* ಕಾರ್ಯಕರ್ತರ ಶ್ರಮದಿಂದ ಗೆಲುವು
* ಎಲ್ಲ ಹಂತಗಳಲ್ಲೂ ವಿಫಲವಾದ ಬಿಜೆಪಿ ಸರ್ಕಾರ
* ಚುನಾವಣೆ ಫಲಿತಾಂಶ ಬಿಜೆಪಿಯ ಅವನತಿ ಆರಂಭವಾಗಿದ್ದರ ಮುನ್ಸೂಚನೆ
ಲಕ್ಷ್ಮೇಶ್ವರ(ಡಿ.19): ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಗೆಲುವು ಸಾಧಿಸಲು ಕಾಂಗ್ರೆಸ್(Congress) ಪಕ್ಷದ ಕಾರ್ಯಕರ್ತರು(Activists) ಹಗಲಿರುಳು ಶ್ರಮವಹಿಸಿದರ ಫಲವಾಗಿದೆ ಎಂದು ವಿಪ ಸದಸ್ಯ ಸಲೀಂ ಅಹ್ಮದ್(Saleem Ahmed) ಹೇಳಿದರು.
ಪಟ್ಟಣದ ಚೆನ್ನಮ್ಮನ ವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ(Karnataka) ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ(BJP Government) ಎಲ್ಲ ಹಂತಗಳಲ್ಲಿ ವಿಫಲವಾಗಿದೆ. ಜನರು ನೆರ, ಬೆಳೆ ಹಾನಿ(Crop Damage), ಕೊರೋನಾದಿಂದ(Coronavirus) ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಯಾವುದೇ ಸಚಿವರು ಮತ್ತು ಶಾಸಕರು ಮಾಡುತ್ತಿಲ್ಲ. ಇದರಿಂದ ರೋಸಿ ಹೋದ ಜನತೆ ಬಿಜೆಪಿ ವಿರುದ್ಧ ಮತ(Vote) ಚಲಾಯಿಸುತ್ತಿದ್ದಾರೆ ಎಂದರು.
undefined
Gadag: ಕಾಂಗ್ರೆಸ್‌ನಿಂದ ಪ್ರತಿಭಟನೆಯ ನಾಟಕ: ತಾಕತ್ತಿದ್ದರೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ: ರಾಮುಲು
11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿದೆ ಎಂಬುದು ಹೆಮ್ಮೆ ಪಡುವ ಸಂಗತಿ. ಪಕ್ಷವು ಬಡವರ, ದಿನ ದಲಿತರ, ಶೋಷಿತರ, ನೊಂದವರ ಪಕ್ಷವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಕಟ್ಟುವಲ್ಲಿ ಪಕ್ಷ ಶ್ರಮಿಸಿದ್ದು, ಅದರ ಫಲವಾಗಿ ಇಂದು ನಾವೆಲ್ಲ ಸಾಮರಸ್ಯದಿಂದ ಜೀವನ ಸಾಗಿಸುವಂತಾಗಿದೆ. ಬಿಜೆಪಿಯ ಅವನತಿ ಆರಂಭವಾಗಿದ್ದರ ಮುನ್ಸೂಚನೆಯಾಗಿ ಕಾಂಗ್ರೆಸ್ ಅಭ್ಯರ್ಥಿಗಳು ವಿರೋಧ ಪಕ್ಷದಲ್ಲಿದ್ದರೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಶಿವಕುಮಾರಗೌಡ ಪಾಟೀಲ, ಶಿಗ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಎಂ.ಎಸ್. ದೊಡ್ಡಗೌಡರ ಮಾತನಾಡಿದರು.
ಸಭೆಯಲ್ಲಿ ಡಿ.ಕೆ. ಹೊನ್ನಪ್ಪನವರ, ಚೆನ್ನಪ್ಪ ಜಗಲಿ, ಬಸವರಾಜ ಹೊಳಲಾಪೂರ, ಭರತ ನಾಯ್‌್ಕ, ವೀರಣ್ಣ ಅಂಗಡಿ, ಪ್ರಕಾಶ ಮಹಾಜನಶೆಟ್ಟರ, ರಾಮು ಗಡದವರ, ಜಯಕ್ಕ ಕಳ್ಳಿ, ಯಲ್ಲಪ್ಪಗೌಡ ಪಾಟೀಲ, ನಾನಪ್ಪ ಲಮಾಣಿ, ಗಣೇಶ ನಾಯ್ಕ, ರಫೀಕ್ ಕಲಬುರ್ಗಿ ಇದ್ದರು. ಜಿ.ಆರ್. ಕೊಪ್ಪದ ಸ್ವಾಗತಿಸಿದರು. ಹುಮಾಯೂನ್ ಮಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪ್ಪಣ್ಣ ಸಂಶಿ ಕಾರ್ಯಕ್ರಮ ನಿರೂಪಿಸಿದರು. ಅಮರೀಶ ತೆಂಬದಮನಿ ವಂದಿಸಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿಯಿಂದ ರಾಜಕಾರಣ
ನರಗುಂದ: ಮಹದಾಯಿ(Mahadayi) ಯೋಜನೆ ಜಾರಿಯಲ್ಲಿ ಬಿಜೆಪಿ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆರೋಪಿಸಿದರು.
Karnataka Politics: ಜನತೆಯ ಆಶೋತ್ತರಗಳಿಗೆ ಕಾಂಗ್ರೆಸ್ ಸ್ಪಂದನೆ: ತಿಮ್ಮಾಪೂರ
ಶುಕ್ರವಾರ ಪಟ್ಟಣದ ಮಲಪ್ರಭಾ ಆಯಿಲ್ ಮಿಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಉತ್ತರ ಕರ್ನಾಟಕ(North Karnataka) ಭಾಗದ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತರಿಗೆ(Farmers) ಕುಡಿಯುವ ನೀರು(Drinking Water) ಪೂರೈಕೆ ಮಾಡುವ ಮಹದಾಯಿ ಹಾಗೂ ಕಳಸಾ ಬಂಡೂರಿ(Kalasa Banduri) ನಾಲಾ ಯೋಜನೆಗೆ ಕಾಂಗ್ರೆಸ್ ವಿರೋಧವಿಲ್ಲ. ಈ ಯೋಜನೆ ಜಾರಿಗಾಗಿ ಆಗ್ರಹಿಸಿ ಮುಂದಿನ ದಿನಗಳಲ್ಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಕೆಲವು ಬಿಜೆಪಿ ಮುಖಂಡರು ಕರ್ನಾಟಕ(Karnataka) ಮತ್ತು ಗೋವಾ(Goa) ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಈ ಯೋಜನೆ ಜಾರಿ ಸಾಧ್ಯವೆಂದು ಹೇಳಿದ್ದರು. ಇಂದು ಮೂರು ಕಡೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಏಕೆ ಈ ಯೋಜನೆ ಜಾರಿಯಾಗುತ್ತಿಲ್ಲ ಎಂಬುದನ್ನು ರೈತರಿಗೆ ಬಿಜೆಪಿ ಮುಖಂಡರು ತಿಳಿಸಬೇಕು ಎಂದರು.