ಲೋಕಸಭೆ ಚುನಾವಣೆ 2024: 2 ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆಗೆ ಸಂಪನ್ಮೂಲ ಅಡ್ಡಿ

Published : Mar 10, 2024, 10:56 AM IST
ಲೋಕಸಭೆ ಚುನಾವಣೆ 2024: 2 ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆಗೆ ಸಂಪನ್ಮೂಲ ಅಡ್ಡಿ

ಸಾರಾಂಶ

ಕಾಂಗ್ರೆಸ್ ರಾಜ್ಯ ನಾಯಕತ್ವ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಏಕ ಹೆಸರು ಶಿಫಾರಸು ಮಾಡಿದ್ದರೂ ಸಂಪನ್ಮೂಲ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಶಾಸಕರು ಎತ್ತಿದ್ದ ಪ್ರಶ್ನೆಗಳ ಪರಿಣಾಮ ಅಂತಿಮ ಕ್ಷಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮುಂದೂಡಿಕೆ ಕಂಡಿದೆ. 

ಬೆಂಗಳೂರು(ಮಾ.10):  ಕಾಂಗ್ರೆಸ್ ರಾಜ್ಯ ನಾಯಕತ್ವ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಏಕ ಹೆಸರು ಶಿಫಾರಸು ಮಾಡಿದ್ದರೂ ಸಂಪನ್ಮೂಲ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಶಾಸಕರು ಎತ್ತಿದ್ದ ಪ್ರಶ್ನೆಗಳ ಪರಿಣಾಮ ಅಂತಿಮ ಕ್ಷಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮುಂದೂಡಿಕೆ ಕಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ರಾಜ್ಯ ನಾಯಕತ್ವ ಚಿತ್ರದುರ್ಗಕ್ಕೆ ಬಿ.ಎನ್.ಚಂದ್ರಪ್ರ ಹಾಗೂ ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಸೇರಿದಂತೆ 15 ಕ್ಷೇತ್ರಗಳಿಗೆ ಏಕ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿತ್ತು. ಈ ಪೈಕಿ ಶುಕ್ರವಾರ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿದೆ. ಆದರೆ, ಅಂತಿಮ ಕ್ಷಣದಲ್ಲಿ ಚಂದ್ರಪ್ಪ ಹಾಗೂ ಜಯಪ್ರಕಾಶ್ ಹೆಗ್ಡೆ ಅವರ ಹೆಸರಿಗೆ ತಡೆ ಬಿದ್ದಿದೆ. ಇದಕ್ಕೆ ಕಾರಣವಾಗಿರುವುದು ಈ ಅಭ್ಯರ್ಥಿಗಳ ಸಂಪನ್ಮೂಲ ಸಾಮರ್ಥದ ಬಗ್ಗೆ ಸ್ಥಳೀಯ ಶಾಸಕರು ಎತ್ತಿದ್ದ ಪ್ರಶ್ನೆಗಳು, ಮೂಲಗಳ ಪ್ರಕಾರ, ಚಿತ್ರದುರ್ಗಕ್ಕೆ ಮಾಜಿ ಸಂಸದ ಚಂದ್ರಪ್ಪ ಅವರ ಪರ ಸಮೀಕ್ಷಾ ವರದಿಗಳು ಇದ್ದರೂ ಅವರ ಸಂಪನ್ಮೂಲ ಕ್ರೋಢೀಕರಿಸುವ ಸಾಮರ್ಥದ ಬಗ್ಗೆ ಚಿತ್ರದುರ್ಗದ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ತೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರ ಹೆಗಲಿಗೆ ಹಾಕಿದೆ. ಒಂದು ವೇಳೆ ಸೋತರೆ ಅದರ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೂ ತಿಳಿಸಿದೆ.

Loksabha Elections 2024: ಬಿಜೆಪಿಯಲ್ಲಿ ಬೇಗುದಿ ತಣ್ಣಗೆ, ಸಂಸದ ಸಂಗಣ್ಣ ಕರಡಿ ನಿರಾಳ!

ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಶಾಸಕರು ಚಂದ್ರಪ್ಪ ಅವರ ಸಂಪನ್ಮೂಲ ಕ್ರೋಡೀಕರಿಸುವ ಸಾಮರ್ಥ್ಯ ಅಷ್ಟೇನೂ ಉತ್ತಮವಾಗಿಲ್ಲ. ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಹಾಗೂ ಶಾಸಕರೇ ಸಂಪನ್ಮೂಲ ಕ್ರೋಢೀಕರಿಸಬೇಕಾಗುತ್ತದೆ. ಇದರಿಂದ ತುಂಬಾ ಹೊರೆ ಬೀಳುತ್ತದೆ ಎಂದು ವಾದಿಸಿದ್ದಾರೆ ಎನ್ನಲಾಗಿದೆ. ತಿಮ್ಮಾಪುರ ಪುತ್ರನ ಪರ ಬ್ಯಾಟಿಂಗ್: ಇದೇ ವೇಳೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ ವಿನಯ ತಿಮ್ಮಾಪುರ ಅವರ ಪರವಾಗಿ ಈ ಶಾಸಕರು ವಾದ ಮಾಡಿದ್ದಾರೆ. ವಿನಯ ತಿಮ್ಮಾಪುರ ಸಹ ಚಿತ್ರದುರ್ಗ ಟಿಕೆಟ್ ಆಕಾಂಕ್ಷಿ. ಆದರೆ, ರಾಜ್ಯ ನಾಯಕತ್ವ ವಿನಯ ತಿಮ್ಮಾಪುರಿಗೆ ಟಿಕೆಟ್ ನೀಡುವ ಬಗ್ಗೆ ಅಷ್ಟೇನೂ ಆಸಕ್ತಿ ತೋರಿರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಿದರೆ ಕಿಂಚಿತ್ತೂ ಸಂಪನ್ಮೂಲ ಕೊರತೆಯಾಗದಂತೆ ನೋಡಿಕೊಳ್ಳುವ ವಾದವನ್ನು ಪಕ್ಷದ ನಾಯಕತ್ವದ ಮುಂದೆ ಮಂಡಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಚಂದ್ರಪ್ಪ ಹಾಗೂ ತಿಮ್ಮಾಪುರ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮಾತುಕತೆ ನಡೆಸಿ ಅನಂತರ ಅಂತಿಮ ತೀರ್ಮಾನಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Loksabha Elections 2024: ಕಾಂಗ್ರೆಸ್‌ ಟಿಕೆಟ್‌ ಯಾರಿಗೆ: ರಮಾನಾಥ ರೈ, ಪದ್ಮರಾಜ್‌, ಸೊರಕೆ?

ಜಯಪ್ರಕಾಶ್ ಹೆಗ್ಡೆಗೂ ಶಾಸಕರ ವಿರೋಧ: 

ಚಿತ್ರದುರ್ಗ ಟಿಕೆಟ್ ವಿಚಾರಕ್ಕೆ ಸಂಪನ್ಮೂಲ ವಿಚಾರ ಹೇಗೆ ಅಡ್ಡಿಯಾಗಿದೆಯೇ ಅದೇ ರೀತಿ ಚಿಕ್ಕಮಗ ಳೂರು- ಉಡುಪಿ ಕ್ಷೇತ್ರದ ವಿಚಾರದಲ್ಲೂ ಸ್ಥಳೀಯ ಶಾಸಕರು ರಾಜ್ಯ ನಾಯಕತ್ವ ಅಂತಿಮಗೊಳಿಸಿದ್ದ ಜಯಪ್ರಕಾಶ್ ಹೆಗ್ಡೆ ಅವರ ಹೆಸರಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರಿಂದ ಮುಂದೂಡಿಕೆ ಕಂಡಿದೆ. 

ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬರುವ ಸಿದ್ಧತೆ ನಡೆಸಿರುವ ಜಯಪ್ರಕಾಶ್ ಹೆಗ್ಡೆ ಅವರ ಪರ ರಾಜ್ಯ ನಾಯಕತ್ವ ಮಣೆ ಹಾಕಿತ್ತು. ಅದೇ ರೀತಿ ಹೈಕಮಾಂಡ್‌ಗೆ ಶಿಫಾರಸು ಪಟ್ಟಿಯಲ್ಲಿ ಹೆಗ್ಡೆ ಹೆಸರಿತ್ತು. ಆದರೆ, ಜಯಪ್ರಕಾಶ್ ಹೆಗ್ಡೆ ಅವರ ವಲಸೆ ಧೋರಣೆ ಹಾಗೂ ಸಂಪನ್ಮೂಲ ವಿಚಾರದಲ್ಲಿ ಅವರ ಚೌಕಾಸಿ ಮನಸ್ಥಿತಿ ಬಗ್ಗೆ ಸ್ಥಳೀಯ ಶಾಸಕರು ದೂರು ನೀಡಿರುವುದರಿಂದ ಅಂತಿಮ ಹಂತದಲ್ಲಿ ಸ್ಥಗಿತಗೊಂಡಿದೆ. ಸ್ಥಳೀಯ ಶಾಸಕರು ಹೆಗ್ಡೆ ಅವರ ಬದಲಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂದು ವಾದ ಮಂಡಿಸಿದ್ದಾರೆ. ಅತುಮಂಥ್ ಅವರಿಗೆ ಟಿಕೆಟ್ ನೀಡಿದರೆ ಸಂಪನ್ಮೂಲ ಕೊರತೆ ಆಗುವುದಿಲ್ಲ. ಹೆಗ್ಡೆ ಅವರಿಗೆ ಟಿಕೆಟ್ ನೀಡಿದರೆ ಫಲಿತಾಂಶದ ವಿಚಾರದಲ್ಲಿ ನಮ್ಮ ಮೇಲೆ ಹೊಣೆ ಹಾಕಬೇಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್