನೆ. ನಾನು ಹಾಸನದಲ್ಲಾಗಲಿ, ಕೊಡಗಿನಲ್ಲಾಗಲಿ ಯಾರ ಪರವೂ ಕೆಲಸ ಮಾಡಲಿಲ್ಲ. ನಾನು ಈಗಲೂ ಬಿಜೆಪಿಯಲ್ಲಿ ಇದ್ದೇನೆ ಎಂದೆನಿಸುತ್ತಿದೆ. ಆದರೆ ಪಕ್ಷದವರು ಏನನ್ನುತ್ತಾರೋ ನೋಡಬೇಕು ಎಂದರು.
ನನ್ನ ಮೇಲೇ ಶಿಸ್ತು ಕ್ರಮ ಕೈಗೊಂಡ ಬಳಿಕ ರವಿ ಕುಮಾರ್ ಬಿಟ್ಟು ಮತ್ತ್ಯಾರು ನನ್ನ ಬಳಿ ಮಾತನಾಡಿಲ್ಲ. ನನಗೆ ಶೋಕಾಸ್ ನೋಟಿಸ್ ನೀಡಲು ಆತನಿಗೆ ಅಧಿಕಾರವೇ ಇಲ್ಲ. ನನಗೆ ಶೋಕಾಸ್ ನೋಟೀಸ್ ನೋಡುವುದಕ್ಕೆ ಅವನ್ಯಾರು ಎಂದು ಗರಂ ಆದರು.
650 ಇದ್ದದ್ದು 50ಕ್ಕಿಳಿದಿದೆ: ನನಗೆ ಬಿಜೆಪಿಯಲ್ಲಿ ಮಂಡ್ಯ (Mandya) ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಅದೊಂದು ಹುದ್ದೆ ಬಿಟ್ಟರೆ ಮತ್ತಾತ್ರ್ಯವ ಹುದ್ದೆಯೂ ಇರಲಿಲ್ಲ. ನಾನು ಉಸ್ತುವಾರಿ ವಹಿಸಿದ್ದ ವೇಳೆ 650 ಗ್ರಾಪಂ ಸದಸ್ಯರು ನಮ್ಮೊಂದಿಗಿದ್ದರು. ಇಂದು ಅದು 50ಕ್ಕಿಳಿದಿದೆ. ಇದರಿಂದಲೇ ಪಕ್ಷದ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ವೇಳೆ ನನಗೆ ನೀಡಿದ್ದ ಹುದ್ದೆಯಿಂದ ಬಿಡುಗಡೆಗೊಳಿಸಿ ವಾಟ್ಸಪ್ ಮೂಲಕ ನೋಟಿಸ್ ನೀಡಲಾಗಿತ್ತು. ಇದು ನನಗೆ ಮಾನಸಿಕವಾಗಿ ನೋವುಂಟುಮಾಡಿತು ಎಂದರು.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡಬೇಕೋ, ಬೇಡವೋ ಎನ್ನುವುದನ್ನು ನಿರ್ಧಾರ ಮಾಡುವುದು ಪಕ್ಷದ ವರಿಷ್ಠರು. ಇಂಥ ಅಭ್ಯರ್ಥಿಗೆ ಟಿಕೆಟ್ ಕೊಡಿ ಅಥವಾ ಕೊಡಬೇಡಿ ಎನ್ನುವ ಶಿಫಾರಸ್ಸಿನ ಮೇಲೆ ವರಿಷ್ಠರು ಟಿಕೆಟ್ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ. ಪರಿಸ್ಥಿತಿ ಹೀಗಿರುವಾಗ ಎ.ಮಂಜು ಅವರ ಆರೋಪದಲ್ಲಿ ಯಾವುದೇ ಅರ್ಥವಿಲ್ಲ.
ಪ್ರೀತಂ ಗೌಡ, ಹಾಸನ ಶಾಸಕ
ಹಾಸನದಲ್ಲಿ (Hassan) ನಡೆದ ಪಕ್ಷದ ಸಭೆಯಲ್ಲಿ ಶಾಸಕ ಪ್ರೀತಂ ಗೌಡ ಅವರು ಮಂಥರ್‌ಗೌಡ ಪರ .5 ಕೋಟಿ ಬಂಡವಾಳ ಹಾಕುವುದಾಗಿ ಹೇಳಿದ್ದರು. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ರನ್ನೇ ಕೇಳಿ ಎಂದ ಮಂಜು, ಆ ಬಳಿಕ ಮಂತ್ರಿ ಸ್ಥಾನ ಸಿಕ್ಕಿದರೆ ಮಾತ್ರ ಬೆಂಬಲ ನೀಡೋಣ ಅಂತಿದ್ದೆ ಎಂದು ಸಮುಜಾಯಿಶಿ ನೀಡಿದ್ದರು.