ದೇಶದಲ್ಲಿ ಕಾಂಗ್ರೆಸ್‌ ಇಲ್ಲದಂತೆ ಮಾಡುವ ಶಕ್ತಿ ಮೋದಿಗಿದೆ: ಸಚಿವ ರಾಮದಾಸ್‌ ಅಠವಳೆ

By Kannadaprabha News  |  First Published May 3, 2023, 10:33 PM IST

ಡಾ.ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಭಾರತದ ಸಂವಿಧಾನಕ್ಕೆ ಅಪಾರವಾದ ಶಕ್ತಿ ಇದೆ. ಹಾಗೇನೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ಯೋಗ್ಯ ರೀತಿಯಲ್ಲಿ ವಿಶ್ವದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದ ರಾಮದಾಸ್‌ ಅಠವಳೆ 


ಚಿಕ್ಕೋಡಿ(ಮೇ.03): ದೇಶದಲ್ಲಿ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಈ ದೇಶದಲ್ಲಿ ಕಾಂಗ್ರೆಸ್‌ ಪಕ್ಷವೇ ಇಲ್ಲದಂತೆ ಮಾಡುವ ಶಕ್ತಿ ಪ್ರಧಾನಮಂತ್ರಿ ಮೋದಿಯವರಿಗೆ ಇದೆ ಎಂದು ಮಹಾರಾಷ್ಟ್ರದ ದಲಿತ ಮುಖಂಡ, ಆರ್‌ಪಿಐ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್‌ ಅಠವಳೆ ಹೇಳಿದರು.

ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಗಳತಗಾ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆಯವರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಾ.ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಭಾರತದ ಸಂವಿಧಾನಕ್ಕೆ ಅಪಾರವಾದ ಶಕ್ತಿ ಇದೆ. ಹಾಗೇನೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ಯೋಗ್ಯ ರೀತಿಯಲ್ಲಿ ವಿಶ್ವದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

Tap to resize

Latest Videos

ದೇಶಕ್ಕೆ ಸರ್ವಾಧಿಕಾರ ತರುವುದು ಬಿಜೆಪಿ ಗುರಿ: ಪೃಥ್ವಿರಾಜ್‌ ಚವ್ಹಾಣ್‌

ಸಚಿವೆ, ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚಿಸದೇ ಹೋಗಿದ್ದರೇ ತಾನೊಬ್ಬ ಸಚಿವಳಾಗಿ ನಾನು ತಮ್ಮ ಮುಂದೆ ನಿಲ್ಲಲು ಆಗುತ್ತಿರಲಿಲ್ಲ. ಹಾಗಾಗಿ ತನಗೆ ಡಾ.ಬಿ.ಆರ್‌.ಅಂಬೇಡ್ಕರ್‌, ಛತ್ರಪತಿ ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರ ಅವರು ಆದರ್ಶರು. ಅವರ ದಾರಿಯಲ್ಲಿಯೇ ತಾನು ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ. ನಿಪ್ಪಾಣಿಯ ಸರ್ವಾಂಗೀಣ ಅಭಿವೃದ್ಧಿಯ ಮುಂದುವರಿಕೆಗೆ ಸಹಕರಿಸುವಂತೆ ಕೋರಿದರು.

ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ ಮಾತನಾಡಿ, ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರು ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಿದ್ದು, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರಕ್ಕೆ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿಕೊಂಡರು.

ಬಿಜೆಪಿಯವರದು ಬರೀ ಭರವಸೆಗಳ ಬಂಡಲ್‌ ಪಕ್ಷ: ಸತೀಶ ಜಾರಕಿಹೊಳಿ

ನಿಪ್ಪಾಣಿ ಚುನಾವಣೆ ಉಸ್ತುವಾರಿ ನಾಂದೇಡದ ಡಾ.ಅಜೀತ ಗೋಪಚಾಡೆ, ಕೊಲ್ಲಾಪುರದ ಬಿಜೆಪಿ ರಾಜ್ಯಸಭಾ ಸದಸ್ಯರಾದ ಧನಂಜಯ ಮಹಾಡಿಕ, ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ್‌ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಣವ ಮಾನವಿ, ದುಂಡಪ್ಪ ಬೆಂಡವಾಡೆ, ಚಂದ್ರಕಾಂತ ಕೋಟಿವಾಲೆ, ಮಲಗೌಡ ಪಾಟೀಲ, ದಲಿತ ಸಮಾಜದ ಮುಖಂಡರಾದ ಸುಭಾಷ ಯರನಾಳೆ, ರೂಪಾಲಿ ವಾಯ್ದಂಡೆ, ಉತ್ತಮ ಕಾಂಬಳೆ, ಶಹಾಜಿ ಕಾಂಬಳೆ ಹಾಗೂ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಅಂಬೇಡ್ಕರ್‌ ಅವರಿಗೂ ನಿಪ್ಪಾಣಿ ವರಾಳೆ ಕುಟುಂಬಕ್ಕೂ ಅವಿನಾಭಾವ ಸಂಬಧವಿತ್ತು. ಹೀಗಾಗಿ ಅವರು ನಿಪ್ಪಾಣಿಗೆ ಬಂದಾಗಲೆಲ್ಲ ಗವಾನ ಬಳಿ ಗುಡ್ಡದ ಪ್ರದೇಶಕ್ಕೆ ವಾಯುವಿಹಾರಕ್ಕೆ ತೆರಳುತ್ತಿದ್ದರು. ಅಲ್ಲಿ ಅವರ ಸ್ಮಾರಕ ನಿರ್ಮಿಸಲು 10 ಎಕರೆ ಜಾಗವನ್ನು ಪಡೆದಿದ್ದು, ಎಸ್ಸಿ, ಎಸ್ಟಿವಿದ್ಯಾರ್ಥಿಗಳು ಸಹ ವಿದ್ಯಾವಂತರಾಗಿ ಐಎಎಸ್‌, ಐಪಿಎಸ್‌ ನಂತಹ ಉನ್ನತ ಹುದ್ದೆಗೆ ಸೇರಬೇಕೆಂಬುವುದು ನಮ್ಮ ಬಯಕೆಯಾಗಿದೆ. ಹೀಗಾಲ್ಲಿ ಅಲ್ಲಿ ಒಂದು ವಿಜ್ಞಾನ ಕೇಂದ್ರ ಪ್ರಾರಂಭಿಸಲಾಗುವುದು ಅಂತ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.  

click me!