ಬೆಂಗಳೂರು (ಆ.06): ನೂತನ ಸಚಿವರಿಗೆ ಇಂದು ಖಾತೆಗಳ ಹಂಚಿಕೆಯಾಗುವ ಸಂಭವವಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸುಳಿವು ನೀಡಿದ್ದು, ಖಾತೆ ಹಂಚಿಕೆ ಶುಕ್ರವಾರ ಪೂರ್ಣಗೊಳ್ಳಲಿದೆ ಎಂದು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಹಿಂದಿನ ಯಡಿಯೂರಪ್ಪ ಸಂಪುಟದ ಬಹುತೇಕ ಸಚಿವರೇ ಈ ಸಂಪುಟದಲ್ಲೂ ಇರುವುದರಿಂದ ಖಾತೆಗಳಲ್ಲೂ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎನ್ನಲಾಗುತ್ತಿದೆ.
ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ: ಸ್ವಪಕ್ಷದ ವಿರುದ್ಧ ಬಿಜೆಪಿ ಶಾಸಕಿ ಅಸಮಾಧಾನ
ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಖಾತೆ ಹಂಚಿಕೆ ಪ್ರಕ್ರಿಯೆ ಬಗ್ಗೆ ದೂರವಾಣಿ ಮೂಲ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಯಡಿಯೂರಪ್ಪ ಸಂಪುಟದ ಬಹುತೇಕ ಸಚಿವರೇ ಬೊಮ್ಮಾಯಿ ಸಂಪುಟದಲ್ಲೂ ಮುಂದುವರಿದಿದ್ದು ಹೆಚ್ಚಿನ ಬದಲಾವನೆ ಆಗುವುದಿಲ್ಲ ಎನ್ನಲಾಗಿದೆ.
ಈಶ್ವರಪ್ಪ, ಸೋಮಣ್ಣ, ಅಶೋಕ್ ಶ್ರೀರಾಮುಲು ಸೇರಿದಂತೆ ಹಲವರ ಖಾತೆಗಳಲ್ಲಿ ಅಲ್ಪ ಬದಲಾವಣೆ ಆಗುವ ಸಾಧ್ಯತೆ ಇದೆ.