Latest Videos

15 ಲಕ್ಷ ಅಕೌಂಟ್‌ಗೆ ಹಾಕುತ್ತೇವೆ ಎಂದು ಮೋದಿ ಹೇಳಿಲ್ಲ: ಸಂಸದ ರಾಘವೇಂದ್ರ

By Kannadaprabha NewsFirst Published Jun 30, 2023, 1:40 AM IST
Highlights

ವಿದೇಶದಲ್ಲಿರುವ ಕಪ್ಪು ಹಣ ತಂದರೆ ಪ್ರತಿಯೊಬ್ಬರಿಗೂ 15 ಲಕ್ಷ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹೊರೆತು ಎಲ್ಲಿಯೂ 15 ಲಕ್ಷ ಪ್ರತಿಯೊಬ್ಬರ ಅಕೌಂಟ್‌ ಹಾಕೋತ್ತೇವೆ ಎಂದು ಹೇಳಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಶಿವಮೊಗ್ಗ (ಜೂ.30): ವಿದೇಶದಲ್ಲಿರುವ ಕಪ್ಪು ಹಣ ತಂದರೆ ಪ್ರತಿಯೊಬ್ಬರಿಗೂ 15 ಲಕ್ಷ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹೊರೆತು ಎಲ್ಲಿಯೂ 15 ಲಕ್ಷ ಪ್ರತಿಯೊಬ್ಬರ ಅಕೌಂಟ್‌ ಹಾಕೋತ್ತೇವೆ ಎಂದು ಹೇಳಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಮನೆ ರತ್ನಾಕರ್‌ ಬಗ್ಗೆ ಗೌರವವಿದೆ. ಅವರಿಂದ ಇಂತಹ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರವನ್ನು ದೂರುವುದನ್ನು ಬಿಟ್ಟು ಕಾಂಗ್ರೆಸ್‌ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಅಕ್ಕಿ ಕೊಡುವ ಕೆಲಸ ಮಾಡಲಿ. ವಿದೇಶದಲ್ಲಿನ ಕಪ್ಪು ಹಣ ತರುವ ಬಗ್ಗೆ ಪ್ರಯತ್ನ ನಡೆದಿದೆ. ನಿರುದ್ಯೋಗಳಿಗೆ ಹುದ್ದೆ ಕೊಡುವ ಕೇಂದ್ರದ ಭರವಸೆಯನ್ನು ಈಡೇರಿಸುವ ಪ್ರಯತ್ನ ನಡೆಯುತ್ತಲೇ ಇದೆ.

