
ಬೆಂಗಳೂರು (ಸೆ.12): ಅಶೋಕಣ್ಣ 2 ವರ್ಷ ಆದ್ಮೇಲೆ ಅದೇನೋ ತೋರಿಸ್ತಾರಂತೆ, ದಯವಿಟ್ಟು ಏನೂ ತೋರಿಸ್ಬೇಡಿ... ನಮಗೆ ನೋಡೋ ಆಸಕ್ತಿ ಇಲ್ಲ. ಇನ್ನು ವಿಧಾನ ಪರಿಷತ್‌ನಲ್ಲಿ ಕೂರುವ 2 ಸುಂದರವಾದ ಕೋತಿಗಳು ಎರಡು ತಿಂಗಳಿಂದ ಸುಮ್ಮನಿದ್ದಾವೆ. ಒಂದು ಛಲವಾದಿ ನಾರಾಯಣಸ್ವಾಮಿ ಅಣ್ಣಾ, ಮತ್ತೊಂದು ಅವರ ಸಾಥಿ ಆರಡಿ ಕಟೌಟ್ (ಎನ್.ರವಿಕುಮಾರ್). ಇವರು ಹೆಣ್ಣು ಮಕ್ಕಳಿಗೆ ಬಹಳ ಗೌರವ ಕೊಡ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ನಾಯಕರನ್ನು ಕೆಣಕಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್, ಎರಡೂ ವರ್ಷಗಳ ಮೇಲೆ ಏನೋ ತೋರಿಸ್ತಾರಂತೆ. ದಯವಿಟ್ಟು ಬೇಡ ಅಶೋಕ ಅಣ್ಣ. ನಮಗೆ ಯಾರಿಗೂ ನೋಡೋ ಆಸಕ್ತಿ ಇಲ್ಲ. ನೀವು ತೋರಿಸಿದರೆ ನಮಗೆ ನೋಡುವಷ್ಟು ತಾಳ್ಮೆಇಲ್ಲ, ಆಸಕ್ತಿ ಇಲ್ಲ. ಈಗಾಗಲೇ ಹೈಕಮಾಂಡ್ ನಾಯಕರೇ ಅಶೋಕ್ ಅಣ್ಣನ ಗಾಳಿ ತೆಗೆದಿದ್ದಾರೆ. ಆಹಾ ನಮ್ಮ ಸಿ.ಟಿ ರವಿಗೆ, ಅಶೋಕ್ ಚೇರ್ ಮೇಲೆ ಕೂರಬೇಕಿತ್ತು, ಆದರೆ ಅದು ಆಗಲಿಲ್ಲ ಎಂದು ಟೀಕಿಸಿದರು.
ವಿಧಾನಪರಿಷತ್ ನಲ್ಲಿ ಎರಡೂ ಸುಂದರವಾದ ಕೋತಿಗಳು ಕುಳಿತಿವೆ. ಆ ಸುಂದರವಾದ ಕೋತಿಗಳು ಎರಡೂ ತಿಂಗಳಿನಿಂದ ಸುಮ್ಮನೆ ಇದಾವೆ. ಒಂದು ಛಲವಾದಿ ನಾರಾಯಣಸ್ವಾಮಿ ಅಣ್ಣಾ, ಮತ್ತೊಂದು ಅವರ ಸಾಥಿ ಆರಡಿ ಕಟೌಟ್ (ಎನ್.ರವಿಕುಮಾರ್). ಇವರು ಹೆಣ್ಣು ಮಕ್ಕಳಿಗೆ ಬಹಳ ಗೌರವ ಕೊಡ್ತಾರೆ. ಆರ್.ಅಶೋಕ್, ವಿಜಯೇಂದ್ರ, ಸಿ.ಟಿ ರವಿ ಹಾಗೂ ಯತ್ನಾಳ್ ಗೆ ಹಿಂದೂ ಧರ್ಮದ ಬಗ್ಗೆ ಡಿಬೆಟ್ ಗೆ ಆಹ್ವಾನ ಮಾಡ್ತೀವಿ. ಬನ್ನಿ ಹಿಂದೂ ಧರ್ಮದ ಬಗ್ಗೆ ಮಾತಾಡೋಣ. ಹಿಂದೂ ಧರ್ಮ ಹಾಗೂ ಅರ್ಚಕರ ಬಗ್ಗೆ ಮಾತಾಡೋಣ. ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಬಿಜೆಪಿ ನಾಯಕರಿಗೆ ಶಾಸಕ ಪ್ರದೀಪ್ ಈಶ್ವರ್ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರು.
