ಅಪ್ರಸ್ತುತ ಪ್ರಶ್ನೆಗಳೊಂದಿಗೆ ರಾಜ್ಯದಲ್ಲಿ ಜಾತಿಗಣತಿ: ಸಿದ್ದು ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ

Published : Oct 02, 2025, 11:10 AM IST
Pralhad joshi

ಸಾರಾಂಶ

ರಾಜ್ಯದಲ್ಲಿ ಜಾತಿಗಣತಿ ಮಾಡೋದು ಅವಶ್ಯಕತೆ ಇರಲಿಲ್ಲ. ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡಲಾಗುವುದು ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರ ಇರ್ರರೆಲಿವೆಂಟ್ ಪ್ರಶ್ನೆಗಳನ್ನ ಇಟ್ಟುಕ್ಕೊಂಡು ಗಣತಿ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಧಾರವಾಡ (ಅ.02): ರಾಜ್ಯದಲ್ಲಿ ಜಾತಿಗಣತಿ ಮಾಡೋದು ಅವಶ್ಯಕತೆ ಇರಲಿಲ್ಲ. ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡಲಾಗುವುದು ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರ ಇರ್ರರೆಲಿವೆಂಟ್ ಪ್ರಶ್ನೆಗಳನ್ನ ಇಟ್ಟುಕ್ಕೊಂಡು ಗಣತಿ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಜಾತಿ ಗಣತಿ ವಿಚಾರವಾಗಿ ಮಾತನಾಡಿದ ಜೋಶಿ, ಹಿಂದೂ ಸಮುದಾಯ ಸ್ವಾಮಿಜಿಗಳು, ಎಲ್ಲರೂ ಹೇಳಿದ್ದಾರೆ. ಯಾಕೆ ಜಾತಿ ಗಣತಿ ಮಾಡುತ್ತಿರಿ ಎಂದು ಹೇಳಿದ್ದಾರೆ. ಹಿಂದೂ ಸಮಾಜವನ್ನ ಒಡಿಯಲಿಕ್ಕೆ ಹೊಸ ಜಾತಿ ಸೇರಿಸಿದ್ದಾರೆ. ಅದರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಮುಸ್ಲಿಂ ಬ್ರಾಹ್ಮಣರು, ತೀರಾ ವೈಯಕ್ತಿಕ ಮಾಹಿತಿ ಕೇಳಿದ್ಧಾರೆ.

ಅದರ ವಿರುದ್ದ ನಾವು ಕೊಡಲ್ಲ ಅಂತ ಹೇಳಿದ್ದೇವೆ ಎಂದು ಸರ್ಕಾರ ಇತ್ತೀಚಿಗೆ ಸ್ಪಷ್ಟಪಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುಳುಕನ್ನು ಹೊರ ಹಾಕುವಾಗಿ ಆರೋಪ ಮಾಡಲು ಶುರು ಮಾಡುತ್ತಾರೆ. ಇದರಲ್ಲಿ ಸ್ವಾಮಿಗಳು ಹೇಳಿದ್ದಾರೆ. ವಿವಿಧ ಜಾತಿಯ ಸಮಯದಾಯದ ಸ್ವಾಮಿಗಳು ಹೇಳಿದ್ದಾರೆ. ದೇಶದ ಸಂವಿಧಾನ ಪ್ರಕಾರದ ಧರ್ಮಗಳು ಇವೆ. ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಸೈಂಟಿಪಿಕ್ ಆಗಿ ಟೆಕ್ನಾಲಜಿ ಬಳಸಿ ಜಾತಿ ಗಣತಿ ಮಾಡುತ್ತೇವೆ. ಗಣತಿ ಮಾಡುವವರಿಗೆ ಸರಿಯಾದ ಟ್ರೈನಿಂಗ್ ಕೊಟ್ಟಿಲ್ಲ. ಯಾರನೋ ಸಂತೃಪ್ತಿಗೊಳಿಸಲು, ಕೈ ಪಾಳಯದಲ್ಲಿ ಉಂಟಾಗಿರುವ ಬಿನ್ನಾಭಿಪ್ರಾಯಗಳನ್ನ ಮುಚ್ಚಿ ಹಾಕಲು ಇಂತಹ ಕೆಲಸ ಮಾಡ್ತಾರೆ ಎಂದರು.

ಕೆಲ ಶಾಸಕರು ಹೇಳ್ತಾರೆ ನವೆಂಬರ್ ಕ್ರಾಂತಿ ಆಗುತ್ತೆ ಎಂಬ ವಿಚಾರವಾಗಿ, ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಾಗ್ತಾರೆ ಎಂದು ಕೆಲ ಶಾಸಕರು ಹೇಳ್ತಾರೆ. ಮೈಸೂರಲ್ಲಿ ಸಿಎಂ ಹೇಳ್ತಾರೆ ಮುಂದಿನ ದಸರಾಕ್ಕೆ ನಾನೇ ಬರುತ್ತೇನೆ ಚಾಲನೆ ಕೊಡ್ತೆನಿ ಅಂತ ಹೇಳ್ತಾರೆ. ಗೊಂದಲ ಮರೆಮಾಚಲು ಡಿ.ಕೆ.ಶಿವಕುಮಾರ್ ಹೀಗೆ ಸಿಎಂ ಹೇಳ್ತಾರೆ. ಜಾತಿಗಣತಿಯನ್ನ ಒಕ್ಕಲಿಗ ಸಮುದಾಯದ ಸ್ವಾಮೀಜಿ ಮತ್ತು ಮುಖಂಡರು ಡಿ.ಕೆ.ಶಿವಕುಮಾರ್ ಜಾತಿಗಣತಿ ಮುಂದೆ ಹಾಕಬೇಕು ಎಂದು ತೀರ್ಮಾನ ಮಾಡಿದ್ರು. ಡಿ.ಕೆ.ಶಿವಕುಮಾರ ಅವರು ಜಾತಿಗಣತಿಗೆ ವಿರೋಧ ಇದಾರೆ ಎಂದು ಸಿಎಂ ಹೇಳಿಕೆ ಕೊಡಬೇಕಲ್ವಾ..? ಗಣತಿ ಮಾಡುವವರಗೆ ಟ್ರೈನಿಂಗ್ ಕೊಡಬೇಕು, ಕೊಟ್ಟು ಗಣತಿ ಮಾಡಲಿ ನಾವು ಬೇಡ ಅನ್ನಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ಈಗಾಗಲೆ ಸಭೆಗಳನ್ನ ಮಾಡಿದೆ.

