Raichur: ಮೋದಿ ಕಾರ್ಯಕ್ರಮಕ್ಕೆ ನನ್ನ ಕರೆದಿಲ್ಲ; ಅದಕ್ಕೆ ನಾನು ಹೋಗಿಲ್ಲ: ಶ್ರೀರಾಮುಲು

By Kannadaprabha NewsFirst Published Jan 20, 2023, 8:22 AM IST
Highlights

ಯಾದಗಿರಿ ಹಾಗೂ ಕಲಬುರಗಿಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಅದಕ್ಕೆ ಹೋಗಿಲ್ಲ. ಪ್ರಧಾನ ಮಂತ್ರಿ ಮೋದಿ ಅವರ ಕಾರ್ಯಕ್ರಮ ಎಂದರೆ ಶಿಷ್ಟಾಚಾರ ಪ್ರಕಾರ ಯಾರು ಯಾರು ಬರಬೇಕು ಎನ್ನುವ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯಿಂದ ನೀಡುತ್ತಾರೆ. ಈ ಬಾರಿ ನನಗೆ ಆಮಂತ್ರಣ ಬಂದಿಲ್ಲ. ಅದಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಯಚೂರು (ಜ.20) : ಯಾದಗಿರಿ ಹಾಗೂ ಕಲಬುರಗಿಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಅದಕ್ಕೆ ಹೋಗಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಮಾತನಾಡಿ, ಪ್ರಧಾನ ಮಂತ್ರಿ ಮೋದಿ(PM Narendra Modi) ಅವರ ಕಾರ್ಯಕ್ರಮ ಎಂದರೆ ಶಿಷ್ಟಾಚಾರ ಪ್ರಕಾರ ಯಾರು ಯಾರು ಬರಬೇಕು ಎನ್ನುವ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯಿಂದ ನೀಡುತ್ತಾರೆ. ಈ ಬಾರಿ ನನಗೆ ಆಮಂತ್ರಣ ಬಂದಿಲ್ಲ. ಅದಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

Raichur: ಬುಡಕಟ್ಟು ನೃತ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ; ಸಚಿವ ಶ್ರೀರಾಮುಲು ಸೂಚನೆ

ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ದಾಳಿಯಾದರೂ ಸಹ ಅದನ್ನು ರಾಮುಲು ಅವರಿಗೆ ಜೋಡಿಸುವ ಅಗತ್ಯವಿಲ್ಲ. ಬಳ್ಳಾರಿಯಲ್ಲಿ ಸಾಕಷ್ಟುಜನರು ಪರಿಚಯದವರಿದ್ದಾರೆ. ಅಷ್ಟುಮಾತ್ರಕ್ಕೆ ನನ್ನನ್ನು ಎಳೆಯುವುದು ಸರಿಯಲ್ಲ. ಆ ದಾಳಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅದು ವ್ಯಾವಾರಸ್ಥರ ಮೇಲೆ ನಡೆದ ದಾಳಿಯಾಗಿದ್ದು ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದರು.

ಜನಾರ್ದನರೆಡ್ಡಿ ಅವರ ಕಾರ್ಯಕ್ರಮದ ಕುರಿತು ನನ್ನ ಟ್ವಿಟರ್‌ ಖಾತೆಯಿಂದ ಸಂದೇಶ ಹೋಗಿರುವ ವಿಚಾರವನ್ನು ಈಗಾಗಲೇ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ. ಖಾತೆ ಹ್ಯಾಕ್‌ ಆಗಿರುವುದರ ಬಗ್ಗೆ ತಿಳಿಸಿದ್ದಾರೆ. ಈ ವಿಚಾರವನ್ನು ಪೊಲೀಸರಿಗು ಸಹ ತಿಳಿಸಲಾಗಿದೆ ಎಂದು ಹೇಳಿದರು.

ಜನಾರ್ದನರೆಡ್ಡಿ ಅವರನ್ನು ರಹಸ್ಯವಾಗಿ ಯಾಕೆ, ಬಹಿರಂಗವಾಗಿಯೇ ಭೇಟಿಯಾಗುತ್ತೇನೆ. ಅವರನ್ನು ಭೇಟಿಯಾದರೆ ಏನು? ಎಲ್ಲವನ್ನು ರಾಜಕೀಯವಾಗಿಯೇ ನೋಡಲಾಗುವುದಿಲ್ಲ. ರೆಡ್ಡಿ ಸ್ನೇಹಿತರಾಗಿದ್ದಾರೆ. ಅವರ ಪಕ್ಷ ಬಿಜೆಪಿ ಬಿ ಟೀಮ್‌ ಎನ್ನುವ ಆರೋಪ ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ನಮ್ಮ ಸಿದ್ಧಾಂತಗಳೇ ಬೇರೆ, ಬಿಜೆಪಿ ಸಿದ್ಧಾಂತಗಳಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ಮೋದಿ, ಬಿಎಸ್‌ವೈ, ಬೊಮ್ಮಾಯಿ ಇದ್ದಾರೆ. ಜನರಿಗೆ ವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಪಕ್ಷ ಮಾಡಿದೆ. ಇಂದೇ ಚುನಾವಣೆ ನಡೆದರೆ 130ಕ್ಕು ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಆಗಮನ: ರಾಯಚೂರಿಗೆ ಘೋಷಣೆಯಾಗುವುದೆ ಏಮ್ಸ್‌?

ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಲ್ಲಿ ಅಕ್ರಮದ ಬಗ್ಗೆ ದೂರುಗಳು ಬಂದಿದ್ದು ತನಿಖೆ ನಡೆಸಲು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಕ್ರಮಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಗಂಗಾಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

click me!