Karnataka Politics: ನನಗೆ ಅಪಾಯ ತಂದೊಡ್ಡಲು ಬಿಜೆಪಿ ಅಭ್ಯರ್ಥಿ ಕುತಂತ್ರ: ಈಶ್ವರ ಖಂಡ್ರೆ

By Kannadaprabha News  |  First Published Dec 11, 2021, 2:43 PM IST

*   ಮೂರ್ನಾಲ್ಕು ಕಡೆಗಳಲ್ಲಿ ನನ್ನ ಕಾರು ಅಡ್ಡಗಟ್ಟಿದ ಪ್ರಕಾಶ ಖಂಡ್ರೆ ಗುಂಪು
*   ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮತದಾರರು
*   ಪ್ರಕಾಶ ಸವಾಲು ಸ್ವೀಕರಿಸಿದ ಈಶ್ವರ ಖಂಡ್ರೆ
 


ಬೀದರ್‌(ಡಿ.11): ನಾನು ಮತದಾನ ಮಾಡಲು ಹೋದಾಗಿನಿಂದ ತಾಲೂಕಿನಾದ್ಯಂತ ಮತದಾರರ ಭೇಟಿಗೆ ಸುತ್ತಾಡುತ್ತಿರುವಾಗ ನನ್ನ ವಾಹನ ಬೆನ್ನಟ್ಟಿ ಸಮಾಜ ಘಾತುಕ ಶಕ್ತಿಗಳನ್ನಿಟ್ಟುಕೊಂಡು ಎರಡ್ಮೂರು ಕಡೆ ನನ್ನ ಕಾರನ್ನು ಅಡ್ಡಗಟ್ಟಿ ಅಪಾಯ ಮಾಡುವ ಸಂಚನ್ನು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ(Prakash Khandre) ಮಾಡಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ(Eshwar Khandre) ಆರೋಪಿಸಿದರು. ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತಂತೆ ನಾನು ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಹಾಗೂ ಭಾಲ್ಕಿ(Bhalki) ಎಎಸ್‌ಪಿ ಅವರಿಗೂ ತಿಳಿಸಿದ್ದೆ. ಪ್ರಕಾಶ ಖಂಡ್ರೆ ಅವರು ಸೋಲಿನ ಖಾತ್ರಿಯಾದ ಮೇಲೆ ಮೈಕೈ ಪರಚಿಕೊಂಡು ಹೇಗಾದರೂ ಜಗಳ ತೆಗೆಯಬೇಕೆಂದು ಕುತಂತ್ರ ಮಾಡಿದ್ದರು ಎಂದರು.

ಭಾಲ್ಕಿ ತಾಲೂಕಿನ ಜ್ಯಾಂತಿ ಗ್ರಾಮದ ಹೊರವಲಯದಲ್ಲಿ ನಮ್ಮ ಆಪ್ತರಾದ ವೈಜನಾಥ ಪಾಟೀಲ್‌ ಅವರ ಹೊಲದಲ್ಲಿ ನಿರ್ಮಿಸಲಾದ ಕಲ್ಯಾಣ ಮಂಟಪಕ್ಕೆ ಭೇಟಿ ಕೊಟ್ಟಿದ್ದೆ, ಅಲ್ಲಿಯೂ ರಸ್ತೆ ಅಡ್ಡಗಟ್ಟಿ ಗುಂಡಾಗಳನ್ನು ಕರೆದುಕೊಂಡು ಸುಮಾರು 15ನಿಮಿಷ ಕಾಲು ಕೆರೆದು ಜಗಳ ತೆಗೆಯಲು ಪ್ರಯತ್ನಕ್ಕೆ ಮುಂದಾಗಿದ್ದರು ಎಂದರು.

Latest Videos

undefined

MLC Election: ಕಾಂಗ್ರೆಸ್‌ ವಯಸ್ಸಾದ ಪಕ್ಷ, ಅದನ್ನು ವಿಸರ್ಜಿಸಿ: ಸಿಎಂ ಬೊಮ್ಮಾಯಿ

ಇಷ್ಟೆಲ್ಲ ಇದ್ದರೂ ನಾನು ಬಹಳ ಸಂಯಮದಿಂದ ಶಾಂತಿ ಕದಡಬಾರದು, ಏನೇ ಇವತ್ತು ಅನಾಹುತವಾದರೂ ಇಡೀ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕೆಡುತ್ತದೆ ಎಂಬ ಕಾರಣಕ್ಕಾಗಿ ಅನೇಕ ನಮ್ಮ ಕಾರ್ಯಕರ್ತರು, ಬೆಂಬಲಿಗರಿಗೆ ಸಮಾಧಾನ ಮಾಡಿ, ನಾನೇ ಒಂದು ಹೆಜ್ಜೆ ಹಿಂದೆ ಇಟ್ಟು ಶಾಂತಿ ಕಾಪಾಡುವ ಪ್ರಯತ್ನ ಮಾಡಿದ್ದೆ ಆದರೆ ಪೊಲೀಸರು ಅಲ್ಲಿ ಬಂದಿದ್ದರೂ ಮೂಕ ಪ್ರೇಕ್ಷಕರಾಗಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಇವತ್ತು ಹೆಮ್ಮೆಯಿಂದ ಹೇಳಬಯಸುತ್ತೇನೆ, ಜಿಲ್ಲೆಯಾದ್ಯಂತ ಮತದಾರರು ಕಾಂಗ್ರೆಸ್‌(Congress) ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು(BJP) ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣದ ಹೊಳೆಯನ್ನೇ ಹರಿಸಿದ್ದರು, ಮತದಾರರಿಗೆ ಬೆದರಿಕೆ ಒಡ್ಡಿದ್ದರು. ಗ್ರಾಪಂ ಮಟ್ಟದಲ್ಲಿ ಕೇಂದ್ರದ ರಾಜ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಆಡಳಿತಾರೂಢ ಪಕ್ಷದ ಶಾಸಕರು ಎಲ್ಲ ಮತದಾರರಿಗೆ 15ನೇ ಹಣಕಾಸು ಯೋಜನೆ ಅನುದಾನ ಬಾರದೆ ಹಾಗೇ ನೋಡಿಕೊಳ್ಳುತ್ತೇವೆ, ಉದ್ಯೋಗ ಖಾತ್ರಿ ಸ್ಥಗಿತಗೊಳಿಸುತ್ತೇವೆ, ಮನೆಗಳನ್ನು ವಿತರಣೆ ಮಾಡೋದಿಲ್ಲ, ನೆಂಟರಿಸ್ಟ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡ್ತೇವೆ ಎಂದು ಎಲ್ಲಾ ರೀತಿಯ ಬೆದರಿಕೆಯೊಡ್ಡಿ ಭಯದ ವಾತಾವರಣ ಮೂಡಿಸಿದ್ದರು ಎಂದು ಆರೋಪಿಸಿದರು.

