
ಗದಗ (ಜೂ.30): ಬಡವರಿಗೆ ಅಕ್ಕಿ ಕೊಡೋದಕ್ಕೆ ಹೋದ್ವಿ, ಅದಕ್ಕೂ ಕಲ್ಲು ಹಾಕಿದ್ರಿ. ಈಗ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಇದರಲ್ಲೂ ರಾಜಕೀಯ ಮಾಡಿ ಜನರ ಮನಸ್ಸು ಕೆಡಿಸುತ್ತಿದ್ದೀರಿ? ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರು ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ತುತ್ತಿನಲ್ಲೇ ಕಲ್ಲು ಹೇಳಿಕೆಗೆ ಗರಂ ಆದ ಸಚಿವರು, ಅಕ್ಕಿಗೆ ಮಾರ್ಕೆಟ್‌ನಲ್ಲಿ 60 ರುಪಾಯಿ ರೇಟ್ ಇದೆಯಾ?
ನೀವು ಮಾಜಿ ಮುಖ್ಯಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ನಿಮಗೆ ಅಕ್ಕಿ ದರ ಯಾರು ಹೇಳಿದರು? ಎಂದು ಪ್ರಶ್ನಿಸಿದರು. ಮಾರುಕಟ್ಟೆಯಲ್ಲಿ ಏನು ರೇಟ್ ಇದೆ, ಖಾಸಗಿ ಅವರಿಗೆ ಯಾವ ರೇಟ್ ಕೊಡುತ್ತೀರಿ? ಖಾಸಗಿಯವರಿಗೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಯಾವ ರೇಟ್ ಕೊಡುತ್ತಿದೆ? ಇದು ಮಾರುಕಟ್ಟೆ ರೇಟ್ ಅಲ್ವಾ? ಮಾರುಕಟ್ಟೆ ರೇಟ್ 60 ರುಪಾಯಿ ಇದ್ದರೆ ಖಾಸಗಿಯವರಿಗೆ ಯಾಕೆ 34 ರುಪಾಯಿಗೆ ಕೊಡುತ್ತೀರಿ? ಎಂದು ಕಿಡಿಕಾರಿದರು.
ನಾನು ಗ್ರಾನೈಟ್ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ
ನಮ್ಮ ಹಕ್ಕಿನ ಅಕ್ಕಿ: ಜನ ನಿಮ್ಮನ್ನು ಬಹಳ ಗಂಭೀರವಾಗಿ ಗಮನಿಸುತ್ತಿದ್ದಾರೆ. ನೀವು ಅಧಿಕಾರ ಮಾಡುವಲ್ಲಿ ವಿಫಲರಾಗಿದ್ದೀರಿ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿಲ್ಲ. ‘ರೈಟ್ ಟು ಫುಡ್ ಆ್ಯಕ್ಟ್’ ಅನ್ವಯ ನಮ್ಮ ಹಕ್ಕಿನ ಅಕ್ಕಿ ಅದು ಎಂದು ಸಚಿವ ಪಾಟೀಲ್ ಪ್ರತಿಪಾದಿಸಿದರು. ರಾಜ್ಯದ ಬಿಜೆಪಿಯವರು ಕರ್ನಾಟಕದ ಜನರಿಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಒಂದು ಮಾತು ಹೇಳಲಿಲ್ಲ. ದುಡ್ಡು ಕೊಡುತ್ತಾರೆ ಅಕ್ಕಿ ಕೊಡಿ ಎಂದು ಹೇಳುವ ದೊಡ್ಡತನ ನಿಮಗೆ ಬರಲಿಲ್ಲ. ಬಡ ಜನರಿಗೆ ಅಕ್ಕಿ ಕೊಡಿ ಎಂದು ಹೇಳುವ ಕರ್ತವ್ಯ ಪ್ರಜ್ಞೆ ಬಿಜೆಪಿಗಿಲ್ಲ. ಬಡವರ ಕಲ್ಯಾಣ ಕಾರ್ಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಟುವಾಗಿ ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ
ಭ್ರಷ್ಟಾಚಾರ ನಡೆದಿಲ್ಲ: ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತೇನೆ. ಭ್ರಷ್ಟಾಚಾರ ತಲೆ ಎತ್ತದಂತೆ ಮಾಡಲು ಮುಖಮಂತ್ರಿ ಸಿದ್ದರಾಮಯ್ಯನವರು ಪ್ರಯತ್ನ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ. ಕೇಂದ್ರದ ತಪ್ಪು ನಿರ್ಣಯದಿಂದ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ಜನರ ಬದುಕು ಆರ್ಥಿಕವಾಗಿ ದುಸ್ತರವಾಗುತ್ತಿದೆ. ಜನರ ಅಡಚಣೆ ನೀಗಿಸಲು ಗೃಹ ಲಕ್ಷ್ಮೀ ಯೋಜನೆ ತರುತ್ತಿದ್ದೇವೆ. ಜುಲೈ ತಿಂಗಳಿಂದ ಗೃಹ ಲಕ್ಷ್ಮೇ ಯೋಜನೆ ನೋಂದಣಿ ಆರಂಭವಾಗಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.