Lok Sabha Elections 2024: ಇವಿಎಂ ತೀರ್ಪು ವಿಪಕ್ಷಗಳಿಗೆ ಚಾಟಿ: ಪ್ರಧಾನಿ ಮೋದಿ

By Kannadaprabha News  |  First Published Apr 27, 2024, 7:00 AM IST

ಚುನಾವಣೆಗೆ ಮರಳಿ ಮತಪತ್ರ ಬಳಸಬೇಕು ಮತ್ತು ಇವಿಎಂಗಳಲ್ಲಿ ಚಲಾವಣೆಯಾಗುವ ಎಲ್ಲಾ ಮತಗಳನ್ನು ವಿವಿಪ್ಯಾಟ್‌ನಲ್ಲಿ ಮುದ್ರಿತವಾಗುವ ಪ್ರತಿಯೊಂದಿಗೆ ಮತತಾಳೆ ನಡೆಸಬೇಕು ಎಂದು ಕೋರಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾ ಮಾಡಿದ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ


ಅರಾರಿಯಾ(ಬಿಹಾರ)(ಏ.27):  ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ಗಳ ಮೇಲಿನ ಅನುಮಾನಗಳನ್ನು ನಿವಾರಿಸಿದ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳಿಗೆ ಹಾಕಿದ ತಪರಾಕಿ. ಇದೇ ವಿಷಯ ಮುಂದಿಟ್ಟು ಹಲವು ವರ್ಷಗಳಿಂದ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದ ವಿಪಕ್ಷಗಳು, ಈ ಕುರಿತು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹ ಮಾಡಿದ್ದಾರೆ.

ಚುನಾವಣೆಗೆ ಮರಳಿ ಮತಪತ್ರ ಬಳಸಬೇಕು ಮತ್ತು ಇವಿಎಂಗಳಲ್ಲಿ ಚಲಾವಣೆಯಾಗುವ ಎಲ್ಲಾ ಮತಗಳನ್ನು ವಿವಿಪ್ಯಾಟ್‌ನಲ್ಲಿ ಮುದ್ರಿತವಾಗುವ ಪ್ರತಿಯೊಂದಿಗೆ ಮತತಾಳೆ ನಡೆಸಬೇಕು ಎಂದು ಕೋರಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾ ಮಾಡಿದ ಬೆನ್ನಲ್ಲೇ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

Tap to resize

Latest Videos

ಇವಿಎಂ ಬಗ್ಗೆ ಇದ್ದ ಅನುಮಾನ ಕ್ಲಿಯರ್‌ ಆಗಿದೆ, ಚುನಾವಣೆ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

ಬಿಹಾರದ ಅರಾರಿಯಾದಲ್ಲಿ ಶುಕ್ರವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಮತಗಟ್ಟೆಗಳ ಅಪಹರಣದ ಮೂಲಕ ಬಡವರು, ಹಿಂದುಳಿದವರು ಮತ್ತು ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಆದರೆ ಇವಿಎಂಗಳ ಜಾರಿ ಬಳಿಕ ಅವರ ಅಟಕ್ಕೆ ಬ್ರೇಕ್‌ ಬಿದ್ದಿತ್ತು. ಹೀಗಾಗಿಯೇ ಅವರು ಜನರಲ್ಲಿ ಇವಿಎಂಗಳ ಬಗ್ಗೆ ಗೊಂದಲ ಸೃಷ್ಟಿಸುವ ತಪ್ಪು ಮಾಡಿದರು. ಆದರೆ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಈ ಪಕ್ಷಗಳಿಗೆ ಹಾಕಿದ ತಪರಾಕಿಯಾಗಿದೆ. ಮತ್ತೆ ಹಿಂದಿನಂತೆ ಮತಪೆಟ್ಟಿಗೆ ತಂದು ಮತಗಳನ್ನು ಲೂಟಿ ಮಾಡಲು ಸಂಚು ರೂಪಿಸಿದವರಿಗೆ ಮುಖಭಂಗವಾಗಿದೆ’ ಎಂದು ಕಿಡಿಕಾರಿದರು.

click me!