ಯಾರೋ ಮಾಡಿದ ತಪ್ಪಿಗೆ ಎಚ್‌ಡಿಕೆ ಕ್ಷಮೆ ಕೇಳಿದ್ದಾರೆ; ಆದ್ರೆ ರೈತರ ಹಣ ತಿಂದು ಟಿಸಿ ಕೊಡದ ನೀವು ಕಳ್ಳರು; ಪ್ರಜ್ವಲ್ ರೇವಣ್ಣ

By Kannadaprabha News  |  First Published Nov 22, 2023, 5:22 AM IST

ಮನೆಗೆ ವಿದ್ಯುತ್‌ ದೀಪ ಬಿಡುವಾಗ ಯಾರೋ ಮಾಡಿದ ತಪ್ಪಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನರ ಕ್ಷಮೆಯಾಚಿಸುವ ಮೂಲಕ ದಂಡ ಸಹ ಪಾವತಿಸಿದ್ದಾರೆ. ಆದಾಗ್ಯೂ ಕಾಂಗ್ರೆಸ್‌ನವರು ಈ ಬಗ್ಗೆ ಅವಹೇಳನಕಾರಿ ಪೋಸ್ಟರ್‌ಗಳನ್ನು ಹಾಕುತ್ತಿರುವುದು ಖಂಡನೀಯ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.


ಹಾಸನ (ನ.22):  ಮನೆಗೆ ವಿದ್ಯುತ್‌ ದೀಪ ಬಿಡುವಾಗ ಯಾರೋ ಮಾಡಿದ ತಪ್ಪಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನರ ಕ್ಷಮೆಯಾಚಿಸುವ ಮೂಲಕ ದಂಡ ಸಹ ಪಾವತಿಸಿದ್ದಾರೆ. ಆದಾಗ್ಯೂ ಕಾಂಗ್ರೆಸ್‌ನವರು ಈ ಬಗ್ಗೆ ಅವಹೇಳನಕಾರಿ ಪೋಸ್ಟರ್‌ಗಳನ್ನು ಹಾಕುತ್ತಿರುವುದು ಖಂಡನೀಯ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕರೆಂಟ್ ಕಳ್ಳ ಎನ್ನುವ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ಎರಡು ಬಾರಿ ಮುಖ್ಯಮಂತ್ರಿ ಆದವರನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು ಎಂದರು.

Tap to resize

Latest Videos

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟಿವ್; ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ!

ಸಣ್ಣ ವಿಚಾರವನ್ನು ಇಷ್ಟೊಂದು ದೊಡ್ಡದು ಮಾಡಿದ್ದಕ್ಕೆ ಸ್ವತಃ ಕಾಂಗ್ರೆಸ್‌ನವರೇ ಬೇಜಾರಾಗಿದ್ದಾರೆ. ಸಿಲ್ಲಿ ವಿಚಾರ ಮುಂದಿಟ್ಟು, ಮಾಜಿ ಸಿಎಂನ ಟೀಕೆ ಮಾಡೋದು ತಪ್ಪು ಅಂತಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಯಾರೋ ಮಾಡಿದ ತಪ್ಪಿಗೆ ಎಚ್‌ಡಿಕೆ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ. ದಂಡ ಸಹ ಪಾವತಿ ಮಾಡಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸಿ ಎಂದು ವಿನಂತಿ ಮಾಡಿದರು. ಕುಮಾರಸ್ವಾಮಿ ಅವರಿಗೆ ೨ ಸಾವಿರ ಬಿಲ್ ಕಟ್ಟಲು ಯೋಗ್ಯತೆ ಇಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಇವರು ಲೂಟಿ ಮಾಡಿರುವ ಭೂಮಿ ಬಗ್ಗೆ ತನಿಖೆ ಮಾಡಿದರೆ ಅದಕ್ಕೆ ದಂಡ ಯಾರು ಕಟ್ಟುತ್ತಾರೆ ಎಂದು ಪ್ರಶ್ನಿಸಿದರು. ಹಾಗಾದರೆ ರೈತರನ್ನು ಕಳ್ಳರು ಅಂತೀರಾ! ಎಷ್ಟು ರೈತರು ಈ ರೀತಿ ಸಂಪರ್ಕ ಪಡೆದುಕೊಂಡಿರುತ್ತಾರೆ. ಅವರಿಂದ ದಂಡ ಕಟ್ಟಿಸಿಕೊಂಡು ಸುಮ್ಮನಾಗುವುದಿಲ್ಲವೆ. ನೀವು ರೈತರಿಗೆ ಕೊಡಬೇಕಾದ ಟಿಸಿಗಳನ್ನು ಸರಿಯಾಗಿ ಕೊಡಿ. ಹಾಸನ ಜಿಲ್ಲೆಯೊಂದರಕ್ಕೇ ೨೭ ಸಾವಿರ ಟಿಸಿ ಬೇಕು ಎಂದು ರೈತರು ಹಣ ಕಟ್ಟಿದ್ದಾರೆ. ಟಿಸಿ ಕೊಡದಿದ್ದಕ್ಕೆ ಅವರು ಬೇರೆಡೆಯಿಂದ ಕನೆಕ್ಷನ್ ತೆಗೆದುಕೊಂಡರೆ ಅವರನ್ನು ಕರೆಂಟ್ ಕಳ್ಳ ಅಂತೀರಾ ಎಂದು ಪ್ರಶ್ನಿಸಿದರು.

