
ಮಂಡ್ಯ (ಮಾ.12): ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದಲ್ಲಿ ಹಿಂದೆಂದೂ ದಿಗದ ಅದ್ಭುತ ಸ್ವಾಗತ ಜೆಡಿಎಸ್‌ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಸಿಕ್ಕಿದೆ. ಬರೋಬ್ಬರಿ 1.8 ಕಿಲೋಮೀಟರ್ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಸಾಗುವ ಮಾರ್ಗದ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೂವಿನ ಮಳೆಗೆರೆದರು. ಇನ್ನೊಂದೆಡೆ ಸಾರ್ವಜನಿಕ ಸಮಾವೇಶ ನಡೆಯಲಿರುವ ಗಜ್ಜಲಗೆರೆಯಲ್ಲಿ ನಾಯಕರ ಸಮ್ಮಿಲನ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಮುಂದಿನ ಚುನಾವಣೆಯಲ್ಲಿ ಬಿಜೆಪಿತೆ ತಮ್ಮ ಬೆಂಬಲ ಎಂದು ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಘೋಷಣೆ ಮಾಡಿದ್ದರು. ಅದರಂತೆ ಗಜ್ಜಲಗೆರೆಯ ವೇದಿಕೆಗೆ ಆಗಮಿಸಿದ ಸುಮಲತಾಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸ್ವಾಗತ ನೀಡಿದರು. ಹಿಂದೊಮ್ಮೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವಿಚಾರವಾಗಿಯೇ ಸುಮಲತಾ ಹಾಗೂ ಪ್ರತಾಪ್ ಸಿಂಹ ನಡುವೆ ಮಾತಿನ ಸಮರ ನಡೆದಿತ್ತು. ಆದರೆ, ಅದೆಲ್ಲವನ್ನೂ ಮರೆತು ಪ್ರತಾಪ್ ಸಿಂಹ ಅವರು ಸುಮಲತಾರನ್ನು ವೇದಿಕೆಗೆ ಸ್ವಾಗತಿಸಿತು. ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ ಮಂಡ್ಯದಲ್ಲಿ ಸ್ವಾಭಿಮಾನ ಜಾಗೃತವಾಗಿ ಮತ್ತೊಮ್ಮೆ ಕಮಲ ಅರಳಬೇಕು ಎಂದು ಕರೆ ನೀಡಿದರು. ಅವರ ಈ ಮಾತಿಗೆ ಸುಮಲತಾ ಕೂಡ ಒಪ್ಪಿಗೆ ಸೂಚಿಸಿದರು.
ಮಂಡ್ಯ ಕೇಸರಿಮಯ: ರೋಡ್ ಶೋದಲ್ಲಿ ನಮೋಗೆ ಹೂವಿನ ಮಳೆ
ಇದೇ ವೇಳೆ ಕಾರ್ಯಕ್ರಮದ ಸ್ಥಳದಲ್ಲಿ ಕಾರ್ಯಕರ್ತರು ಪೊಲೀಸರು ನಡುವೆ ಕಿರಿಕ್ ಆದ ಘಟನೆಯೂ ನಡೆದಿದೆ. ರೋಡ್ ಶೋ ಮುಕ್ತಾಯವಾಗ್ತಿದೆ. ಒಳಗಡೆ ಬೇಗ ಬೇಗ ಬಂದು ಕೂರುವಂತೆ ಸಂಸದ ಪ್ರತಾಪ್ ಸಿಂಹ ಮೈಕ್‌ನಲ್ಲಿ ಕೂಗಿ ಕೂಗಿ ಹೇಳುತ್ತಿದ್ದರು. ಪ್ರತಾಪ್ ಸಿಂಹ ಮನವಿ ಮಾಡುತ್ತಿದ್ದಂತೆ ಸಾರ್ವಜನಿಕರು ಏಕಾಏಕಿ ವೇದಿಕೆಯ ಮುಂಭಾಗಕ್ಕೆ ಬರಲು ಆಗಮಿಸಿದರು. ಆಗ ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ಏರ್ಪಟ್ಟಿದೆ. ಪೊಲೀಸರು ಸಾರ್ವಜನಿಕರನ್ನು ಏಕಾಏಕಿ ವೇದಿಕೆಯ ಮುಂಭಾಗಕ್ಕೆ ಬಿಡಲು ನಿರಾಕರಿಸಿದ್ದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರಿಗೆ ಸುಮ್ಮನೆ ಇರುವಂತೆ ಪ್ರತಾಪ್ ಸಿಂಹ ಸೂಚನೆ ನೀಡಿದರು. ಈ ಹಂತದಲ್ಲಿ ವೇದಿಕೆಗೆ ಆಗಮಿಸಿದ ಸುಮಲತಾಗೆ ಜನರು ಶಿಳ್ಳೆ, ಚಪ್ಪಾಳೆಯ ಮೂಲಕ ಸ್ವಾಗತ ನೀಡಿದರು.
PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!
ಅಸ್ವಸ್ಥರಾದ ಮಹಿಳೆ: ಸಮಾವೇಶ ನಡೆಯುವ ಸ್ಥಳದಲ್ಲಿ ಬಿಸಿಲಿನ ಝಳಕ್ಕೆ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದಾರೆ. ಪ್ರಧಾನಿ ಕಾರ್ಯಕ್ರಮಕ್ಕೆ ನೋಡಲು ಮಹಿಳೆ ಬಂದಿದ್ದರು. ದಶಪಥ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ನಂತರ ಮಹಿಳೆಯನ್ನು ಉಪಚರಿಸಿ, ಪೋಲೀಸ್ ವಾಹನದಲ್ಲೇ ಕರೆದುಕೊಂಡು ಹೋಗಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.