
ಕೊಪ್ಪಳ: ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ರಾಜಕೀಯ ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದರೆ ಕೇಂದ್ರದಲ್ಲಿ ಇರುವ ಮೋದಿ ಸರ್ಕಾರ ಉರುಳುವುದು ಖಚಿತ ಎಂದು ಹೇಳಿದರು. ಈಗ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಪ್ರಧಾನಿ ಮೋದಿ ಅವರ ಸರ್ಕಾರ ಬಹುಮತದಲ್ಲಿ ಇಲ್ಲ. ನಿಜವಾಗಿಯೂ ಬಿಜೆಪಿ ಐಸಿಯುನಲ್ಲಿದೆ ಎಂದು ಟೀಕಿಸಿದರು.
ನಾವು 137 ಶಾಸಕರೊಂದಿಗೆ ಬಹುಮತದ ಸರ್ಕಾರವಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ಎಂಬ ಪ್ರಶ್ನೆಯೇ ಇಲ್ಲ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಈ ವಿಷಯದಲ್ಲಿ ಕಳಪೆ ವದಂತಿಗಳು ಹರಡುತ್ತಿದ್ದಾರೆ. ಆದರೆ ಯಾವುದೇ ಬದಲಾವಣೆ ಸಂಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ಈಗಾಗಲೇ 75 ವರ್ಷ ಪೂರೈಸಿದ್ದಾರೆ. ಆರ್‌ಎಸ್‌ಎಸ್ ನವರೇ ಹೇಳಿರುವಂತೆ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ರಾಜಕೀಯದಿಂದ ಹಿಂದೆ ಸರಿಯಬೇಕು. ಹಾಗಾಗಿ ಬದಲಾವಣೆ ಬಂದರೆ ತಪ್ಪೇನು?" ಎಂದು ಪ್ರಶ್ನೆ ಎಸೆದ ಲಾಡ್, "ಈ ಬಗ್ಗೆ ಬಿಜೆಪಿ ಸಹ ಚಿಂತಿಸಬೇಕು ಎಂದರು. ಗ್ರಾಮ ಪಂಚಾಯತಿನಿಂದ ಲೋಕಸಭೆವರೆಗೆ ಬಿಜೆಪಿ ಕಾರ್ಯಕರ್ತರು ಮೋದಿಯೇ ಎಲ್ಲವೂ ಎಂದು ಘೋಷಿಸುತ್ತಾರೆ. ಹಾಗಾದರೆ ನಾವು ಮೋದಿ ಬಗ್ಗೆ ಮಾತನಾಡಿದರೆ ತಪ್ಪೇನು? ಎಂದು ಲಾಡ್ ಪ್ರಶ್ನಿಸಿದರು.
ಕೆಲ ಶಾಸಕರು ಆಡಳಿತದ ಬಗ್ಗೆ ಟೀಕೆ ಮಾಡಿದ್ದಾರೆ. ಅದನ್ನು ಗಮನದಲ್ಲಿಟ್ಟು ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅಗತ್ಯ. ಆದರೆ ಅವರು ಸೂಪರ್ ಸಿಎಂ ಅಲ್ಲ. ಅವರು ನಮ್ಮ ಹೈಕಮಾಂಡ್ ನಿಯೋಜಿತ ನಾಯಕ ಎಂದು ತಿಳಿಸಿದರು.
ಲಾಡ್ ಈ ಮೂಲಕ ಲೇವಡಿ ಮಾಡುತ್ತಾ, ಪ್ರಧಾನಿ ಮೋದಿ ಹಲವಾರು ಬಾರಿ ವಿದೇಶಕ್ಕೆ ಭೇಟಿ ನೀಡುತ್ತಾರೆ. ಹಾಗಂತ ಅವರು ಆ ದೇಶದ ಪ್ರಧಾನಿಯಾಗ್ತಾರಾ? ಎಂಬ ಪ್ರಶ್ನೆ ಹಾಕಿದರು.
ಗೃಹಲಕ್ಷ್ಮೀ ಯೋಜನೆಯಡಿ ಕೆಲವು ತಿಂಗಳು ಹಣ ತಡವಾಗಿ ಬರಬಹುದು. ಆದರೆ ಎಲ್ಲರಿಗೂ ಧನಸಹಾಯ ಪೂರೈಕೆಯಾಗುತ್ತಿದೆ. ನಾವು ಈ ಯೋಜನೆಗಳನ್ನು ಕೇವಲ ಚುನಾವಣೆಗೆ ಮಾತ್ರ ಬಳಸುವುದಿಲ್ಲ. ಇದು ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಷ್ಠೆಯ ಯೋಜನೆ ಎಂದು ಲಾಡ್ ಹೇಳಿದರು.
ಬಿಜೆಪಿ ಚುನಾವಣೆ ಸಂದರ್ಭದ ಯೋಜನೆಗಳಲ್ಲಿ ನಿಪುಣ. ಅತ್ಯಾ*ಚಾರ ಆರೋಪ ಎದುರಿಸುತ್ತಿರುವ ಬಾಬಾ ನೀಮ್ ಅವರನ್ನು 21 ಬಾರಿ ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದುದೂ ಉದಾಹರಣೆ. ಯಾರನ್ನು ಹೇಗೆ ಬಳಸಬೇಕು ಎಂಬುದು ಅವರಿಗೆ ಚಾನಾಕ್ಷಿಯಾಗಿ ಗೊತ್ತು," ಎಂದು ಲಾಡ್ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.