'ಹಿಂದೂ ಸಂಘಟನೆಗಳು, ಪ್ರಧಾನಿ ನನ್ನನ್ನು ಸೋಲಿಸಲೆಂದೇ ಟಾರ್ಗೆಟ್ ಮಾಡಿದ್ರು'

By Suvarna NewsFirst Published Feb 25, 2021, 10:14 PM IST
Highlights

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿ ನೆನಪನ್ನು ಮೆಲುಕು ಹಾಕಿದ್ದಾರೆ.

ದಾವಣಗೆರೆ, (ಫೆ.25): ಕಳೆದ ಬಾರಿ ಚುನಾವಣೆಯಲ್ಲಿ ಆರ್​ಎಸ್​ಎಸ್, ಹಿಂದೂ ಸಂಘಟನೆಗಳು, ದೇಶದ ಪ್ರಧಾನಿ ನನ್ನನ್ನು ಸೋಲಿಸಬೇಕೆಂದು ಟಾರ್ಗೆಟ್ ಮಾಡಿದ್ದರು ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂದು (ಗುರುವಾರ) ದಾವಣಗೆರೆಯಲ್ಲಿ ಮಾತನಾಡಿದ ಖರ್ಗೆ, ಕಳೆದ ಬಾರಿ ಸ್ಪರ್ಧಿಸಿದ್ದ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿತ್ತು. ಆದ್ರೆ ನನ್ನನ್ನು ಸೋಲಿಸಿದರು. ಅದಕ್ಕೆ ಕ್ಷೇತ್ರದ ಜನರೂ ಸಹ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

ರಾಜ್ಯಸಭೆಗೆ ಕಾಂಗ್ರೆಸ್ಸಿಗ ಖರ್ಗೆ ವಿಪಕ್ಷ ನಾಯಕ!

ರಾಜ್ಯಸಭಾ ವಿರೋಧ ಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ನಮನಗಳು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಬಿಜೆಪಿಯ ಉಮೇಶ್ ಜಾಧವ್ ಅವರು ಸೋಲಿಸಿದ್ದರು. ಸೋಲಿನ ಕಹಿ ನೆನಪನ್ನು ಖರ್ಗೆ ನೆನಪಿಸಿಕೊಂಡರು.

click me!