ನಮ್ಮದು ನುಡಿದಂತೆ ನಡೆದ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ 5 ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಜಾರಿ ಮಾಡಲು ಸುಮಾರು 50 ಸಾವಿರ ಕೋಟಿ ವೆಚ್ಚವಾಗಬಹುದು. ಈ ಪ್ರಣಾಳಿಕೆ ಜಾರಿಗೆ ಹಣ ಎಲ್ಲಿಂದ ತರಬೇಕು ಎಂಬುವುದು ನಮ್ಮ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ: ಸತೀಶ ಜಾರಕಿಹೊಳಿ
ಗೋಕಾಕ(ಮೇ.03): ಜನರ ಮತ ಪಡೆಯಲು ಬಿಜೆಪಿ ಬಂಡಲ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದನ್ನು ಜಾರಿ ಮಾಡಲು ಅವರಿಗೆ ಇಚ್ಛಾಶಕ್ತಿಯೂ ಇಲ್ಲ, ಜಾರಿ ಮಾಡಲು ಅವರಿಗೆ ಆಗೋದು ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆ ಈಗಲೇ ಜಾರಿ ಮಾಡಿ ಚುನಾವಣೆಗೆ ಹೋಗಬಹುದಾಗಿತ್ತು. ಆದರೆ, ಬಿಜೆಪಿಯವರದು ಬರಿ ಭರವಸೆಗಳ ಬಂಡಲ್ ಪಕ್ಷ. 4 ವರ್ಷದಲ್ಲಿ 10 ಲಕ್ಷ ಮನೆ ಕಟ್ಟಿಕೊಡುತ್ತವೆ ಎಂದು ಬಿಜೆಪಿಯವರು ಹೇಳಿದರು. ಇನ್ನೂವರೆಗೆ ಯಾವುದೇ ಮನೆ ಕಟ್ಟಿಲ್ಲ. ಮನೆ ಕಟ್ಟುವುದು ದೂರಿನ ಮಾತು, ನಾವು ಅಧಿಕಾರದಲ್ಲಿದ್ದಾಗ ಕಟ್ಟಿದ ಮನೆಗಳಿಗೆ ಇವರ ಸರ್ಕಾರ ಇನ್ನೂ ಬಿಲ್ ಕೊಟ್ಟಿಲ್ಲ ಎಂದು ದೂರಿದರು.
ಅಭಿವೃದ್ಧಿಯೊಂದೇ ಜಾತಿ, ಜನರ ನೆಮ್ಮದಿಯೊಂದೇ ನನ್ನ ಮತ: ಲಕ್ಷ್ಮೀ ಹೆಬ್ಬಾಳಕರ
ನಮ್ಮದು ನುಡಿದಂತೆ ನಡೆದ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ 5 ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಜಾರಿ ಮಾಡಲು ಸುಮಾರು 50 ಸಾವಿರ ಕೋಟಿ ವೆಚ್ಚವಾಗಬಹುದು. ಈ ಪ್ರಣಾಳಿಕೆ ಜಾರಿಗೆ ಹಣ ಎಲ್ಲಿಂದ ತರಬೇಕು ಎಂಬುವುದು ನಮ್ಮ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ತರಹ ಬಂಡಲ್ ಪ್ರಣಾಳಿಕೆ ನಮ್ಮದಲ್ಲ. ನಮ್ಮ ಪಕ್ಷದಿಂದ ಜಾರಿ ಮಾಡಿದ ಪ್ರಣಾಳಿಕೆಗಳೆಲ್ಲವು 100ಕ್ಕೆ 100ರಷ್ಟುರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದರು.