ನನ್ನ ವಿರುದ್ಧ ಕಾಂಗ್ರೆಸ್ ನಲ್ಲಿ ಬೈಗುಳದ ಸ್ಪರ್ಧೆ ನಡೀತಿದೆ. ಹೀಗಾಗಿ ಅವರ ಬೈಗುಳವನ್ನು ನಾನು ಸ್ವೀಕರಿಸ್ತೇನೆ. ನನ್ನನ್ನು ವಿಷದ ಹಾವು ಎಂದಿದ್ದಾರೆ. ಆದರೆ ಹಾವು ಶಿವನ ಕುತ್ತಿಗೆಯಲ್ಲಿರುತ್ತದೆ. ನನಗೆ ಜನರೇ ಶಿವ. ನನ್ನ ಮಾಲೆಯೇ ಜನ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಚನ್ನಪಟ್ಟಣದಲ್ಲಿ ಹೇಳಿದ್ದಾರೆ.
ಚನ್ನಪಟ್ಟಣ (ಏ.30): ದಳಪತಿಗಳ ಕೋಟೆ ಬೊಂಬೆಗಳ ನಗರಿ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಭರ್ಜರಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ. ಎಐಸಿಸಿ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಇತ್ತೀಚೆಗೆ ಮೋದಿ ವಿಷ ಸರ್ಪ ನೆಕ್ಕಿದ್ರೆ ಸತ್ತೇ ಹೋಗ್ತಿರಿ ಎಂದು ನೀಡಿರುವ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಮೋದಿ ನನ್ನ ವಿರುದ್ಧ ಕಾಂಗ್ರೆಸ್ ಬೈಗುಳ ಶುರು ಮಾಡಿದೆ. ನನ್ನ ವಿರುದ್ಧ ಕಾಂಗ್ರೆಸ್ ನಲ್ಲಿ ಬೈಗುಳದ ಸ್ಪರ್ಧೆ ನಡೀತಿದೆ. ಹೀಗಾಗಿ ಅವರ ಬೈಗುಳವನ್ನು ನಾನು ಸ್ವೀಕರಿಸ್ತೇನೆ. ನನ್ನನ್ನು ವಿಷದ ಹಾವು ಎಂದಿದ್ದಾರೆ. ಆದರೆ ಹಾವು ಶಿವನ ಕುತ್ತಿಗೆಯಲ್ಲಿರುತ್ತದೆ. ನನಗೆ ಜನರೇ ಶಿವ. ನನ್ನ ಮಾಲೆಯೇ ಜನ ಆಗಿದ್ದಾರೆ. ನನಗೆ ಶ್ರೀರಾಮನ ರಕ್ಷೆ ಇದೆ. ಕರ್ನಾಟಕದ ಜನತೆಯ ಆಶೀರ್ವಾದ ಇದೆ ಎಂದಿದ್ದಾರೆ.
ಕಾಂಗ್ರೆಸ್ ಯಾವಾಗಲೂ ವಿಶ್ವಾಸಘಾತಕ ಪಕ್ಷ. ರೈತರ ಹೆಸರಿನಲ್ಲಿ ವಿಶ್ವಾಸದ್ರೋಹದ ಕೆಲಸ ಕಾಂಗ್ರೆಸ್ ಮಾಡಿದೆ. ಸುಳ್ಳು ಸಾಲಮನ್ನಾ ಘೋಷಣೆ ಮಾಡಿತ್ತು. ಅವರ ಕಡೆಯವರು ಮಾತ್ರ ಸಾಲ ಮನ್ನಾ ಲಾಭ ಪಡೆದರು. ಆದರೆ ನಿಜವಾದ ಲಾಭ ರೈತರಿಗೆ ಸಿಕ್ಕಿಲ್ಲ. ರೈತರ ಸಾಲಮನ್ನಾದ ದೊಡ್ಡ ಭಾಗ ಭ್ರಷ್ಟಾಚಾರಿಗಳಿಗೆ, ಅವರ ಸಂಬಂಧಿಗಳಿಗೆ ಹೋಗಿತ್ತು.
