
ತುಮಕೂರು(ನ. 23) ಸಿಎಂ ಆಗಿ ಯಡಿಯೂರಪ್ಪ ಮುಂದುವರೆಯಲಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಡಿಸಿಎಂ ಸಿ. ಎನ್. ಅಶ್ವತ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಳಿಯೇ ಕೇಳಬೇಕು. ಸಿಎಂ ಹಾಗೂ ವರಿಷ್ಠರ ಮಧ್ಯೆ ಇರವಂತಹದ್ದು, ಅವರನ್ನೇ ಕೇಳಬೇಕು ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
'ಕೈ' ಬಿಟ್ಟು ಕಮಲ ಹಿಡಿದಿದ್ದ ಜಯಪ್ರಕಾಶ್ ಹೆಗ್ಡೆಗೆ ಭರ್ಜರಿ ಗಿಫ್ಟ್ ನೀಡಿದ ಸರ್ಕಾರ
ಡಿಕೆಶಿ ಸಿಬಿಐ ವಿಚಾರಣೆ ವಿಚಾರದ ಬಗ್ಗೆಯೂ ಮಾತನಾಡಿದ ಡಿಸಿಎಂ, ಅವರ ಪರವಾಗಿ ಇದ್ದಾಗ ಒಂದು, ವಿರುದ್ಧ ಇದ್ದಾಗ ಇನ್ನೊಂದು. ಕಾನೂನು ಕಾನೂನೇ ,ಕಾನೂನು ಎಲ್ಲರಿಗೂ ಅನ್ವಯಿಸುತ್ತೆ. ಪ್ರತ್ಯೇಕವಾಗಿ ವ್ಯಕ್ತಿ ಆಧಾರಿತವಾಗಿ ಕಾನೂನು ಅನ್ವಯವಾಗಲ್ಲ. ಎಲ್ಲರಿಗೂ ಕಾನೂನು ಒಂದೇ.ಕಾನೂನು ಪಾಲನೆಗೆ ಅವಕಾಶ ನೀಡಬೇಕು. ಈ ರೀತಿ ಹೇಳಿಕೆ ನೀಡಿದರೇ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದಂತೆ ಆಗುವುದಿಲ್ಲ ಎಂದರು.
ಕೆಂಪೇಗೌಡ ಪ್ರಾಧಿಕಾರ ಮಾಜಿ ಸಿಎಂ ಎಚ್ ಡಿಕೆ ಹೇಳಿಕೆ ವಿಚಾರದ ಬಗ್ಗೆಯೂ ಮಾತನಾಡಿ, ಒಂದು ಜನಾಂಗಕ್ಕೆ ಪ್ರಾಧಿಕಾರ ಮಾಡಿದಾಗ ,ಭಾಷೆಗೆ ಮಾಡಿದಾಗ ಎಲ್ಲರ ಅಪೇಕ್ಷೆ ಸಹಜ. ಒಕ್ಕಲಿಗ ಜನಾಂಗಕ್ಕೂ ಅಪೇಕ್ಷೆ ಇದೆ,ಅದು ಆಗುತ್ತೆ,ಆಗಲೇಬೇಕಾಗುತ್ತೆ,
ಬೇರೆ ದಾರಿಯಿಲ್ಲ. ಇದಕ್ಕೆ ನನ್ನ ಸಹಮತ ಇದೆ ಎಂದು ಒಕ್ಕಲಿಗ ಪ್ರಾಧಿಕಾರದ ಪರ ಬ್ಯಾಟ್ ಬೀಸಿದರು.
ರೋಷನ್ ಬೇಗ್ ಬಂಧನ ಕಾನೂನಾತ್ಮಕವಾಗಿ ನಡೆದಿದೆ. ಸತ್ಯವನ್ನು ಬೆಳಕಿಗೆ ತರುವ ಪ್ರಯತ್ನ ನಡೆದಿದೆ. ಸತ್ಯಾಸತ್ಯತೆ ನೋಡಿ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.