ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ

By Kannadaprabha News  |  First Published Jan 20, 2023, 10:17 AM IST

52 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದಾಗಿ ಜನರ 50 ವರ್ಷದ ಬೇಡಿಕೆ ಈಡೇರಿಸಿದ್ದೇವೆ.


ಯಾದಗಿರಿ/ಕಲಬುರಗಿ (ಜ.20): 52 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದಾಗಿ ಜನರ 50 ವರ್ಷದ ಬೇಡಿಕೆ ಈಡೇರಿಸಿದ್ದೇವೆ. ಹೀಗಾಗಿ ಮೋದಿ ಅವರೊಬ್ಬ ಸಾಮಾಜಿಕ ಪರಿವರ್ತಕ, ಸಾಮಾಜಿಕ ನ್ಯಾಯದ ಹರಿಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಯಾದಗಿರಿಯ ಹುಣಸಗಿ ತಾಲೂಕಿನ ಕೋಡೆಕಲ್‌ನಲ್ಲಿ .10,863 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಲಬುರಗಿಯ ಮಳಖೇಡದಲ್ಲಿ 52 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪ್ರಧಾನಿ ಮೋದಿ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ. ಬೇರೆಯವರು ಬರೀ ಮಾತನಾಡುತ್ತಾರೆ. ಮೋದಿಯವರು ಮಾಡಿ ತೋರಿಸುತ್ತಾರೆ. ನೀವೇ ನಮ್ಮ ಮಾರ್ಗದರ್ಶಕರು, ದೇಶದಲ್ಲಿ ಪರಿವರ್ತನೆಗೆ ನೀವೇ ಕಾರಣೀಭೂತರು. ಅಲೆಮಾರಿಗಳಿಗೆ ನೆಮ್ಮದಿಯ ಬದುಕು ನೀಡುವ ಕೆಲಸ ನಿಮ್ಮ ಮಾರ್ಗದರ್ಶನದಲ್ಲಿ ಮಾಡಲಾಗಿದೆ ಎಂದು ಹೇಳಿದ ಬೊಮ್ಮಾಯಿ, ನಮ್ಮ ಡಬಲ್‌ ಎಂಜಿನ್‌ ಸರ್ಕಾರ ಶೋಷಿತ ಸಮುದಾಯದಲ್ಲಿ ಸಾಮಾಜಿಕ ಪರಿವರ್ತನೆ ತರುತ್ತಿದೆ ಎಂದರು. ಮುಂದಿನ 10 ವರ್ಷಗಳನ್ನು ರಾಜ್ಯದಲ್ಲಿ ನೀರಾವರಿ ದಶಕವೆಂದು ಘೋಷಿಸಲಾಗುವುದು. ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಹೇಳಿದರು.

Tap to resize

Latest Videos

ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಕಲ್ಯಾಣ ಕರ್ನಾಟಕದಲ್ಲಿ ‘ನಮೋ’ ಕಹಳೆ: ವಾರದ ಹಿಂದಷ್ಟೇ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿ ಅಭಿವೃದ್ಧಿಯ ಮಂತ್ರ ಪಠಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತಕ್ಕೆ ಶಹಬ್ಬಾಸ್‌ಗಿರಿಯನ್ನೂ ನೀಡಿದ್ದಾರೆ. ನಮ್ಮ ಸರ್ಕಾರದಲ್ಲೇನಿದ್ದರೂ ಅಭಿವೃದ್ಧಿಗೇ ಆದ್ಯತೆ ಹೊರತು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಲ್ಲ ಎನ್ನುವ ಮೂಲಕ ಪ್ರತಿಪಕ್ಷಗಳನ್ನು ತಿವಿದ ಅವರು, ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಈಗಿನಿಂದಲೇ ರಣಕಹಳೆ ಮೊಳಗಿಸಿದರು.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದ ಹೊರವಲಯದಲ್ಲಿ ಸುಮಾರು .10 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ, ನಂತರ ಕಲಬುರಗಿಯ ಮಳಖೇಡದಲ್ಲಿ 52,070 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟವಚನ ನೀಡಿದರು. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಮೂಲಸೌಲಭ್ಯ ವಂಚಿತ ಸಮುದಾಯಗಳ ಜತೆಗಿದೆ ಎಂದು ಪುನರುಚ್ಚರಿಸಿದ ಅವರು, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಿಂದುಳಿದ ಪಟ್ಟಿಗೆ ಸೇರಿದ್ದ ಜಿಲ್ಲೆಗಳಿಗೆ ನಾವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಕೊಡುಗೆ ನೀಡಿದ್ದೇವೆ ಎಂದರು.

ಸಾಮಾಜಿಕ ಜಾಲತಾಣಗಳ ಅತಿ ಬಳಕೆ ಬೇಡ: ಸಿಎಂ ಬೊಮ್ಮಾಯಿ

ಲಂಬಾಣಿ ಸಮುದಾಯಕ್ಕೆ ಈ ದಿನ ಹಬ್ಬದ ದಿನ. ಕುಣಿಯುತ್ತ ಕುಪ್ಪಳಿಸುತ್ತ ಬರುತ್ತಿರೋದು ನೋಡಿದರೆ ನಿಮಗೆ ಶತಮಾನಗಳಿಂದ ಕಾಡುತ್ತಿದ್ದ ಚಿಂತೆ ದೂರಾಗಿದೆ. ನಿಮ್ಮ ವಾಸದ ಪ್ರದೇಶಕ್ಕೆ ಬರುವ ದಿನಗಳಲ್ಲಿ ಅಭಿವೃದ್ಧಿ ಹರಿದು ಬರಲಿದೆ. ಬಿಜೆಪಿ ಸರ್ಕಾರ ನೆಮ್ಮದಿ ಸೂರು ನೀಡಿದೆ. ಅನ್ಯರು ನಿಮ್ಮನ್ನು ಭರವಸೆ ನೀಡಲೆಂದೇ ಬಳಸಿಕೊಂಡರು. ನಾವು ಹಾಗಲ್ಲ.
-ಆರ್‌. ಅಶೋಕ್‌, ಕಂದಾಯ ಸಚಿವರು

click me!