ಯಾವುದೇ ಸಂದರ್ಭದಲ್ಲಿ ನನ್ನನ್ನ ಚರ್ಚೆಗೆ ಕರೆಯಲಿ: ಪ್ರತಾಪ್‌ ಸಿಂಹ

By Govindaraj S  |  First Published Jun 16, 2022, 12:48 PM IST

ಸಿದ್ದರಾಮಯ್ಯ ಮತ್ತು ಡಾ.ಎಚ್‌.ಸಿ. ಮಹದೇವಪ್ಪ ಯಾವುದೇ ಸಂದರ್ಭದಲ್ಲಿ ನನ್ನನ್ನ ಚರ್ಚೆಗೆ ಕರೆಯಲಿ. ನಾನು ಚರ್ಚೆಗೆ ಸಿದ್ಧ ಎಂದು ಸಂಸದ ಪ್ರತಾಪ್‌ ಸಿಂಹ ಪಂಥಾಹ್ವಾನ ನೀಡಿದರು. 


ಮೈಸೂರು (ಜೂ.16): ಸಿದ್ದರಾಮಯ್ಯ ಮತ್ತು ಡಾ.ಎಚ್‌.ಸಿ. ಮಹದೇವಪ್ಪ ಯಾವುದೇ ಸಂದರ್ಭದಲ್ಲಿ ನನ್ನನ್ನ ಚರ್ಚೆಗೆ ಕರೆಯಲಿ. ನಾನು ಚರ್ಚೆಗೆ ಸಿದ್ಧ ಎಂದು ಸಂಸದ ಪ್ರತಾಪ್‌ ಸಿಂಹ ಪಂಥಾಹ್ವಾನ ನೀಡಿದರು. ಮೈಸೂರು ಅಭಿವೃದ್ಧಿ ಕಾರ್ಯದ ಬಗ್ಗೆ ಕಾಂಗ್ರೆಸ್‌ನಿಂದ ಬಹಿರಂಗ ಚರ್ಚೆಗೆ ತಮಗೆ ಆಹ್ವಾನ ವಿಚಾರಕ್ಕೆ ಬುಧವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ದಂಡು ದಾಳಿ ಸಮೇತ ಬರಲಿ. ನಾನು ಒಬ್ಬನೇ ಬರುತ್ತೇನೆ. 48 ಗಂಟೆ ಮುಂಚಿತವಾಗಿ ನನಗೆ ಸ್ಥಳ, ಸಮಯ ತಿಳಿಸಿದರೆ ಸಾಕು. ನಾನು ಚರ್ಚೆಗೆ ಸಿದ್ಧ. ನಿಮ್ಮ ಪಂಥಾಹ್ವಾನವನ್ನ ಸ್ವೀಕರಿಸಿದ್ದೇನೆ ಬನ್ನಿ ಚರ್ಚೆಗೆ ಎಂದು ಸವಾರು ಹಾಕಿದರು.

ನೀವು ಚರ್ಚೆಗೆ ಬರುವುದು ಬಿಟ್ಟು, ಗ್ರಾಮ ಪಂಚಾಯಿತಿ ಗೆಲ್ಲದ ವಕ್ತಾರನ್ನು ಕಳುಹಿಸುತ್ತೇನೆಂದರೆ ಹೇಗೆ? ಸಿದ್ದರಾಮಯ್ಯನವರೇ ವೀರ, ಶೂರರು ಆನೆ, ಕುದುರೆ ಏರಿ ಯುದ್ಧಕ್ಕೆ ಬರುತ್ತಾರೆ. ನೀವೇನು ಹಂದಿ, ಕತ್ತೆ ಏರಿ ಯುದ್ಧಕ್ಕೆ ಬರುತ್ತೀನಿ ಎನ್ನುತ್ತೀರಾ? ನನ್ನ ಜೊತೆ ಚರ್ಚೆ ಮಾಡಲು ನಿಮಗೆ ಬಾಯಿ ಬಿದ್ಧು ಹೋಗಿದೆಯಾ? ವೇದಿಕೆಗಳಲ್ಲಿ ಗಂಟೆ ಗಂಟೆಲೇ ಪುಂಖಾನುಪುಂಖ ಭಾಷಣ ಮಾಡುತ್ತೀರಾ? ಖಾಲಿ ಕುಳಿತಿರುವ ಡಾ.ಎಚ್‌.ಸಿ. ಮಹದೇವಪ್ಪ ಫೇಸ್‌ಬುಕ್‌ನಲ್ಲಿ ಉದ್ದ ಉದದ್ದ ಪೋಸ್ಟ್‌ ಹಾಕುತ್ತಾರೆ. ನನ್ನ ಜೊತೆ ಚರ್ಚೆಗೆ ಬರಲು ಏನು ಕಷ್ಟಎಂದು ಅವರು ಪ್ರಶ್ನಿಸಿದರು.

