ಫಿರ್‌ ಏಕ್‌ ಬಾರ್‌ ಎನ್‌ಡಿಎ ಸರ್ಕಾರ್ : ಮೋದಿ ಉದ್ಘೋಷ

Sujatha NR   | Kannada Prabha
Published : Jul 19, 2025, 04:30 AM IST
PM Modi

ಸಾರಾಂಶ

ಈ ವರ್ಷಾಂತ್ಯಕ್ಕೆ ಚುಣಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಇದಲ್ಲದೆ, ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ ಎಂಬ ಹೊಸ ಉದ್ಘೋಷ ಸಾರಿದ್ದಾರೆ.

ಮೋತಿಹಾರಿ (ಬಿಹಾರ) : ಈ ವರ್ಷಾಂತ್ಯಕ್ಕೆ ಚುಣಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಇದಲ್ಲದೆ, ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ (ಹೊಸ ಬಿಹಾರವನ್ನು ನಿರ್ಮಿಸುತ್ತೇವೆ. ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಎಂಬ ಹೊಸ ಉದ್ಘೋಷ ಸಾರಿದ್ದಾರೆ.

ಮೋತಿಹಾರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ‘ಬಡವರಿಗೆ ಉದ್ಯೋಗ ನೀಡುವ ಮೊದಲು ಅವರ ಭೂಮಿ ಕಸಿದುಕೊಂಡ ಆರ್‌ಜೆಡಿಗೆ ಯುವಕರಿಗೆ ಉದ್ಯೋಗ, ಅಭಿವೃದ್ಧಿ ಯೋಚಿಸಲೂ ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬಡವರು, ಸಾಮಾಜಿಕವಾಗಿ ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ಇಬ್ಬರೂ ಕೂಡ ರಾಜ್ಯವನ್ನು ನಿರ್ಲಕ್ಷಿಸಿದ್ದರು. ಆರ್‌ಜೆಡಿ- ಕಾಂಗ್ರೆಸ್‌ ಅಭಿವೃದ್ಧಿ ಮಾಡಲಿಲ್ಲ. ಎಂದಿಗೂ ಬಡವರ ಸುಧಾರಣೆಗೆ ಚಿಂತಿಸಲಿಲ್ಲ. ಆರ್‌ಜೆಡಿ ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಯೋಜಿಸಲು ಸಾಧ್ಯವಿಲ್ಲ. 

ಏಕೆಂದರೆ ಅವರು ಬಡವರಿಗೆ ಉದ್ಯೋಗ ನೀಡುವ ಮೊದಲು ಅವರ ಭೂಮಿ ಕಸಿದುಕೊಂಡರು’ ಎಂದು ಲಾಲು ಮೇಲಿನ ಭೂಲಂಚ ಪ್ರಕರಣ ಉಲ್ಲೇಖಿಸಿ ಪರೋಕ್ಷವಾಗಿ ಆರೋಪಿಸಿದರು. ಇದೇ ವೇಳೆ ಬಿಹಾರ ಚುನಾವಣೆ ಗೆಲ್ಲಲು ಕಾರ್ಯಕರ್ತರಿಗೆ ಕರೆ ನೀಡಿದ ಅವರು ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