ನನಗೆ ರಾಜಕೀಯ ಅನಿವಾರ‍್ಯವಲ್ಲ, ಪಕ್ಷ ಸೇರ್ಪಡೆ ಯೋಚಿಸಿಲ್ಲ: ಸುಮಲತಾ ಅಂಬರೀಶ್‌

By Govindaraj S  |  First Published May 23, 2022, 3:15 AM IST

ನಾನು ಯಾವುದೇ ರಾಜಕೀಯ ಪಕ್ಷ ಸೇರುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.


ಮದ್ದೂರು (ಮೇ.23): ನಾನು ಯಾವುದೇ ರಾಜಕೀಯ ಪಕ್ಷ ಸೇರುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ನನಗೆ ರಾಜಕೀಯ ಅನಿವಾರ್ಯ ಇಲ್ಲ. ಆದರೆ, ರಾಜಕೀಯದಲ್ಲಿ ಮುಂದುವರಿಯಬೇಕಾದರೆ ಪಕ್ಷ ಅನಿವಾರ್ಯವಾಗುತ್ತದೆ. ವಿಧಾನಸಭೆ ಚುನಾವಣೆಗೆ ಇನ್ನೂ ಹತ್ತಾರು ತಿಂಗಳು ಇದೆ. ಹೀಗಾಗಿ ಸದ್ಯ ರಾಜಕೀಯ ಪಕ್ಷ ಸೇರುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನೂ ಸೇರಿ ಪುತ್ರ ಅಭಿಷೇಕ್‌ ಅಂಬರೀಶ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಬೇಕೆಂದು ಯಾವ ಪಕ್ಷದ ಮುಂದೆಯೂ ಡಿಮ್ಯಾಂಡ್‌ ಇಡುವುದಿಲ್ಲ. ಅಂತಹ ಸಂಸ್ಕೃತಿ ನಮ್ಮದಲ್ಲ. ಅಂಥ ಚಾಳಿ ಹಿಂದೆ ಅಂಬರೀಶ್‌ ಅವರಿಗೂ ಇರಲಿಲ್ಲ. ರಾಜಕೀಯ ಪಕ್ಷದ ಟಿಕೆಟ್‌ ನಮ್ಮ ಮನೆ ಬಾಗಿಲಿಗೇ ಬರುತ್ತಿತ್ತು ಎಂದರು. ಜಿಲ್ಲೆಯ ಅಭಿವೃದ್ಧಿಗಾಗಿ ಯಾವ ಪಕ್ಷ ನೆರವಾಗುತ್ತದೆಯೋ ಆ ಪಕ್ಷಕ್ಕೆ ಸೇರಲು ಬಯಸಿದ್ದೇನೆ. ಅದು ಯಾವ ಪಕ್ಷ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. ರಾಜಕೀಯ ಪಕ್ಷ ಸೇರುವ ವಿಚಾರ ಬಂದಾಗ ನಾನು ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಬೆಂಬಲಿಗರು, ಕಾರ್ಯಕರ್ತರ ಒಮ್ಮತದ ಅಭಿಪ್ರಾಯ ಪಡೆದು ಪಕ್ಷ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Tap to resize

Latest Videos

ಮಂಡ್ಯದಲ್ಲಿ ಬಿಜೆಪಿ ಬಿಗ್ ಆಪರೇಷನ್, ಗರಿಗೆದರಿದ ರಾಜಕೀಯ!

ಬಿಜೆಪಿ ಸೇರ್ಪಡೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ: ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಳೆದ ಹಲವು ದಿನಗಳಿಂದ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಸುಮಲತಾ ಮಾತ್ರ ತಮ್ಮ ಮುಂದಿನ ನಡೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅತ್ತ ಬಿಜೆಪಿ ನಾಯಕರು ಸುಮಲತಾ ಬಿಜೆಪಿ ಸೇರ್ತಾರೆ ಅಂತಿದ್ರೆ, ಇತ್ತ ಸುಮಲತಾ ಮಾತ್ರ ಜನಾಭಿಪ್ರಾಯ ಕೇಳ್ತೀನಿ ಅಂತ ಅಡ್ಡಗೋಡೆ ಮೇಲೆ ದೀಪವಿಟ್ಟ ಹೇಳಿಕೆ ನೀಡಿದ್ರು.

ಗುಟ್ಟು ಬಿಡದ ಸುಮಲತಾ: ಇನ್ನು ಸುಮಲತಾ ಮಾತ್ರ ಪಕ್ಷ ಸೇರ್ಪಡೆ ವಿಚಾರವಾಗಿ ಎಲ್ಲಿಯೂ ಸುಳಿವು ಬಿಟ್ಟುಕೊಡುತ್ತಿಲ್ಲ. ಎಂದಿನಂತೆ ತಮ್ಮದೆ ದಾಟಿಯಲ್ಲಿ ಬ್ಯಾಲೆನ್ಸಿಂಗ್ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ಆದ್ರೆ  ಬೆಂಬಲಿಗರು ಮಾತ್ರ ಈಗಾಗಲೇ ಬಿಜೆಪಿಯ ಹಲವು ಮುಖಂಡರ ಜೊತೆ ಗುರುತಿಸಿಕೊಂಡಿದ್ದಾರೆ. ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗೋದು ಪಕ್ಕಾ ಆಗಿದೆ.

Karnataka Politics: ಸುಮಲತಾರಿಗೆ ನ್ಯಾಚುರಲ್ ಚಾಯ್ಸ್ ಬಿಜೆಪಿ: ಸಚಿವ ಅಶ್ವತ್ಥ್ ನಾರಾಯಣ್

ಯಾವ ಪಕ್ಷಕ್ಕೆ ಹೋದ್ರು ಸುಮಲತಾಗೆ ಬೆಂಬಲಿಗರ ಬೆಂಬಲ: ಬಿಜೆಪಿ ಸೇರ್ಪಡೆ ಸುದ್ದಿ ಬಳಿಕ ಮದ್ದೂರಿನಲ್ಲಿ ಸುಮಲತಾ ಮುಖಂಡರ ಸಭೆ ಕರೆದಿದ್ದರು. ಸಾಕಷ್ಟು ಕುತೂಹಲ ಮೂಡಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಸುಮಲತಾಗೆ ಸಂಪೂರ್ಣ ಬೆಂಬಲ ಘೋಸಿದ್ರು. ನೀವು ಯಾವ ಪಕ್ಷಕ್ಕೆ ಹೋದರು ನಾವು ನಿಮ್ಮ ಜೊತೆ ಇರ್ತಿವಿ ಎಂದು ಬೆಂಬಲಿಗರು ಬಹಿರಂಗವಾಗಿಯೇ ಹೇಳಿದ್ರು. ಆದ್ರೆ ಸುಮಲತಾ ಅಂಬರೀಶ್ ಮಾತ್ರ, ಏನನ್ನು ಹೇಳದೆ ಎಲ್ಲರ ಅಭಿಪ್ರಾಯದಂತೆ ನಡೆಯುತ್ತೇನೆ ಎಂದು ಅಡ್ಡಗೋಡೆಮೇಲೆ ದೀಪವಿಟ್ಟಂತೆ ಮಾತನಾಡಿದ್ರು.

click me!