ಟ್ರೈನಿಂಗ್ ನಡಿತಾ ಇದೆ, ಸಾಫ್ಟವೇರ್‌ಗಳು ತಯಾರಾಗಿವೆ. ಅದಕ್ಕೆ 108 ತಯಾರಿಗಳು ನಡಿತಾ ಇವೆ, ಏನೋ ತಯಾರಿಲ್ಲದೆ ಕೈ ಸರ್ಕಾರ ಗಣತಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೆ ನಿಮ್ಮ ಇತಿಹಾಸ ನೋಡಿಕ್ಕೊಳ್ಳಿ. ನೀವು ಹೊಸದಾಗಿ ಹೋಗಿರ್ರಿ. ಮನಸ್ಸೋ ಇಚ್ಚೆ ಕೈ ಪಕ್ಷಕ್ಕೆ ಬೈದು ಕಾಂಗ್ರೆಸ್ ಸೇರ್ಪಡೆಯಾಗಿರಿ. ರಾಜೀವ್ ಗಾಂಧಿ ಓಬಿಸಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ರಿಸರ್ವೆಶನ್ ವಿರೋಧ ಮಾಡಿದ್ರು. ಮಾಧ್ಯದವರನ್ನ ಕೇಳಲಿಕ್ಕೆ ಬಿಡಲ್ಲ ಸಿದ್ದರಾಮಯ್ಯ, ಮಾಧ್ಯಮಗಳು ಪ್ರಶ್ನೆ ಮಾಡಿದ್ರೆ ಏ ಯಾರಯ್ಯಾ ನೀನು ಬಿಜೆಪಿ ಅವನಾ ಎಂದು ಪ್ರಶ್ನೆ ಮಾಡ್ತಾರೆ ಎಂದು ಸಿದ್ದರಾಮಯ್ಯ ದಾಟಿಯಲ್ಲಿ ಜೋಶಿ ಮಾತನಾಡಿದರು.

ಅಂಬೇಡ್ಕರ್ ವಿರುದ್ದ ಗೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ

ನೆಹರು ಅವರು ಮೀಸಲಾತಿ ವಿರುದ್ದವಾಗಿ ಪತ್ರ ಬರೆದಿದ್ದರು. ರಾಜೀವ್ ಗಾಂಧಿ ಅವರ‌ ಸುಧೀರ್ಘ ಭಾಷಣದಲ್ಲಿದೆ. ಮೀಸಲಾತಿ ವಿರುದ್ದವಾಗಿ ಲೋಕಸಭೆಯಲ್ಲಿ ಭಾಷಣ ಮಾಡಿದ್ದಾರೆ. ಲೋಕಸಭೆಯ ಭಾಷಣವನ್ನ ತೆಗೆದುನೋಡಿ ಅಂತ ಸಿದ್ದರಾಮಯ್ಯಗೆ ಹೇಳಿ, ಸಿತಾರಾಂ ಕೇಸರಿ,ಬಾಬು ಜಗಮೋಹನರಾವ್ ಅವರ ಜೊತೆ ಯಾವ ರೀತಿ ನಡೆದುಕ್ಕೊಂಡ್ರು. ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ, ಎಸ್ ಸಿ, ಎಸ್ ಟಿ ವಿರೋಧಿಗಳು. ಅಂಬೇಡ್ಕರ್ ಅವರನ್ನ‌ ಬಿಟ್ಟಿಲ್ಲ ಇವರು. ಮಾತನಾಡಿದ್ರೆ ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಸಾರ್ವಕರ್ ಅಂತಾರೆ. ಅಂಬೇಡ್ಕರ್ ವಿರುದ್ದ ಗೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ. ಅಭ್ಯರ್ಥಿ ಯಾಕೆ ಹಾಕಿದ್ರಿ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಿರಿ. ಅಂಬೇಡ್ಕರ್ ಬಿಟ್ಟು ಹೋದ್ರೆ ಹೋಗಲಿ ಎಂದು ನೆಹರೂ ಮಾತನಾಡಿದ್ದು ಇದೆ. ಅಧಿಕೃತ ಸ್ಟೆಟ್‌ಮೆಂಟ್ ಇದೆ. ಸಿದ್ದರಾಮಯ್ಯ ಓತಿಕಟ್ಟ ಇದ್ದಂಗೆ ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುತ್ತಾರೆ. ಸಿಎಂ ಬದಲಾವಣೆ ವಿಚಾರವಾಗಿ, ಅವರ ಜಗಳ ಅದು, ಅದನ್ನ ಮರೆ ಮಾಚಲು ಜಾತಿಗಣತಿ ಮಾಡುತ್ತಿದ್ದಾರೆ ಎಂದು ವಿರುದ್ದ ಜೋಶಿ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು