ಪ್ರಧಾನಿ ಮೋದಿ ಅವರು ಶತಮಾನಗಳ ವಿವಾದ ಬಗೆಹರಿಸಿ ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪಿಸಿರುವುದು ಸ್ವಾಗತಾರ್ಹ. ಈಗಲಾದರೂ ಪ್ರಧಾನಿಗಳು ಹಸಿವು ಮತ್ತು ಸಂಕಷ್ಟದಲ್ಲಿರುವವರ ಬಗ್ಗೆ ಗಮನಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಮೈಸೂರು (ಜ.25): ಪ್ರಧಾನಿ ಮೋದಿ ಅವರು ಶತಮಾನಗಳ ವಿವಾದ ಬಗೆಹರಿಸಿ ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪಿಸಿರುವುದು ಸ್ವಾಗತಾರ್ಹ. ಈಗಲಾದರೂ ಪ್ರಧಾನಿಗಳು ಹಸಿವು ಮತ್ತು ಸಂಕಷ್ಟದಲ್ಲಿರುವವರ ಬಗ್ಗೆ ಗಮನಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು. ದೇಶದಲ್ಲಿ ಜನತೆ ಬಡತನದ ಸಂಕಷ್ಟದಲ್ಲಿ ನರಳುತ್ತಿದ್ದಾರೆ. ಮಕ್ಕಳ ಶಿಕ್ಷಣ ಶುಲ್ಕ ಕಟ್ಟಲಾಗದೇ, ಹಸಿವು ಆವರಿಸಿ ಬಳಲುತ್ತಿದ್ದಾರೆ. ಆದ್ದರಿಂದ ಪ್ರಧಾನಿ ಮೋದಿ ಇದರತ್ತಲೂ ಗಮನ ಹರಿಸಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನೀರವ್ ಮೋದಿ ಮೊದಲಾದವರನ್ನು ದೇಶಕ್ಕೆ ಎಳೆತರಲಾಗುವುದು, ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ನೀಡುವುದಾಗಿ ನೀಡಿದ್ದ ಭರವಸೆ ಪ್ರಧಾನಿ ಮರೆತಂತಿದೆ. ಮೊದಲು ಈ ಕೆಲಸ ಮಾಡಿ ಜನರನ್ನು ಬಡತನದಿಂದ ಮುಕ್ತಗೊಳಿಸಿ ಎಂದು ಅವರು ಒತ್ತಾಯಿಸಿದರು. ರಾಮನನ್ನು ಪ್ರಧಾನ ಚುನಾವಣಾ ಪ್ರಚಾರಕನಾಗಿ ಬಳಸಿಕೊಳ್ಳಬಾರದು. ಇದು ಸರಿಯಲ್ಲ ರಾಮ ಎಲ್ಲರ ಆಸ್ತಿ. ರಾಮಮಂದಿರ ಉದ್ಟಾಟನೆಯಾಗಿದೆ. ಜನರು ಬಹಳ ಸಂತೋಷವಾಗಿದ್ದಾರೆ. ರಾಮ ಭಾರತೀಯರ ಆರಾಧ್ಯದೈವ, ಭಾರತೀಯತೆಯ ಅಸ್ಮಿತೆ. ನೀವು ಕೆಲಸ ಮಾಡಿದ್ದೀರಾ ಶಹಭಾಷ್. ಮೋದಿ 500 ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಜನರ ಕಷ್ಟಗಳಿಗೆ ಮೋದಿ ಈಗಲಾದರೂ ಸ್ಪಂದಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿರುವುದು ಹುಚ್ಚು ಕಾಂಗ್ರೆಸ್ ಸರ್ಕಾರ: ಕೆ.ಎಸ್.ಈಶ್ವರಪ್ಪ ಕಿಡಿ
ಸಂಸತ್ ಭವನದ ಮೇಲೆ ದಾಳಿ ಪ್ರಕರಣ ಏನಾಯಿತು?: ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿರುವಾಗಲೇ ಮೂವರು ನುಗ್ಗಿ ದಾಂಧಲೆ ನಡೆಸಿದರು. ಸಂಸದ ಪ್ರತಾಪ್ ಸಿಂಹ ಇವರಿಗೆ ಪಾಸ್ ನೀಡಿದ್ದರು. ಆದರೆ ಈಗ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ. ಆ ಯುವಕರು ಬಡತನ, ನಿರುದ್ಯೋಗದ ವಿರುದ್ಧ ಧ್ವನಿ ಎತ್ತಿದ್ದರು. ಹೀಗಾಗಿ ಅವರು ಏನೇನು ಹೇಳಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಹುಣಸೂರು ಪ್ರತ್ಯೇಕ ಜಿಲ್ಲೆಯಾಗಲಿ: ಹುಣಸೂರು ಪ್ರತ್ಯೇಕ ಜಿಲ್ಲೆ ಆಗಬೇಕು. ಆ ಮೂಲಕ ದೇವರಾಜ ಅರಸರ ಹೆಸರು ಅಜರಾಮರವಾಗಬೇಕು. ಜನತೆ ದೂರದ ಮೈಸೂರಿಗೆ ಕೆಲಸ ಕಾರ್ಯಕ್ಕಾಗಿ ಬರಬೇಕಾಗಿರುವುದರಿಂದ ಮತ್ತು ಮೈಸೂರು ಜಿಲ್ಲಾಧಿಕಾರಿ ಅಲ್ಲಿಗೆ ಆರು ತಿಂಗಳಿಗೊಮ್ಮೆಯೂ ಭೇಟಿ ನೀಡಲು ಅಸಾಧ್ಯವಾಗಿರುವ ಕಾರಣ ಅಭಿವೃದ್ಧಿ ಆಗುತ್ತಿಲ್ಲ ಎಂದರು.
ಶಾಸಕ ಹರೀಶ್ ನೀತಿಪಾಠದ ಅಗತ್ಯ ನನಗಿಲ್ಲ: ಎಂ.ಪಿ.ರೇಣುಕಾಚಾರ್ಯ ಟಾಂಗ್
ಆದ್ದರಿಂದ ಕೆ.ಆರ್. ನಗರ, ಸಾಲಿಗ್ರಾಮ, ಎಚ್.ಡಿ. ಕೋಟೆ, ಸರಗೂರು, ಪಿರಿಯಾಪಟ್ಟಣ ಮತ್ತು ಹುಣಸೂರು ಸೇರಿಸಿ ಪ್ರತ್ಯೇಕ ಜಿಲ್ಲೆ ಆಗಬೇಕು. ಈ ನಿಟ್ಟಿನಲ್ಲಿ ಆ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಲಾಗುತ್ತಿದೆ. ಇದೇ ಭಾಗದವರಾದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್, ಪೈಲ್ವಾನ್ ವಿನೋದ್ ರಾಜ್ ಇದ್ದರು.