
ಗುಣಾ(ಮ.ಪ್ರ)(ಏ.27): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಈ ಮೂಲಕ ಹೊಸ ಸರ್ಕಾರದ ಇರಾದೆಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ವೈಯಕ್ತಿಕ ವೈವಾಹಿಕ ಕಾನೂನು ಜಾರಿ ಮಾಡಲು ಕಾಂಗ್ರೆಸ್ ನಾಯಕ ‘ರಾಹುಲ್ ಬಾಬಾ’ಗೆ (ರಾಹುಲ್ ಗಾಂಧಿ) ಆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಪಿಪ್ರಾಯ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅಮಿತ್ ಶಾ, ‘ರಾಹುಲ್ ಬಾಬಾ, ನೀವು ಓಲೈಕೆಗಾಗಿ ಏನು ಬೇಕಾದರೂ ಮಾಡಿ. ಆದರೆ ಮಾಡಿ ಬಿಜೆಪಿ ಎಲ್ಲಿ ತನಕ ಇರುತ್ತದೆಯೋ ಅಲ್ಲಿಯವರೆಗೂ ನಿಮ್ಮ ವೈಯುಕ್ತಿಕ ಕಾನೂನುಗಳನ್ನು (ಮುಸ್ಲಿಂ ಪರ ಕಾನೂನು) ಜಾರಿಗೆ ತರುವುದಕ್ಕೆ ಆಗುವುದಿಲ್ಲ. ಇದು ನಮ್ಮ ಭರವಸೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಉತ್ತರಾಖಂಡ್ ನಲ್ಲಿ ಜಾರಿಗೆ ತಂದಂತೆ ಏಕರೂಪ ನಾಗರಿಕ ರೂಪ ಸಂಹಿತೆಯನ್ನು ದೇಶದೆಲ್ಲಡೆ ಜಾರಿಗೆ ತರುತ್ತೇವೆ. ಇದು ಮೋದಿ ಗ್ಯಾರಂಟಿ’ ಎಂದು ಶಾ ಗುಡುಗಿದರು.
ಒಬಿಸಿ ಮೀಸಲು ಕಸಿಯಲು ಬಿಡಲ್ಲ: ಪ್ರಧಾನಿ ಮೋದಿ ಗ್ಯಾರಂಟಿ
ಇದೇ ವೇಳೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಕ್ಸಲೀಯ ಚಟುವಟಿಕೆ ಮತ್ತು ಉಗ್ರವಾದ ಕೊನೆಯಾಗಿದೆ ಎಂದ ಅಮಿತ್ ಶಾ, ‘2019ರಲ್ಲಿ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿತ್ತು. ಇದು ರಾಹುಲ್ ಗಾಂಧಿಯವರಲ್ಲಿ ಭಯ ಹುಟ್ಟಿಸಿತ್ತು. ಅಂದು ರಾಹುಲ್ ಗಾಂಧಿ, ಕಾಯ್ದೆ ರದ್ದು ಮಾಡಿದ ಪರಿಣಾಮ ರಕ್ತದ ನದಿ ಹರಿಯುತ್ತದೆ ಎಂದಿದ್ದರು. ಆದರೆ ಇದು ಕಾಂಗ್ರೆಸ್ ಸರ್ಕಾರವಲ್ಲ, ಬಿಜೆಪಿ ಸರ್ಕಾರ. ರಕ್ತದ ನದಿಗಳ ಬಗ್ಗೆ ಮಾತನಾಡುವುದು ಇರಲಿ ಅವರಿಗೆ ಒಂದು ಕಲ್ಲು ಎಸೆಯುವ ಧೈರ್ಯವೂ ಇಲ್ಲ.’ ಎಂದು ಹರಿಹಾಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.