ಪ್ರಧಾನಿ ಸೋಲಿಸಬೇಕೆಂಬ ಇಂಡಿಯಾ ಒಕ್ಕೂಟದವರು ಹಮಾಸ್ ಉಗ್ರರಿಗೆ ಬೆಂಬಲ ನೀಡ್ತಿದ್ದಾರೆ. ಈ ಸರ್ಕಾರಕ್ಕೆ ರಾಕ್ಷಸರನ್ನು ಬೆಂಬಲಿಸುವುದು ರೂಡಿ. ಇಲ್ಲಿ ಮಹಿಷಾಸುರನನ್ನು ಬೆಂಬಲಿಸುತ್ತಾರೆ. ಅಲ್ಲಿ ಹಮಾಸ್ ಉಗ್ರರನ್ನು ಬೆಂಬಲಿಸುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ತುಮಕೂರು (ಅ.13): ಪ್ರಧಾನಿ ಸೋಲಿಸಬೇಕೆಂಬ ಇಂಡಿಯಾ ಒಕ್ಕೂಟದವರು ಹಮಾಸ್ ಉಗ್ರರಿಗೆ ಬೆಂಬಲ ನೀಡ್ತಿದ್ದಾರೆ. ಈ ಸರ್ಕಾರಕ್ಕೆ ರಾಕ್ಷಸರನ್ನು ಬೆಂಬಲಿಸುವುದು ರೂಡಿ. ಇಲ್ಲಿ ಮಹಿಷಾಸುರನನ್ನು ಬೆಂಬಲಿಸುತ್ತಾರೆ. ಅಲ್ಲಿ ಹಮಾಸ್ ಉಗ್ರರನ್ನು ಬೆಂಬಲಿಸುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ತುಮಕೂರಿನ ರಾಮ ಮಂದಿರದಲ್ಲಿ ಜನಗಣಮನ ಯಾತ್ರೆ ಕಾರ್ಯಕ್ರಮ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಒಂದು ಪಾರ್ಟಿಯ ಅಧಿನಾಯಕಿ ಎನ್ ಕೌಂಟರ್‌ನಲ್ಲಿ ಸತ್ತ ಭಯೋತ್ಪಾದಕನಿಗಾಗಿ ಕಣ್ಣೀರು ಹಾಕ್ತಾರೆ. ಈ ದೇಶದ ಮೇಲೆ ಆಕ್ರಮಣ ಮಾಡುವಂತಹ ಭಯೋತ್ಪಾದಕರನ್ನು ಬೆಂಬಲಿಸುವವರಿಗೆ, ಈ ದೇಶದ ಅಧಿಕಾರ ಕೊಡೊಕಾಗುತ್ತಾ ಎಂದರು.
ಪಿ.ಚಿದಂಬರಂ ಅವರು ಈ ದೇಶದ ಹಳ್ಳಿಗರನ್ನು ದಡ್ಡರೆಂದು ಕರೆದ್ರು. ಪ್ರಧಾನಿ ಮೋದಿ ಭಾರತವನ್ನು ಡಿಜಿಟಲ್ ಎಕಾನಮಿಯಾಗಿ ಬದಲಾಯಿಸಿದರು. ಇದು ಪೊಲಿಟಿಕಲ್ ಯಾತ್ರೆ ಅಲ್ಲ. ನಮ್ಮ ಯಾತ್ರೆಗೆ ಎಲ್ಲಾ ಪಾರ್ಟಿಯವರು ಬರ್ತಾರೆ. ವ್ಯಕ್ತಿತ್ವದ ದೃಷ್ಠಿಯಿಂದ ನರೇಂದ್ರ ಮೋದಿಯೆ ಶ್ರೇಷ್ಠ ಎಂದರು. ಜನಗಣ ಮನ ಬೆಸೆಯುವ ಯಾತ್ರೆ ಯಾಗಿದೆ, ಜನರನ್ನು ಬೆಸೆಯುವ ಉದ್ದೇಶವಾಗಿದೆ. ರಾಷ್ಟ್ರವನ್ನು ಶ್ರೇಷ್ಠ ಗೊಳಿಸುವ ಉದ್ದೇಶದ ಯಾತ್ರೆ ಯಾಗಿದೇ ಎಂದು ತಿಳಿಸಿದ್ದಾರೆ. ಒಟ್ಟು 3500 ಕಿಲೋ ಮೀಟರ್ ಯಾತ್ರೆ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ದಲಿತರ ಸಹಭೋಜನ ಮಾಡಿದ್ವಿ. ಹೀಗೆ ಪ್ರತಿದಿನ ಎಲ್ಲಾ ಸಮುದಾಯದೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.
undefined
ಕಾಂಗ್ರೆಸ್ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ
ಪ್ರಧಾನಿ ಮೋದಿಯವರು ಭಾರತವನ್ನು ಶ್ರೇಷ್ಟಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲಿಸಿ ಭಾರತವನ್ನು ಶ್ರೇಷ್ಟಗೊಳಿಸೊಣ. ಮೋದಿಯವರಿಗೆ ಬಲ ತುಂಬುವ ಪ್ರಯತ್ನ ಎಂದರು. ಎಲ್ಲರೂ ಮೋದಿಯವರಿಗೆ ಬೆಂಬಲ ಕೊಡುವ ಸಂಕಲ್ಪ ಮಾಡಬೇಕು. ಮತ್ತೊಮ್ಮೆ ಅವರ ಕೈಗೆ ಈ ರಾಷ್ಟ್ರವನ್ನು ಕೊಟ್ಟು ಭಾರತವನ್ನು ವಿಶ್ವ ಗುರು ಮಾಡಬೇಕು. ಉಚಿತ ಗ್ಯಾರೆಂಟಿಗಳಿಗೆ ಜನ ವೋಟ್ ಹಾಕಿದ್ರೂ. 2 ಸಾವಿರ ರೂಪಾಯಿಗೆ ಓಟ್ ಹಾಕಿದ್ರೂ, ಅದು ಒಂದು ತಿಂಗಳು ಬಂತು ಇನ್ನೊಂದು ಬರಲಿಲ್ಲ ಎಂದರು. ಕರೆಂಟ್ ಫ್ರೀ ಅಂತ ವೋಟ್ ಹಾಕಿದ್ರೂ ಕರೆಂಟ್ ಬರ್ಲಿಲ್ಲ.