ನಿನ್ನೆ, ಮೊನ್ನೆ ಆರ್.ಅಶೋಕ್, ಸಿ.ಟಿ ರವಿ, ಅಶ್ವತ್ಥ್ ನಾರಾಯಣ್, ಯತ್ನಾಳ್ ಅಬ್ಬರಿಸಿದ್ದೇ ಅಬ್ಬರಿಸಿದ್ದು. ಹಿಂದೂಗಳ ಮೇಲೆ ಅವರಿಗೆ ಮಾತ್ರವೇ ಪ್ರೀತಿ ಇರೋ ತರ. 2024ರಲ್ಲಿ ಹಿಂದೂ ರಿಲೀಜಿಯಸ್ ಬಿಲ್ ಪಾಸ್ ಮಾಡಿದ್ದೇವೆ. ಆ ಬಿಲ್ ಓದಿಕೊಂಡಿದ್ರಾ ಸರ್.? ಹಿಂದೂ ರಿಲಿಜಿಯಸ್ ಬಿಲ್ ನಲ್ಲಿ 1 ಕೋಟಿಗೂ ಹೆಚ್ಚಾಗಿರುವ ದೇವಾಲಯದಿಂದ ಫಂಡ್ ಕಲೆಲ್ಟ್ ಮಾಡ್ತೀವಿ. ಕಾಮನ್ ಪೂಲ್ ಫಂಡ್ ಏನಕ್ಕೆ ಬಳಸ್ತಾರೆ ಗೊತ್ತಾ.? ರಾಜ್ಯದಲ್ಲಿ 66232 ಹಿಂದೂ ಟೆಂಪಲ್ ಇದೆ. ಅದರಲ್ಲಿ 33 ಸಾವಿರ ಮುಜರಾಯಿ ಟೆಂಪಲ್ಸ್ ಇದೆ. 50 ಸಾವಿರ ಜನ ಅರ್ಚಕರು ಇದಾರೆ. ನಾವು ಆ ಕಾಮನ್ ಪೂಲ್ ಫಂಡ್‌ನಿಂದ ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರ ಆರೋಗ್ಯಕ್ಕೆ ಬಳಸುತ್ತೇವೆ. ಇದು ನಮ್ಮ ಪಕ್ಷಕ್ಕೆ ಹಿಂದೂ ಧರ್ಮದ ಮೇಲೆ ಇರುವ ಗೌರವ ಎಂದು ಹೇಳಿದರು.
ಮಾಜಿ ಶಾಸಕರು, ದಿವಂಗತ ಮಾಜಿ ಶಾಸಕರ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಭತ್ಯೆಗಳು!
ಬಿಜೆಪಿ ಸರ್ಕಾರದಲ್ಲಿ, ಬಡ ಬ್ರಾಹ್ಮಣರ ಬಗ್ಗೆ, ಹಿಂದೂ ದೇವಸ್ಥಾನದ ಬಗ್ಗೆ, ಯಾವುದಾದರೂ ಬಿಲ್ ತಿಂದಿದ್ದೀರಾ.? ಹಿಂದೂ ಧರ್ಮದ ದೇವಾಲಯದ ಬಗ್ಗೆ ಮಾತಾಡ್ತೀರಾ.? ದೇವಾಲಯದ ಅಭಿವೃದ್ಧಿ ಬಗ್ಗೆ ಮಾತಾಡ್ತಾ ಇದೀರಾ.? ಬಾಯಿ ತೆಗೆದರೆ, ಇಸ್ಲಾಂ ಧರ್ಮವನ್ನು ಬೈತೀರಾ. ನಾನೊಬ್ಬ ಹಿಂದೂ, ನಾನು ಗೌರವದಿಂದ ಹೇಳ್ತೀನಿ ನಾನೊಬ್ಬ ಹಿಂದೂ. ನೀವು ಬೇರೆ ಧರ್ಮವನ್ನು ಬೈದರೆ, ನಾಳೆ ಅವರು ನಮ್ಮ ಹಿಂದೂ ಧರ್ಮವನ್ನು ಬೈದರೆ ನಮಗೆ ನೋವಾಗುತ್ತದೆ ಎಂದರು.
ಈ ಬಿಜೆಪಿಯವರು ಎಲ್ರೂ ಐಡೆಂಟಿಟಿ ಕ್ರೆಜಸ್ ಇಟ್ಟುಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್ ಖುರ್ಚಿ ಮೇಲೆ ಕಣ್ಣು ಹಾಕಿದ್ದರು. ಪಾಪ ಬಿಜೆಪಿಯವರು ಯತ್ನಾಳ್ ಚೇರ್ ಕಿತ್ಕೊಂಡರು. ಇದೀಗ ಯತ್ನಾಳ್ ಜೆಸಿಬಿ ತಗೊಂಡು ಉತ್ತರ ಪ್ರದೇಶಕ್ಕೆ ಹೋಗೋಕೆ ರೆಡಿಯಾಗಿದ್ದಾರೆ. ಇನ್ನು ಆರ್.ಅಶೋಕ್ ಚೇರ್ ಮೇಲೆ ನಿಧಾನವಾಗಿ ಸುನೀಲ್ ಕುಮಾರ್ ಕಣ್ಣು ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರ್ಚಿ ಮೇಲೆ ಯಾರಿಗೂ ಗೊತ್ತಿಲ್ಲದ ಹಾಗೆ ಸೋಮಣ್ಣ ಚಕ್ ಮೆಟ್ ಇಟ್ಟಿದ್ದಾರೆ ಎಂದು ರಾಜಕೀಯ ಒಳಸಂಗತಿ ಬಗ್ಗೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.