ಖಾಕಿ ಚಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಹಿಡಿದುಕೊಂಡರೆ ಯಾವ ಧರ್ಮವನ್ನೂ ಉಳಿಸೋಕೆ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಉತ್ತರ ಕನ್ನಡ (ಮೇ.22): ಬಿಜೆಪಿಯವರು ತಲವಾರು, ಪಿಸ್ತೂಲು ಎಲ್ಲಾ ಕೊಡ್ತಾರೆ. ನಿಮ್ಮ ಮಕ್ಕಳು ಜೈಲಿಗೆ ಹೋಗಬೇಕಾದರೆ ಬಿಜೆಪಿಗೆ ಹೋಗಿ, ಒಳ್ಳೆಯ ವಿದ್ಯಾಭ್ಯಾಸ ಬೇಕಂದರೆ ಕಾಂಗ್ರೆಸ್ ಬೆಂಬಲಿಸಿ. ಖಾಕಿ ಚಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಹಿಡಿದುಕೊಂಡರೆ ಯಾವ ಧರ್ಮವನ್ನೂ ಉಳಿಸೋಕೆ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗಿಬ್ ಮೈದಾನದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಗಡಿಭಾಗವನ್ನು ಚೀನಾ ಆಕ್ರಮಿಸಿದ್ದು, ಛಪ್ಪನ್ ಇಂಚ್ ಕಾ ಛಾತಿ ಹೊಂದಿರುವ ಮೋದಿಗೆ ಒಂದು ದಿನ ಚೀನಾ ಎಂದು ಹೇಳಲಿ. ಮನ್ ಕೀ ಬಾತ್‌ನಲ್ಲಿ ಚೀನಾ ಎಂದು ಹೇಳಲು ಅವರಿಗೆ ಧೈರ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಲಿ. ಕರ್ನಾಟಕದಲ್ಲಿ 20 ಡ್ಯಾಂ ಕಾಂಗ್ರೆಸ್ ಕಟ್ಟಿದ್ರೆ, ಬಿಜೆಪಿ ಒಂದು ಕೆರೆನೂ ಕಟ್ಟಿಸಿಲ್ಲ. ಬೆಂಗಳೂರಿನಲ್ಲಿ ಒಂದು ಗುಂಟೆ ಜಾಗವನ್ನೂ ಬಿಡದೇ ಎಲ್ಲಾ ಜಾಗವನ್ನು ಬಿಜೆಪಿಯವರು ನುಂಗಿ ಹಾಕಿದ್ದಾರೆ. ಬಿಜೆಪಿ ಲೂಟಿ ಸರಕಾರ, ವೈಫಲ್ಯ ಮುಚ್ಚಿಸಲು ಧರ್ಮದ ನಡುವೆ ಬಿರುಕು ಮೂಡಿಸುತ್ತಿದ್ದಾರೆ.
undefined
Land Slides: ಉತ್ತರ ಕನ್ನಡ ಜಿಲ್ಲೆಯ 5 ಸ್ಥಳಗಳಲ್ಲಿ ಮತ್ತೆ ಭೂಕುಸಿತ ಸಾಧ್ಯತೆ: ಈ 5 ಪ್ರದೇಶಗಳಿಗೆ ಅಪಾಯವಂತೆ!
ದೇಶದ ಪ್ರಪ್ರಥಮ ಉಗ್ರವಾದಿ ನಾಥೋರಾಮ್ ಗೋಡ್ಸೆ ಗಾಂಧಿಯನ್ನು ಕೊಂದ. ಅದರೆ, ಗಾಂಧಿಯವರ ಸಿದ್ಧಾಂತ ದೇಶದಲ್ಲಿ ಇನ್ನೂ ಉಳಿದುಕೊಂಡಿದೆ. ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸಿದರು. ಬಿಜೆಪಿಯವರು ಯಾರೂ ಪ್ರಾಣ ತ್ಯಾಗ ಮಾಡಿಲ್ಲ. ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದರೂ ಹಾಗೂ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಇಂದು ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತ, ದಲಿತರ, ಮಹಿಳೆಯರ ದೌರ್ಜನ್ಯದ ಹಿಂದೆ ದೊಡ್ಡ ಷಡ್ಯಂತ್ರವಿದೆ: ಕರ್ನಾಟಕದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಸದ್ದು ಮಾಡುತ್ತಿರುವ ಕೋಮು ಸೌಹಾರ್ದತೆ ಕದಡುವಂತಹ ವಿಚಾರಗಳು ಇಡೀ ದೇಶದಲ್ಲೇ ಸದ್ದು ಮಾಡುತ್ತಿವೆ. ಹೀಗಿರುವಾಗ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವ ನಾಯಕರೂ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಎಲ್ಲಾ ವಿಚಾರಗಳ ನಡುವೆಯೇ ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ್ದಾರೆ.
Karwar: ಕಡುಬಡತನದಲ್ಲಿ ಅರಳಿದ ಪ್ರತಿಭೆ: ಅಂಗವಿಕಲ ಯುವತಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ
ಹೌದು ಬೆಳಗಾವಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿ, ಆರ್‌ಎಸ್ಎಸ್‌ನವರು ಕರ್ನಾಟಕದ ಜನ ತಲೆತಗ್ಗಿಸುವಂತ ಕೆಲಸ ಮಾಡ್ತಿದ್ದಾರೆ ಎಂದಿರುವ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ. ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು ಎಂದಿದ್ದಾರೆ.