ಮತದಾರರಿಗೆ(Voters) ಆಮಿಷವೊಡ್ಡಿ ಹಣ, ಬೆಳ್ಳಿ ನಾಣ್ಯ ಹಾಗೂ ಸೀರೆಯನ್ನೂ ವಿತರಿಸಿದ್ದರು. ಇದೀ ಬಹಿರಂಗವಾಗಿ ನಡೆಯಿತು. ಇಷ್ಟೆಲ್ಲ ಇದ್ದರೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಬಹಳ ಜಾಗೃತರಾಗಿದ್ದರು, ಬಿಜೆಪಿ ಸರ್ಕಾರದ ದುರಾಡಳಿತದಿಂದ, ಅಕ್ರಮ ಅವ್ಯವಹಾರಗಳಿಂದ ಬೇಸತ್ತು, ರೈತ ವಿರೋಧಿ, ಜನ ವಿರೋಧಿ ನೀತಿ, ಇವರ ದುರಹಂಕಾರ, ದರ್ಪಕ್ಕೆ ಕಡಿವಾಣ ಹಾಕಬೇಕೆಂದು ಕಾಂಗ್ರೆಸ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ, ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್‌ ಪಾಟೀಲ್‌(Bhimrao Patil) ಪ್ರಚಂಡ ಬಹುಮತದಿಂದ ಗೆದ್ದೇ ಗೆಲ್ಲುತ್ತಾರೆ. ಬಿಜೆಪಿಯ ಅವನತಿ ಈ ಚುನಾವಣಾ ಫಲಿತಾಂಶದಿಂದ ಆರಂಭವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.

ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವೇ ಇಲ್ಲ: ಈಶ್ವರ್‌ ಖಂಡ್ರೆ

ಪ್ರಕಾಶ ಸವಾಲು ಸ್ವೀಕರಿಸಿದ ಈಶ್ವರ ಖಂಡ್ರೆ

ಎಸ್ಕಾರ್ಟ್‌ ಬಿಟ್ಟು ಮತಗಟ್ಟೆ ಪ್ರವೇಶಿಸಿ ತೋರಿಸಲಿ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಎಸೆದಿದ್ದ ಸವಾಲನ್ನು ಸ್ವೀಕರಿಸಿದ ಈಶ್ವರ ಖಂಡ್ರೆ ಭಾಲ್ಕಿಯಲ್ಲಿ ಮತಗಟ್ಟೆಗೆರೆಗೂ ಮುನ್ನ ವಾಹನ ನಿಲ್ಲಿಸಿ, ತಮ್ಮ ಗನ್‌ಮ್ಯಾನ್‌ನ್ನೂ(Gunman) ಅಲ್ಲಿಯೇ ಬಿಟ್ಟು ಒಬ್ಬರೇ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ತಿರುಗೇಟು ನೀಡಿದರು.

ಈ ಕುರಿತಂತೆ ಪ್ರಕಾಶ ಖಂಡ್ರೆ ಅವರ ಸವಾನಲನ್ನು ಸ್ವೀಕರಿಸಿ, ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಈಶ್ವರ ಖಂಡ್ರೆ ನಾನು ಎಸ್ಕಾರ್ಟ್‌ ಅಷ್ಟೇ ಅಲ್ಲ ನನ್ನ ಗನ್‌ಮ್ಯಾನ್‌ನನ್ನೂ ಬಿಟ್ಟು ಮತಗಟ್ಟೆ ಪ್ರವೇಶಿಸಿ ಮತದಾನ ಮಾಡುತ್ತೇನೆ ತಾಕತ್ತಿದ್ದರೆ ತಡೆಯಲಿ ಎಂದು ಹೇಳಿದ್ದರು, ಅದರಂತೆ ಭಾಲ್ಕಿಯ ಮತಗಟ್ಟೆಯಲ್ಲಿ ವಿಧಾನ ಪರಿಷತ್‌ ಚುನಾವಣೆಗೆ(Vidhan Parishat Election) ಮತದಾನ ಮಾಡಿ ಬಂದಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಖುಷಿಯಲ್ಲಿದ್ದಾರೆ.
 

click me!