ರೈತರು ಹಣ ಕಟ್ಟಿದರೂ ಟಿಸಿ ಕೊಟ್ಟಿಲ್ಲವಲ್ಲ, ನೀವು ರೈತರ ಹಣ ತಿಂದಿದ್ದೀರಲ್ಲಾ ನೀವು ಎಂತಾ ಕಳ್ಳರು ಎಂದು ಪ್ರಶ್ನಿಸಿದರು. ರೈತರ ಹತ್ತಿರ ೨೦ ಸಾವಿರ ಹಣ ಕಟ್ಟಿಸಿಕೊಂಡು ಟಿಸಿ ಕೊಡ್ತಿಲ್ಲವಲ್ಲ ನಿಮ್ಮನ್ನು ಜನ ಏನೆನ್ನಬೇಕು ಎಂದರು. ಇದನ್ನೆಲ್ಲ ಬಿಟ್ಟು ಪ್ರಜ್ಞಾವಂತ ರಾಜಕೀಯ ಮಾಡಿ ಎಂದು ಸಲಹೆ ನೀಡಿದರು.

ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಟೆಕ್ನಿಕಲ್ ವಿಷಯ. ನಮ್ಮಲ್ಲಿ ಕೋರ್ ಕಮಿಟಿ ಇದೆ. ನಾನದರ ಸದಸ್ಯ ಅಲ್ಲ. ನಾನು ರಾಷ್ಟ್ರೀಯ ಕಮಿಟಿಯಲ್ಲಿದ್ದೇನೆ. ಅವರೂ ರಾಷ್ಟ್ರೀಯ ಕಮಿಟಿ ಮೆಂಬರ್ ಇದ್ದರು. ಈಗ ಅಮಾನತು ಮಾಡಿದ್ದಾರೆ. ದೇವೇಗೌಡರು ರಾಷ್ಟ್ರೀಯ ಕಮಿಟಿ ಸಭೆ ಕರೆದು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.

ಎಂಪಿ ಚುನಾವಣೆ ಹಿನ್ನೆಲೆ ಮಾತನಾಡುತ್ತಿದ್ದಾರೆ

ತಮ್ಮ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರ ವಾಗ್ದಾಳಿಗೆ ತಿರುಗೇಟು ನೀಡಿದ ಪ್ರಜ್ವಲ್, ಚುನಾವಣೆ ಬಂದಿದೆಯೆಲ್ಲಾ ಅದಕ್ಕೆ ಬಿಳಿ ಬಟ್ಟೆ ಹಾಕಿಕೊಂಡು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಸೋತು ಸುಮ್ಮನಾಗುತ್ತಾರೆ ಎಂದು ಟಾಂಗ್ ನೀಡಿದರು.

ನನ್ನ ಮೇಲೆ ಪ್ರೆಸ್‌ಮೀಟ್ ಮಾಡಿದ್ರೆ ಏನು ಸಿಗಲ್ಲ ಇವರಿಗೆ. ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ನನ್ನ ಮೇಲೆ ಪ್ರೆಸ್‌ಮೀಟ್ ಮಾಡುವ ಬದಲು ರೈತರಿಗೆ ಅನುಕೂಲವಾಗುವ, ಜನರಿಗೆ ಒಳ್ಳೆಯದಾಗುವ ಕಾಮಗಾರಿಗಳಿಗೆ ಅನುದಾನ ತರಲಿ ಎಂದು ಕುಟುಕಿದರು. ಕಾಂಗ್ರೆಸ್ ಇತಿಹಾಸ ತೆಗೆದರೆ ಬರಿ ಎಲೆಕ್ಷನ್ ಆರು ತಿಂಗಳ ಇರುವಾಗ ಬಿಳಿ ಬಟ್ಟೆ ಹಾಕಿಕೊಂಡು ಬರುತ್ತಾರೆ. ನಮಗೆ ಬೈತಾರೆ, ಸೋತ ಮೇಲೆ ಮನೆಗೆ ಹೋಗ್ತಾರೆ. ಅವರಿಂದ ಇನ್ನೇನು ಆಗಲ್ಲ ಎಂದರು.

Congress ವಿರುದ್ಧ ಕಾಫಿನಾಡಲ್ಲಿ ಫೋಸ್ಟರ್ ಅಭಿಯಾನ: ಸಿದ್ದು ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಸ್ವಾಗತಾರ್ಹ

ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಸ್ವಾಗತಾರ್ಹ. ಒಂದು ಕಡೆ ಅವರು, ಇನ್ನೊಂದು ಕಡೆ ಕುಮಾರಣ್ಣ, ಇಬ್ಬರೂ ಡೈನಾಮಿಕ್ ಲೀಡರ್ ಇದ್ದಾರೆ. ಎಲ್ಲೋ ಒಂದು ಕಡೆ ನಮ್ಮ ಹೊಂದಾಣಿಕೆಗೆ ಶಕ್ತಿ ಸಿಕ್ಕಿದಂತೆ ಆಗಿದೆ. ಹೋರಾಟ ಮಾಡಲು ನಾವೆರಲ್ಲೂ ತಯಾರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಖಂಡಿತಾ ೨೮ ಕ್ಕೆ ೨೮ ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಇದೆ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

click me!