ರೈತರ ಭೂಮಿ ರೈತರಿಂದ ಕೈತಪ್ಪಬಾರದು ಎನ್ನುವ ಕಾರಣಕ್ಕೆ ಫಲವತ್ತಾದ ಭೂಮಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಅದೇ ಹಿಂದೆ ರೇವಣ್ಣ ಅವರು ಯಾರೋ ಶ್ರೀಮಂತರಿಗಾಗಿ ಗಾಲ್ಪ್ ಮೈದಾನ ಮಾಡಲಿಕ್ಕಾಗಿ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಶಾಸಕ ಪ್ರೀತಂ ಜೆ.ಗೌಡ ಅವರು ರೇವಣ್ಣ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಹಾಸನ (ಸೆ.10) : ರೈತರ ಭೂಮಿ ರೈತರಿಂದ ಕೈತಪ್ಪಬಾರದು ಎನ್ನುವ ಕಾರಣಕ್ಕೆ ಫಲವತ್ತಾದ ಭೂಮಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಅದೇ ಹಿಂದೆ ರೇವಣ್ಣ ಅವರು ಯಾರೋ ಶ್ರೀಮಂತರಿಗಾಗಿ ಗಾಲ್ಪ್ ಮೈದಾನ ಮಾಡಲಿಕ್ಕಾಗಿ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಅಲ್ಲಿಗೆ ರೈತರ ಭೂಮಿ ಲಪಟಾಯಿಸಲು ಹುನ್ನಾರ ನಡೆಸಿದ್ದವರು ಯಾರು ಎನ್ನುವುದು ಅರ್ಥವಾಗುತ್ತದೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ರೇವಣ್ಣ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಲೂಟಿ ಬಿಟ್ಟು ತಾಪಂ, ಜಿಪಂ ಚುನಾವಣೆ ನಡೆಸಿ; ಶಾಸಕ ಪ್ರೀತಂ ಗೌಡಗೆ ರೇವಣ್ಣ ಟಾಂಗ್
undefined
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಜಮೀನಿನಲ್ಲಿ ಗಾಲ್ಪ್ ಮೈದಾನ ಮಾಡುತ್ತೇವೆ ಎಂಬುವುದಕ್ಕೆ ನನ್ನ ಆಕ್ಷೇಪ ಇದೆ. ರೈತರು(Farmers) ತಮ್ಮ ಜಮೀನಿನಲ್ಲಿ ಮನೆ ಕಟ್ಟುತ್ತಾರೋ, ಲೈಔಟ್(Layout) ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ಅದನ್ನೆಲ್ಲಾ ಕೇಳುವುದಕ್ಕೆ ನಾವ್ಯಾರು? ಅದು ರೈತರ ಹಕ್ಕು. ಅವರ ಮನೆ ಆಸ್ತಿ ಬಗ್ಗೆ ಮಾತನಾಡುವುದಕ್ಕೆ ನಾವ್ಯಾರು? ನಿಮಗೆ ಗಾಲ್ಪ್ ಕ್ಲಬ್(Golf Club) ಬೇಕಾ, ಇಲ್ಲವೇ ನಿಮ್ಮ ಜಮೀನು ವಾಪಸ್ ಬೇಕಾ ಎಂದು ರೈತರನ್ನು ರೇವಣ್ಣನವರೇ ಕೇಳಲಿ. ರೈತರು