ಪ್ರಧಾನಿ ಮೋದಿ ಅತಿ ಆತ್ಮವಿಶ್ವಾಸ, ದೇಶಕ್ಕೆ ಒಳ್ಳೆಯದಲ್ಲ: ಖರ್ಗೆ ಟೀಕೆ

By Kannadaprabha NewsFirst Published Apr 17, 2024, 7:17 AM IST
Highlights

ಅದೃಷ್ಟವಶಾತ್ ಅಬ್ ಕೀ ಬಾರ್ 600 ಪಾರ್ ’ ಎಂದು ಹೇಳಿಲ್ಲ. ಅಹಂಕಾರದ ಪ್ರಚಾರ, ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದು, ಎಲ್ಲವೂ ನಾನೇ ಎನ್ನುವ ಮೋದಿ ನಡೆ ದುರದೃಷ್ಟಕರ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 

ನವದೆಹಲಿ(ಏ.17):  ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮುಂದಿನ ಐದು ವರ್ಷಗಳ ಅವಧಿಗೆ ಮಾಡಬೇಕು ಎಂದಿರುವ ಕಾರ್ಯ ಯೋಜನೆಗಳ ಪಟ್ಟಿ ಸಿದ್ಧ ಪಡಿಸಿಕೊಂಡು , ಈ ಬಗ್ಗೆ ಕಾರ್ಯದರ್ಶಿಗಳಿಗೆ ಕೂಡ ವಿವರಣೆ ನೀಡುತ್ತಿದ್ದಾರೆ. ಈ ರೀತಿಯ ಅತಿಯಾದ ಆತ್ಮ ವಿಶ್ವಾಸ ಮತ್ತು ದುರಂಹಕಾರ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಿಟಿಐ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಾವು 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುವ ಮೋದಿ ಮಾತಿಗೆ ಖರ್ಗೆ ವ್ಯಂಗ್ಯವಾಡಿದ್ದು, ‘ ಅದೃಷ್ಟವಶಾತ್ ಅಬ್ ಕೀ ಬಾರ್ 600 ಪಾರ್ ’ ಎಂದು ಹೇಳಿಲ್ಲ. ಅಹಂಕಾರದ ಪ್ರಚಾರ , ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದು, ಎಲ್ಲವೂ ನಾನೇ ಎನ್ನುವ ಮೋದಿ ನಡೆ ದುರದೃಷ್ಟಕರ ’ ಎಂದಿದ್ದಾರೆ.

ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ: ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಭಾಷಣ!

ಇದೇ ಸಂದರ್ಭದಲ್ಲಿ ಮಹಾಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೂ ಉತ್ತರ ನೀಡಿರುವ ಖರ್ಗೆ ‘ ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಫಲಿತಾಂಶದ ಬಳಿಕವೇ ನಿರ್ಧಾರವಾಗುತ್ತದೆ. ಎಲ್ಲದಕ್ಕೂ ಮೊದಲು ನಾವು ಚುನಾವಣೆಯನ್ನು ಗೆಲ್ಲಬೇಕು’ ಎಂದಿದ್ದಾರೆ.

click me!