ರಾಜ್ಯದಲ್ಲಿ ಉಚಿತ ಗ್ಯಾರಂಟಿಯಿಂದ ಡೆವಲ್ಮೆಂಟ್ ಆಕ್ಟಿವಿಟಿ ಸತ್ತೋಗುತ್ತೆ. ನಮಗೆ ಡೆವಲಪ್ಮೆಂಟ್ ಮಾಡ್ಲಿಕ್ಕೆ ಆಗ್ತಿಲ್ಲ ಎಲ್ಲಾ ಗ್ಯಾರೆಂಟಿಗಳಿಗೆ ಹಣ ಖರ್ಚಾಗ್ತಿದೆ ಈಗಂತ ಕಾಂಗ್ರೆಸ್ ಶಾಸಕರೆ ಹೇಳ್ತಿದ್ದಾರೆ. 1.25 ಲಕ್ಷ ಕೋಟಿ ಹೆಚ್ಚುವರಿ ಹಣ ಬೇಕಾಗಿದೆ ಎಂದರು. ದಲಿತರಿಗೆ ಮೀಸಲಾದ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಳ್ಳಲಾಗಿದೆ. ನಾಲ್ಕು ತಿಂಗಳಿಂದ ಬಿಸಿಯೂಟಕ್ಕೆ ಅನುದಾನ ಸಿಕ್ಕಿಲ್ಲ. ಇದೇ ರೀತಿ ಮುಂದುವರೆದರೆ ಕರ್ನಾಟಕದ ಅಭಿವೃದ್ಧಿ ನಿಲ್ಲುತ್ತೆ ಎಂದರು. ಇಂತಹ ಗವರ್ನಮೆಂಟ್ ಕೇಂದ್ರದಲ್ಲಿ ಬಂದರೆ ದೇಶದ ಕಥೆ ಏನಾಗುತ್ತೆ..? ಅದ್ಕೆ ಮೊದಲು ಶುರುಮಾಡಿದ್ದೇವೆ, ಇಲ್ಲಿ ಆಗಿದ್ದಂತಹ ತಪ್ಪು ಬೇರೆ ಕಡೆ ಆಗಬಾರದು.
ರಾಮನ ಜನ್ಮಸ್ಥಳ ಹಿಂದುಗಳ ಪವಿತ್ರ ಪುಣ್ಯಭೂಮಿ: ಚಕ್ರವರ್ತಿ ಸೂಲಿಬೆಲೆ
ಕರ್ನಾಟಕದಲ್ಲಿ ಐದು ವರ್ಷ ಅಭಿವೃದ್ಧಿ ಹಾಳಾದ್ರೂ, ಬೇರೆಕಡೆ ಸೇರ್ಕೊಂಡು ನಾವು ಮುಂದುವರೆಯುವ ಸಾಧ್ಯತೆ ಇದೆ ಎಂದರು. ನರೇಂದ್ರ ಮೋದಿಯಂತಹ ವಜ್ರವನ್ನು ಕಳೆದುಕೊಳ್ಳಬಾರದು. ಹಮಾಸ್ ನಂತಹ ರಾಕ್ಷಸ ಉಗ್ರರು ನಮ್ಮ ಪಕ್ಕದಲ್ಲೆ ಇದ್ದಾರೆ. ಪಾಕಿಸ್ಥಾನದಲ್ಲಿ ಲಷ್ಕರೆ ತೊಯಿಬಾ, ಐಸಿಸ್ ಉಗ್ರರಿದ್ದಾರೆ. ಇಸ್ರೇಲ್ ನಲ್ಲಿ ಆದಂತಹ ದಾಳಿ ನಮ್ಮಮೇಲೆ ಆಗಬೇಕಾಗಿತ್ತು ಎಂದರು. ಪ್ರಧಾನಿ ಮೋದಿಯಂತಹ ದೊಡ್ಡ ರಕ್ಷಣಾ ಗೋಡೆ ಇದೆ. ಇದೇ ವೇಳೆ ಭಾರತ್ ಮಾತಾ ದೇವಿಗೆ ಪೂಜೆ ಸಲ್ಲಿಸಿದರು. 16 ದಿನಗಳಿಂದ ನಮೋ ಬ್ರಿಗೆಡ್ ಯಾತ್ರೆ, ಕೋಲಾರದಿಂದ ಕರಾವಳಿ ಭಾಗದಿಂದ ಉತ್ತರ ಕರ್ನಾಟಕದಲ್ಲಿ ಸುತ್ತಾಡಿ ಇವತ್ತು ತುಮಕೂರಿಗೆ ಬಂದಿದ್ದೇವೆ ಎಂದರು. ಸಿದ್ದಗಂಗಾ ಮಠ, ಡಾಬಸ್ಪೇಟೆ ನೆಲಮಂಗದಲ್ಲಿ ಕಾರ್ಯಕ್ರಮವಿದೆ. ಇಂದು ಬೆಂಗಳೂರಿನಲ್ಲಿ ಕೊನೆಯ ಕಾರ್ಯಕ್ರಮವಿದೆ ಎಂದು ತಿಳಿಸಿದರು.