25,000 ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದಿಂದ ಎಷ್ಟೊಂದು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ಈ ಹಿಂದೆ ಸಿದ್ದರಾಮಯ್ಯ ಅಕ್ಕಿ ಬದಲಿಗೆ ಹಣ ನೀಡಿದರೆ ಹೊಟ್ಟೆತುಂಬುತ್ತಾ ಎಂದಿದ್ದರು. ಈಗ ಅವರೇ ಅಕ್ಕಿ ಬದಲು ಹಣ ಹಾಕುತ್ತೇವೆ ಎಂದಿದ್ದಾರೆ. ಇದೀಗ ಅವರೇ ಹಣ ಬದಲಿಗೆ ಹಣ ನೀಡುತ್ತಿದ್ದಾರೆ. 5 ಕೆಜಿ ಅಕ್ಕಿಗೆ ಹಣ ನೀಡುವ ಬದಲು ಕಾಂಗ್ರೆಸ್‌ ನೀಡಿದ ಭರವಸೆಯಂತೆ 10 ಕೆಜಿ ಅಕ್ಕಿಗೆ ಹಣ ನೀಡಬೇಕು. ಶಕ್ತಿ ಯೋಜನೆಯಲ್ಲಿ ಕಾಂಗ್ರೆಸ್‌ ಸರ್ಕಾರಿ ಬಸ್‌ಗಳಲ್ಲಿ ಮಾತ್ರ ಸ್ತ್ರೀಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಸಂಚಾರ ಹೆಚ್ಚಾಗಿದೆ. ಖಾಸಗಿ ಬಸ್‌ಗಳ ಜೊತೆಗೂ ಕಾಂಗ್ರೆಸ್‌ ಸರ್ಕಾರ ಒಪ್ಪಂದ ಮಾಡಿಕೊಂಡು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಸಕಲ ಜೀವಿಗಳಿಗೂ ಪರಿಸರದ ಮೇಲೆ ಹಕ್ಕಿದೆ: ಮನುಷ್ಯ ಪ್ರಪಂಚದಲ್ಲಿರುವುದೆಲ್ಲ ತನ್ನದೇ ಎಂದುಕೊಂಡಿದ್ದಾನೆ. ಆದರೆ, ಕ್ರಿಮಿ ಕೀಟಗಳೂ ಸೇರಿದಂತೆ ಎಲ್ಲಾ ಜೀವಿಗಳಿಗೂ ಪರಿಸರದ ಮೇಲೆ ಹಕ್ಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ನಗರದ ಅಶ್ವತ್ಥ ನಗರದ ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್‌, ವಿವೇಕ್‌ ಫೌಂಡೇಷನ್‌ ವಿವಿಧ ಸಂಘ-ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಪಾರ್ಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಚಿತ್ರಕಲಾ ಸ್ಪರ್ಧೆ ಹಾಗೂ ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರವನ್ನು ನಾವು ಹಾಳು ಮಾಡಿದರೆ ಸೊಳ್ಳೆಗಳು ಉತ್ಪತ್ತಿಯಾಗಿ ಅವು ನಮ್ಮನ್ನು ಸಾಯಿಸುತ್ತವೆ. ಮಾನವ ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾನೆ. ಆರೋಗ್ಯಯುಕ್ತ ಸಮಾಜಕ್ಕಾಗಿ ಪ್ರಧಾನಿ ಮೋದಿಯವರು ಅನೇಕ ಪರಿಸರ ಪೂರಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಮುಕ್ತ ಪರಿಸರ ಪ್ರೇಮಿ ವಾಹನಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇಲ್ಲಿ ಸಾರ್ವಜನಿಕರ ಸಹಾಯದಿಂದ ಒತ್ತುವರಿ ಆಗುತ್ತಿದ್ದ ಭೂಮಿಯಲ್ಲಿ ಸುಂದರ ಪಾರ್ಕ್ ನಿರ್ಮಾಣಗೊಂಡಿದೆ. ಇದೊಂದು ಮಾದರಿ ಕಾರ್ಯವಾಗಿದ್ದು ಎಲ್ಲರಿಗೂ ಪ್ರೇರಣೆ ಆಗಲಿ ಎಂದರು.

ಕಾಂಗ್ರೆಸ್‌ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ

ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ಪರಿಸರ ರಕ್ಷಣೆ ಜೀವನದ ಒಂದು ಅವಿಭಾಜ್ಯ ಅಂಗ. ಪರಿಸರವೇ ನಮ್ಮ ಉಸಿರು. ಈ ದಿಕ್ಕಿನಲ್ಲಿ ಎಲ್ಲಾ ನಾಗರಿಕರು ಆಲೋಚನೆ ಮಾಡಬೇಕು. ಮಕ್ಕಳಲ್ಲೂ ಕೂಡ ಪರಿಸರ ಜಾಗೃತಿ ಮೂಡಿಸಬೇಕು ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಇ.ವಿಶ್ವಾಸ್‌ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್‌.ಅರುಣ್‌, ಜೆಸಿಐ ಶಿವಮೊಗ್ಗ ಅಧ್ಯಕ್ಷ ಶ್ರೀಧರ್‌ ಹೆಗ್ಡೆ, ಅನುಷ್‌ ಗೌಡ, ಜ್ಯೋತಿಪ್ರಕಾಶ್‌, ನಾಗರಾಜ್‌, ಡಾ.ಧನಂಜಯ ಸರ್ಜಿ, ತಾಯಿಮನೆ ಸುದರ್ಶನ್‌, ಹರ್ಷ ಕಾಮತ್‌, ಉದಯ ಕಡಂಬ, ವಕೀಲ ಸತ್ಯನಾರಾಯಣ ಎಂ. ಆರ್‌., ಕಾಟನ್‌ ಜಗದೀಶ್‌, ಸತೀಶ್‌, ಪರಿಸರ ನಾಗರಾಜ್‌ ಮತ್ತಿತರರು ಇದ್ದರು.

click me!