ಇದೇ ಕಾಂಗ್ರೆಸ್- ನ ಟ್ರ್ಯಾಕ್ ರೆಕಾರ್ಡ್. ಕಾಂಗ್ರೆಸ್- ನ ಗ್ಯಾರಂಟಿ ಸುಳ್ಳಿನ ಬಂಡಲ್. ಕಾಂಗ್ರೆಸ್ ನವರು ಈಗ ಸುಳ್ಳಿನ ಗ್ಯಾರಂಟಿ ಇಟ್ಕೊಂಡು ತಿರುಗಾಡ್ತಾ ಇದ್ದಾರೆ. ನಿಜವಾದ ಗ್ಯಾರಂಟಿ ಅಂದ್ರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ. ರಾಜ್ಯದ ರೈತರಿಗೆ 18 ಸಾವಿರ ಕೋಟಿ ರೂ ಸಿಕ್ಕಿದೆ. ಇದು ಡಬಲ್ ಎಂಜಿನ್ ಸರ್ಕಾರದ ಗ್ಯಾರಂಟಿ. ಕೇಂದ್ರ ಸರ್ಕಾರದಿಂದ 5 ಲಕ್ಷ ರೂಗಳವರೆಗೆ ಉಚಿತ ಚಿಕಿತ್ಸೆ ನೆರವು ಕೊಡಲಾಗಿದೆ. ರಾಮನಗರ ಜಿಲ್ಲೆಯ 3 ಲಕ್ಷ ಜನರಿಗೆ ಇದರ ಲಾಭ ಇದೆ. ಇದು ರೇಷ್ಮೆ ನಾಡು ರೇಷ್ಮೆ ರೈತರಿಗೆ ಉಚಿತ ಸಹಾಯ ನಮ್ಮ ಸರ್ಕಾರ ನೀಡಿದೆ. 10 ಸಾವಿರ ರೂ ಸಹಾಯ ನೀಡಿದೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ರಪ್ತು ಹೆಚ್ಚಾಗಿದೆ. ಕಾಂಗ್ರೆಸ್ ನ ಗ್ಯಾರಂಟಿ ಮುಗಿದು ಹೋಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಹಿಮಾಚಲ ಪ್ರದೇಶ ದಲ್ಲಿ ಕಾಂಗ್ರೆಸ್ 1000 ಹಣ ಮಹಿಳೆಯರಿಗೆ ಕೊಡುವ ಭರವಸೆ ಕೊಟ್ಟಿತ್ತು. ಆದರೆ ಹಣ ಕೊಡಲೇ ಇಲ್ಲ. ಹಿಮಾಚಲ ಪ್ರದೇಶ ಗ್ಯಾರಂಟಿ ಕಾಂಗ್ರೆಸ್ ಮರೆತಿದೆ. ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಡಿಸೇಲ್ ಮೇಲಿನ ತೆರಿಗೆ ಹೆಚ್ಚು ಮಾಡಲಾಯಿತು. ಬಿಜೆಪಿ ಮಾಡಿದ್ದ ಕೆಲಸ ರದ್ದು ಮಾಡಿತು. ಕಾಂಗ್ರೆಸ್ ಸರ್ಕಾರ ಬಂದರೆ, ಕಾಂಗ್ರೆಸ್ ನೀತಿ ರಿವರ್ಸ್ ನೀತಿ ಆಗಲಿದೆ. ಬಿಜೆಪಿ ಮಾಡಿದ್ದ ಕೆಲಸ ಕಾಂಗ್ರೆಸ್ ರದ್ದು ಮಾಡಲಿದೆ. ಜೆಡಿಎಸ್ ಕಾಂಗ್ರೆಸ್ ನ ಬೀ ಟೀಮ್ ತರಹ ಇರಲಿದೆ. ಇದಕ್ಕಾಗಿ ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಬನ್ನಿ ರನ್ನಿಂಗ್ ಮಾಡೋಣ, ಯಾರ್ ಗೆಲ್ತಾರೆ ನೋಡೋಣ ಮೋದಿಗೆ ಸವಾಲೆಸೆದ ಸಿದ್ದು!
ಬಿಜೆಪಿ ಯಾವಾಗಲೂ ಯುವಕರ ಹಿತ ಬಯಸುತ್ತವೆ. ಯುವ ಸಮೂಹಕ್ಕೆ ಮುದ್ರಾ ಯೋಜನೆ ತಂದಿದೆ. ಇದರಡಿ ಏಳು ಲಕ್ಷ ಯುವಕರಿಗೆ ಲಾಭ ಸಿಕ್ಕಿದೆ. ರಾಮನಗರದ ಯುವಕರಿಗೆ ಇದರಡಿ 3 ಸಾವಿರ ಕೋಟಿ ಫಲ ದೊರೆತಿದೆ. ಚನ್ನಪಟ್ಟಣದ ಪರಂಪರೆಯ ಗೊಂಬೆ ಉದ್ಯಮವನ್ನು ಕಾಂಗ್ರೆಸ್ ನಾಶ ಮಾಡಿತು. ನಾನು ಮನ್ ಕೀ ಬಾತ್ ನಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕಮ್ಮಿ ದರದ ಕಳಪೆ ವಿದೇಶಿ ಗೊಂಬೆಗಳನ್ನು ಮಾರುಕಟ್ಟೆಗೆ ಬರುವಂತೆ ಮಾಡಿದ್ದೇ ಕಾಂಗ್ರೆಸ್. ಮನ್ ಕಿ ಬಾತ್ ನಲ್ಲಿ ಇಲ್ಲಿನ ಗೊಂಬೆಗಳ ಬಗ್ಗೆ ಮಾತಾಡಿದ್ದೆ. ಭಾರತದ ಗೊಂಬೆಗಳನ್ನು ಖರೀದಿಲು ನಾವು ಪ್ರೋತ್ಸಾಹ ನೀಡಿದ್ದೆವು. 1000 ಕೋಟಿ ಮೌಲ್ಯದ ಗೊಂಬೆಗಳ ರಪ್ತು ಆಗ್ತಿದೆ. ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿ ಪರವಾಗಿ ಕೆಲಸ ಮಾಡ್ತಿದೆ. ಮೈಸೂರು ಬೆಂಗಳೂರು ರಸ್ತೆ ಆಗಿದೆ. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದ ಅಗತ್ಯ ಇದೆ ಎಂದಿದ್ದಾರೆ.
ಮೋದಿ ಹೇಳಿದ ಹಾಗೆ ಕೇಳುವ ಸರ್ಕಾರ ಇರಬೇಕಾ? ರಾಹುಲ್ ಬಾಬಾ ಹೇಳಿದಂತೆ ಕೇಳುವ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.