
ಬೆಂಗಳೂರು (ಏ.6): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ 'ಮಾಮ' ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬೆಂಬಲ ನೀಡುವುದು ಮಾತ್ರವಲ್ಲದೆ ಕೆಲ ಆಪ್ತರ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಇದೇ ವೇಳೆ ಪ್ರಕಾಶ್ ರಾಜ್ ಅವರ ಟ್ವೀಟ್‌ಗೂ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈಗ ಸುದೀಪ್ ಅವರ ಮಾತಿಗೆ ಟ್ವೀಟರ್‌ನಲ್ಲಿ ಪರೋಕ್ಷವಾಗಿ ಟಾಂಗ್ ನೀಡಿರುವ ಹಿರಿಯ ನಟ, ನಿಮ್ಮ ಮಾಮನಿಗಾಗಲಿ ಯಾರಿಗೇ ಆಗಲಿ ನೀವು ದುಡಿದಿದ್ದರಲ್ಲಿ ಕೊಡಿ, ಪ್ರಜೆಗಳ ದುಡ್ಡಿನ 30 ಪರ್ಸೆಂಟ್ ಕೊಡೋದು ಬೇಡ ಎಂದು ಟ್ವೀಟ್ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಕಣ ರಂಗೇರಿರುವ ಹೊತ್ತಿನಲ್ಲಿ ಮೂರೂ ಪಕ್ಷಗಳು ಚುನಾವಣೆ ರಣತಂತ್ರಗಳು ಜೋರಾಗಿದೆ. ಪ್ರಸ್ತುತ ಮೂರೂ ಪಕ್ಷಗಳು ಚುನಾವಣೆಗೆ ಆಕಾಂಕ್ಷಿಗಳ ಟಿಕೆಟ್ ಫೈನಲ್ ಮಾಡೋದ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪ್ರಚಾರ ಕಾರ್ಯಕ್ರಮಕ್ಕೆ ಯಾರನ್ನೆಲ್ಲಾ ಕರೆಯಬೇಕು ಎನ್ನುವ ನಿಟ್ಟಿನಲ್ಲಿಯೂ ಪ್ಲ್ಯಾನ್‌ಗಳು ಸಿದ್ದವಾಗಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಆನೆಬಲ ಎನ್ನುವಂತೆ ಬುಧವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪಕ್ಕದಲ್ಲಿಯೇ ಕುಳಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್ ಬಿಜೆಪಿಗೆ ತಮ್ಮ ಬೆಂಬಲ ಪ್ರಕಟಿಸಿದ್ದರು. ಈ ನಡುವೆ ಸುದೀಪ್ ಅವರ ನಿರ್ಧಾರಕ್ಕೆ ಪ್ರಕಾಶ್ ರಾಜ್ ತೀವ್ರ ಆಘಾತ ವ್ತಕ್ತಪಡಿಸಿದ್ದಲ್ಲದೆ, ಅವರ ಈ ನಿರ್ಧಾರದಿಂದ ನೋವಾಗಿದೆ ಎಂದಿದ್ದರು.
ಗುರುವಾರ ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, 'ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ….. ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ..' ಎಂದು ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು 'ಮಾಮ' ಎಂದೇ ಕರೆಯುತ್ತಿದ್ದರು. ಅದನ್ನೇ ಇರಿಸಿಕೊಂಡು ಪ್ರಕಾಶ್ ರಾಜ್ ಪರೋಕ್ಷವಾಗಿ ಸುದೀಪ್‌ಗೆ ಟಾಂಗ್ ನೀಡಿದ್ದಾರೆ.
'ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ..' ಎಂದು ಇನ್ನೊಂದು ಟ್ವೀಟ್‌ನಲ್ಲಿ ಪ್ರಕಾಶ್ ರಾಜ್ ಬರೆದಿದ್ದಾರೆ.
ಷಹಜಹಾನ್-ಮಮ್ತಾಜ್ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!
'ಅದಕ್ಕಿಂತ ದರಿದ್ರ ಏನು ಗೊತ್ತಾ ಸಾರ್, ಒಂದು ಇವರನ್ನು ಒಂದು ಮತೀಯವಾದದ ಪಕ್ಷ, ಜಾತಿವಾದಕ್ಕೆ ಬಳಸಿಕೊಳ್ತಾ ಇರೋದು. ಹಾಗೂ ಇವರು ಅವರ ಹುರಿಯಾಳು ಆಗಿರೋದು. ಅಷ್ಟಲ್ಲದೇ ಬಾರ್ ಲೈಸೆನ್ಸ್ ಸಿಕ್ತಾ ಇತ್ತಾ ? ಹೋಟೆಲ್ ಮಾಡ್ತಾ ಇದ್ರಾ ? ಜೇ. ಪೀ, ನಗರದ ಸರೋವರದ ಮೂಲ ಸದ್ಯದಲ್ಲೇ ಉಕ್ಕಿ ಹರಿಯಲಿದೆ ನೋಡ್ತಾ ಇರಿ..' ಎಂದ ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಭರತ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 'ನೋಡಪ್ಪ.... ವಿಲನ್ನೋ, ಕಾಮೆಡಿಯನ್ನೊ, ನೀನು ದುಡಿದದ್ದರಲ್ಲಿ ಜನಕ್ಕೆ 20%-30% ಕೊಟ್ಟರೆ.... ನೀನು ಸಿನೇಮಾ ಮಾಡಿದ ಪಾಪವಾದರೂ ಕಮ್ಮಿ ಆದೀತು. (ಅತಿ)ಬುದ್ದಿವಂತಿಕೆ ಹೇಳೋಕೆ ನಿನಗೆ ಮಾತ್ರವಲ್ಲ ಹೇಳೋಕೆ ಬರೋದು..' ಎಂದು ಕಿಚ್ಚ ಸುದೀಪ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಲಾಗಿದೆ.
ಕಿಚ್ಚ ಸುದೀಪ್ ನಿರ್ಧಾರದಿಂದ ಅಚ್ಚರಿ ಮಾತ್ರವಲ್ಲ ನೋವಾಗಿದೆ, ಬಿಜೆಪಿ ಬೆಂಬಲಕ್ಕೆ ಪ್ರಕಾಶ್ ರಾಜ್‌ಗೆ ತಳಮಳ!
'ಅದೊಂದು ಐರನ್ ಲೆಗ್ ಬಿಡಿ ಸಾರ್ ಒಳ್ಳೆಯದೇ ಆಗುತ್ತದೆ . ಏನೋ ಮುಂದಿನ ವರ್ಷವಾದರೂ ಪದ್ಮಶ್ರೀ ಸಿಗಬಹುದೆಂಬ ಆಸೆ..' ಎಂದು ಅವರ ಟ್ವೀಟ್ ಕಾಮೆಂಟ್ ಮಾಡಲಾಗಿದೆ. 'ಪಕ್ಕದ ರಾಜ್ಯ ತೆಲಂಗಾಣದ ಮುಖ್ಯಮಂತ್ರಿ ಕುಟುಂಬ ಕಾಳೇಶ್ವರಂ ನೀರಾವರಿ ಯೋಜನೆ ಯಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ ಆದರೆ ಅದರ ಬಗ್ಗೆ ತುಟಿ ಬಿಚ್ಚಿ ಮಾತನಾಡದಿರಲು ನೀವು ಅಲ್ಲಿನ ಸರ್ಕಾರದ ಸೌಲಭ್ಯ ಸವಲತ್ತುಗಳನ್ನು ಪಡೆಯುತ್ತಿರುವುದು ಮತ್ತು ಆ ರಾಜ್ಯದ ರೈತರಾದಿಯಾಗಿ ಎಲ್ಲರನ್ನೂ ವಂಚಿಸಿದ ಹಾಗಲ್ಲವೇ?' ಎಂದು ಪ್ರಕಾಶ್ ರಾಜ್ ಅವರನ್ನು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.