Latest Videos

undefined

ಕಾಂಗ್ರೆಸ್‌ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಅಂಗವೆಂದು ಭಾವಿಸಿದೆ: ಪ್ರತಾಪ್‌ ಸಿಂಹ

ಜಯ, ವಿಜಯರ ಥರ ನೀವು ಮೈಸೂರು ಭಾಗದಲ್ಲಿದೀರ. ಬನ್ನಿ ನನ್ನ ಜೊತೆ ಚರ್ಚೆಗೆ. ನನ್ನ ಜೊತೆ ಚರ್ಚೆ ಮಾಡಲು ನಿಮಗೆ ನಮ್ಮ ಅಹಂ ಅಡ್ಡ ಬರುತ್ತಿದ್ದೀಯಾ? ಅಥವಾ ನನ್ನ ಜೊತೆ ಚರ್ಚೆಗೆ ಭಯನಾ? ಮೈಸೂರಿಗೆ ಬಾಡೂಟಕ್ಕೆ, ಬೀಗರೂಟಕ್ಕೆ ವಾರಕ್ಕೆ ಎರೆಡು ಬಾರಿ ಸಿದ್ದರಾಮಯ್ಯ ಬರುತ್ತಾರೆ. ಅದೇ ಟೈಂನಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಚರ್ಚೆಗೆ ಬನ್ನಿ ಎಂದು ಅವರು ಆಹ್ವಾನಿಸಿದರು. ನೀವು ಮಾಡಿರುವ ಅಭಿವೃದ್ಧಿ ಕಾರ್ಯವನ್ನ ಹೇಳಿಕೊಳ್ಳಕ್ಕೆ ಭಯ ಏಕೆ? ಪಾಯಿಂಟ್‌ ಟು ಪಾಯಿಂಟ್‌ ಚರ್ಚೆ ಮಾಡುತ್ತೇನೆ ಬನ್ನಿ. ನೀವು ವಕ್ತಾರರನ್ನ ಚರ್ಚೆಗೆ ಕಳುಹಿಸುವುದಾದರೇ, ನಾನು ನಮ್ಮ ಪಕ್ಷದ ತಾಲೂಕು ವಕ್ತಾರರನ್ನೇ ನಾನು ಕಳುಹಿಸುತ್ತೇನೆ ಎಂದು ಅವರು ತಿಳಿಸಿದರು.

ದೇಶದ ಕಾನೂನು ಎಲ್ಲರಿಗೂ ಒಂದೇ: ರಾಹುಲ್‌ ಗಾಂಧಿಗೆ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಇಡಿ ತನಿಖೆಗೆ ಕರೆದಿದೆ. ತನಿಖೆಯನ್ನ ಕಾಂಗ್ರೆಸ್‌ ನಾಯಕರು ಎದುರಿಸಲಿ. ಹಿಂದೆ ಮೋದಿ ಸಿಎಂ ಆಗಿದ್ದಾಗಲೂ ವಿಚಾರಣೆ ಎದುರಿಸಿದ್ದರು. ಅಮಿತ್‌ ಶಾ ಅವರು ಕೂಡ ಒಂದು ಪ್ರಕರಣದಲ್ಲಿ ಕಾಂಗ್ರೆಸ್‌ ಫಿಟ್‌ ಮಾಡಿ ಜೈಲಿಗೆ ಕಳುಹಿಸಿತ್ತು. ಅದನ್ನೆಲ್ಲಾ ಎದುರಿಸಿ ನ್ಯಾಯಾಲಯದಲ್ಲಿ ಗೆದ್ದು ಬಂದರು. ಇವರು ತಪ್ಪು ಮಾಡಿಲ್ಲಾ ಎನ್ನುವುದಾದರೆ ಅದನ್ನ ತನಿಖೆಯಲ್ಲಿ ಹೇಳಲಿ. ಈ ನೆಲದ ಕಾನೂನಿಗೆ ಯಾರು ದೊಡ್ಡವರಲ್ಲ, ಯಾರು ಚಿಕ್ಕವರು ಅಲ್ಲ ಎಂದರು.

ನಾನು ಸಿದ್ದರಾಮಯ್ಯ ಅವರನ್ನ ವೈಯಕ್ತಿಕವಾಗಿ ಟೀಕಿಸಿದ್ದೇನೆ: ವಕೀಲರಿಗೆ ಅವಮಾನ ಮಾಡಿದ್ದಾರೆಂಬ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್‌ ಸಿಂಹ ಅವರು, ನಾನು ಸಿದ್ದರಾಮಯ್ಯ ಅವರನ್ನ ವೈಯಕ್ತಿಕವಾಗಿ ಟೀಕಿಸಿದ್ದೇನೆ. ನೀವು ಆರ್ಥಿಕ ತಜ್ಞರಲ್ಲ. ನೀವು ಬರಿ ಎಲ್‌ಎಲ್‌ಬಿ ಲಾ ಪ್ರಾಕ್ಟೀಸ್‌ ಮಾಡಿರುವ ವ್ಯಕ್ತಿ ಎಂದು ಹೇಳಿದ್ದೇನೆ. ಇದರಲ್ಲಿ ವಕೀಲರ ಸಮೂಹಕ್ಕೆ ಅವಮಾನ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತೆ? ನನ್ನನ್ನು ನೀನು ಆರ್ಥಿಕ ತಜ್ಞ ಅಲ್ಲ, ಬರಿ ಅಂಕಣಕಾರ ಎಂದರೆ ಅದು ಪತ್ರಕರ್ತರಿಗೆ ಮಾಡಿದ ಅವಮಾನಾನ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಬಜೆಟ್‌ ಮಂಡಿಸಿ ಜಂಭದ ಕೋಳಿ ಥರ ಓಡಾಡುತ್ತಿದ್ದರು. 

ಯೋಗದಲ್ಲೂ ರಾಜಕಾರಣ: ಮಾಧ್ಯಮಗಳ ಮುಂದೆಯೇ ಪ್ರತಾಪ್ ಸಿಂಹ- ರಾಮದಾಸ್ ಜಟಾಪಟಿ

ಅವರಿಗೆ ಆರ್ಥಿಕತೆಯ ಸಂಪೂರ್ಣ ಜ್ಞಾನ ಇಲ್ಲ ಎಂದು ಹೇಳಿದ್ದೇನೆ. ಬಜೆಟ್‌ ಮಂಡಿಸಿದ ಮುಖ್ಯಮಂತ್ರಿಗಳೆಲ್ಲಾ ನಾನು ಆರ್ಥಿಕ ತಜ್ಞರೆಂದು ಹೇಳಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಿಂದ ಬಜೆಟ್‌ ಸಿದ್ಧ ಮಾಡುತ್ತಿರುವವರು ಹಿರಿಯ ಐಎಎಸ್‌ ಅಧಿಕಾರಿ ಎ.ಎನ್‌.ಎಸ್‌. ಪ್ರಸಾದ್‌. ಅವರು ಬರೆದು ಕೊಟ್ಟಿದ್ದನ್ನ ಮುಖ್ಯಮಂತ್ರಿಗಳು ಓದುತ್ತಾರೆ. ಇದನ್ನೇ ಸಿದ್ದರಾಮಯ್ಯನವರು ನಾನು ಆರ್ಥಿಕ ತಜ್ಞ ಎಂಬ ರೀತಿ ಹೇಳಿಕೊಳ್ಳುತ್ತಾರೆ. ಇದನ್ನೇ ನಾನು ಪ್ರಶ್ನೆ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ಕಾಂಗ್ರೆಸ್‌ನವರು ಚಡ್ಡಿ ಸುಟ್ಟರು. ಈಗ ನನ್ನ ಪೋಸ್ಟರ್‌ ಸುಡುತ್ತಿದ್ದಾರೆ, ಸುಡಲಿ ಬಿಡಿ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದೆ ಈ ರೀತಿ ವಿಚಾರ ತಿಳಿದು ವಿವಾದ ಮಾಡುತ್ತಾರೆ, ಮಾಡಲಿ ಎಂದು ಅವರು ತಿಳಿಸಿದರು.

click me!