ಸಿಎಂ ಮನೆಗೆ ಸಂತೋಷ್, ಕಟೀಲ್;   ಸಂಪುಟ ಸರ್ಜರಿ ಪಟ್ಟಿ ಫೈನಲ್?

By Suvarna NewsFirst Published Nov 23, 2020, 7:57 PM IST
Highlights

ಸಚಿವ ಸಂಪುಟ ಪುನಾರಚನೆಗೆ ಕಾಲ ಸನ್ನೀಹಿತ/ ಸಿಎಂ ಮನೆಯಲ್ಲಿ ಗರಿಗೆದರಿದ ರಾಜಕಾರಣದ ಚಟುವಟಿಕೆ/ ಸಿಎಂ ಭೇಟಿ ಮಾಡಿದ ಬಿ ಎಲ್ ಸಂತೋಷ್  ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್/ ಅಂತಿಮ ಪಟ್ಟಿ ಸಿದ್ಧ 

ಬೆಂಗಳೂರು(ನ.  23)  ಮತ್ತೆ ರಾಜ್ಯ ಸಚಿವ ಸಂಪುಟ ಪುನಾರಚನೆ  ವಿಚಾರ ಚರ್ಚೆಗೆ ಬಂದಿದೆ. ಇದಕ್ಕೆ ಕಾರಣ ಬಿ ಎಲ್ ಸಂತೋಷ್  ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಮನೆಗೆ ಭೇಟಿ ನೀಡಿದ್ದು ಅಂತಿಮ ಚಿತ್ರಣ ಸಿಕ್ಕಿದೆ ಎನ್ನಲಾಗಿದೆ.

ಸಂಪುಟ ಪುನಾರಚನೆಗೆ ಸಿಕ್ತಾ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್..? ಪುನಾರಚನೆ ಮಾಡುವಂತೆ ಬಿ ಎಲ್ ಸಂತೋಷ್ ಸಿಎಂ ಗೆ ತಿಳಿಸಿದ್ರಾ.. ಇದೀಗ ಸಂಪುಟ ಪುನಾರಚನೆ ಗೆ ಮುಂದಾದ್ರಾ ಸಿಎಂ ಬಿಎಸ್ವೈ..? ಎನ್ನುವಂತಹ ಪ್ರಶ್ನೆ ಮೂಡಿದೆ.

HDK ಮಾತಿಗೆ ದನಿಗೂಡಿಸಿದ ಎಂದ ಡಿಸಿಎಂ ಅಶ್ವತ್ ನಾರಾಯಣ್!

ಸಿಎಂ ಕಡೆಯಿಂದ ಎಷ್ಟು ಜನರನ್ನು ಸೇರಿಸಿಕೊಳ್ಳಬೇಕು, ಪಕ್ಷದಿಂದ ಯಾರನ್ನು ಸೇರಿಸಿಕೊಳ್ಳಬೇಕು, ಹಾಲಿ ಸಂಪುಟದಿಂದ ಯಾರನ್ನು ಕೈ ಬಿಡಬೇಕು ಎಂಬುದರ ಬಗ್ಗೆ ಚರ್ಚೆಯಾಗಲಿದೆ.  ಸಿಎಂ ಜೊತೆಗಿನ ನಳೀನ್ ಕುಮಾರ್ ಕಟೀಲ್ ಭೇಟಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.  ಇದೇ ಗುರುವಾರ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಚರ್ಚೆ ಕುರಿತು ಕಳೆದೆರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಬಂದ ಸಿಎಂ ಬಿಎಸ್​ವೈ ಈ ಕುರಿತು ಮೌನವಹಿಸಿದ್ದಾರೆ. ಈ ಕುರಿತು ಯಾವುದೇ ಹೇಳಿಕೆಯನ್ನು ಹೈ ಕಮಾಂಡ್​ ಆಗಲಿ ನೀಡಿಲ್ಲ. ಈಗ ಬಿಎಲ್​ ಸಂತೋಷ್ ಮೂಲಕ ಹೈ ಕಮಾಂಡ್​ ಸುದ್ದಿ ಮುಟ್ಟಿಸಿದ್ದಾರೆ. ಇದೇ ಕಾರಣಕ್ಕೆ ಈ ಭೇಟಿಗಳು ಮಹತ್ವ ಪಡೆದುಕೊಂಡಿವೆ. 

click me!