ಇಂದು ಬಿಜೆಪಿಯವರು ನನಗೆ ಟಿಕೆಟ್ ನೀಡುವ ಮೂಲಕ ಆಶೀರ್ವದಿಸಿದ್ದನ್ನು ಕಂಡು ಕಾಂಗ್ರೆಸ್‌ನವರು ಸೋಲಿನ ಭೀತಿಯಲ್ಲಿ ನಾವು ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಅಡೆ ತಡೆಗಳನ್ನು ಉಂಟು ಮಾಡುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಮತದಾರರು ಮನೆಯ ಮಗನೆಂದು ತಿಳಿದು ನನ್ನನ್ನು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದ ಡಾ. ಸಿದ್ದಲಿಂಗಪ್ಪ (ಸಿದ್ದು) ಪಾಟೀಲ್.
ಹುಮನಾಬಾದ್(ಏ.30): ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಭೂಮಿ ನೀಡಿದ ವ್ಯಕ್ತಿಗೆ, ಭೂಮಿ ನೀಡದಂತೆ ಕಾಂಗ್ರೆಸ್‌ನವರು ಧಮ್ಕಿ ಹಾಕಿ ಕಾರ್ಯಕ್ರಮ ಅಡ್ಡಿಪಡಿಸಲು ಮುಂದಾಗಿದ್ದರು ಎಂದು ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿದ್ದಲಿಂಗಪ್ಪ (ಸಿದ್ದು) ಪಾಟೀಲ್ ಆರೋಪಿಸಿದ್ದಾರೆ.
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218ರ ಬೀದರ್ ಮಾರ್ಗದ ಚೀನಕೇರಾ ಕ್ರಾಸ್ ಹತ್ತಿರ ಆಯೋಜಿಸಿದ ಮೋದಿ ಅವರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯ ಬಳಿಕ ಯುವಕರಿಗಾಗಿ ಉದ್ಯೋಗ, ರೈತರಿಗಾಗಿ ಹಾಗೂ ಮಹಿಳೆಯರಿಗಾಗಿ ವಿಶೇಷ ಯೋಜನೆಗಳ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸುವ ಸಂಕಲ್ಪವಿದೆ ಎಂದರು.
undefined
ಬಿಜೆಪಿಗೆ 40 ಸೀಟು ಎನ್ನುವ ರಾಹುಲ್ ವೈದ್ಯ ಪರೀಕ್ಷೆಗೆ ಒಳಗಾಗಲಿ: ಯಡಿಯೂರಪ್ಪ
ಇಂದು ಬಿಜೆಪಿಯವರು ನನಗೆ ಟಿಕೆಟ್ ನೀಡುವ ಮೂಲಕ ಆಶೀರ್ವದಿಸಿದ್ದನ್ನು ಕಂಡು ಕಾಂಗ್ರೆಸ್‌ನವರು ಸೋಲಿನ ಭೀತಿಯಲ್ಲಿ ನಾವು ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಅಡೆ ತಡೆಗಳನ್ನು ಉಂಟು ಮಾಡುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಮತದಾರರು ಮನೆಯ ಮಗನೆಂದು ತಿಳಿದು ನನ್ನನ್ನು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಬೀದರ್ ದಕ್ಷಿಣ ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಇದೀಗ ಮೂರನೇ ಬಾರಿ ಚುನಾವಣೆ ಎದುರಿಸುತ್ತಿದ್ದು, ಮತದಾರ ಬಾಂಧವರು ಈ ಬಾರಿ ನನಗೆ ಪ್ರಚಂಡ ಬಹುಮತದಿಂದ ಗೆಲ್ಲಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ಚಿಂಚೋಳಿ ಸಂಸದ ಉಮೇಶ ಜಾಧವ, ಔರಾದ್ ಅಭ್ಯರ್ಥಿ ಪ್ರಭು ಚವ್ಹಾಣ್, ಬಸವಕಲ್ಯಾಣ ಅಭ್ಯರ್ಥಿ ಶರಣು ಸಲಗರ, ಭಾಲ್ಕಿ ಕ್ಷೇತ್ರದ ಪ್ರಕಾಶ ಖಂಡ್ರೆ ಹಾಗೂ ಬೀದರ್ ಕ್ಷೇತ್ರದ ಈಶ್ವರಸಿಂಗ್ ಠಾಕೂರ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ತಾಲೂಕು ಅಧ್ಯಕ್ಷ ಪ್ರಭಾಕರ ನಾಗರಾಳೆ, ವಿಜಯಕುಮಾರ ಪಾಟೀಲ್ ಗಾದಗಿ ಸೋಮನಾಥ ಪಾಟೀಲ್, ಬಸವರಾಜ ಆರ್ಯ, ಚಿಂಚೋಳಿ ಅಭ್ಯರ್ಥಿ ಅವಿನಾಶ ಜಾಧವ, ಸೇರಿದಂತೆ ಅನೇಕರಿದ್ದರು.