ಏನು ಹೇಳುತ್ತಾರೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಯಾವುದನ್ನು ಡಿ ನೋಟಿಫಿಕೇಷನ್(Denotification) ಮಾಡದೇ ರೈತರ ಜಮೀನು ವಾಪಸ್ ಕೊಟ್ಟಿದ್ದೇನೆ ಅಷ್ಟೆ. ಗಾಲ್ಪ್ ಕ್ಲಬ್‌ಗೆ ಯೋಜನೆ ಮಾಡಿ ಎಂದು ಯಾರು ಕೊಟ್ಟಿದ್ದು? ಯಾರು ಪ್ರಾಜೆಕ್ಟ್(Project) ಮಾಡಿದ್ದು. ಅವರ ಕಾಲದಲ್ಲೇ ತಾನೆ ಗಾಲ್ಪ್ ಮೈದಾನಕ್ಕೆ ಭೂಮಿ ನೀಡಿದ್ದು. ಇದನ್ನು ಅವರು ಬೂವನಹಳ್ಳಿಗೆæ ಹೋಗಿ ರೈತರ ಎದುರು ದೇವಸ್ಥಾನದ ಮುಂದೆ ನಿಂತು ನಾನು ನಿಮ್ಮ ಊರಿನ ಜಮೀನನ್ನು ಗಾಲ್ಪ್ ಗೆ ಕೊಟ್ಟಿಲ್ಲ ಎಂದು ಧೈರ್ಯ ಇದ್ರೆ ಹೇಳಲಿ. ರೈತರು ಕೇಳುವ ಪ್ರಶ್ನೆಗೆ ಇವರು ಉತ್ತರ ಕೊಡಲಿ ಎಂದು ಎಚ್.ಡಿ. ರೇವಣ್ಣನವರಿಗೆ ಸವಾಲು ಹಾಕಿದರು.
ಐಬಿಯಲ್ಲಿ ಕುಳಿತುಕೊಂಡು ಹೇಳಿಕೆ ಕೊಡುವುದಲ್ಲ. ರೈತರ ಜಮೀನಿನಲ್ಲಿ ಗಾಲ್ಪ್ ಕ್ಲಬ್ ಮಾಡಿ ತನ್ನ ಜಮೀಮಿನಿನಲ್ಲಿ ಬೇಲಿ ಹಾಕಿಸಿಕೊಂಡು ರಿಂಗ್ ರಸ್ತೆ ಬರುವಂತೆ ಮಾಡಿಕೊಂಡು ಕೋಟಿಗಟ್ಟಲೆ ಬೆಲೆಬಾಳುವಂತೆ ಮಾಡಿಕೊಳ್ಳುವುದೇ ಇವರ ರೈತಪರ ಕಾಳಜಿಯಾ...ಎಂದು ಪ್ರಶ್ನಿಸಿದರು.
ಹಾಸನ(Hassan)ದಲ್ಲಿ ಏಪೋರ್‍ಟ್ ಆಗಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(H.D.Devegowda)ರ ಮನವಿಗೆ ಸ್ಪಂದಿಸಿ ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದನ್ನು ಬಿ.ಎಸ್. ಯಡಿಯೂರಪ್ಪ(B.S.Yadiyurappa)ನವರ ಸರ್ಕಾರದಲ್ಲಿ ಒಪ್ಪಿಗೆ ಸಿಕ್ಕಿತು. ಇದನ್ನು ಮೂಲ ಯೋಜನೆಯಂತೆ ಮಾಡಬೇಕು. ಮೊದಲ ಹಂತದಲ್ಲಿ ಕೆಲಸ ಆರಂಭಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಏರ್‌ಬಸ್‌ಗೆ ಅವಕಾಶ ಮಾಡಿಕೊಡಬಹುದು. ಅದಕ್ಕೆ ಜಮೀನು ಸಿದ್ಧವಿದೆ. ಹೆಚ್ಚಿಗೆ ರೈತರ ಜಮೀನು ಪಡೆದು ವಿನಕಾರಣ ಸುಮ್ಮನೆ ಇಟ್ಟುಕೊಳ್ಳುವುದು ಬೇಡ. ಕಡಿಮೆ ಜಾಗದಲ್ಲಿ ಅತೀ ಉತ್ತಮವಾದ ಏಪೋರ್‍ರ್ಚ್ ಮಾಡುವುದಕ್ಕೆ ತಾಂತ್ರಿಕವಾಗಿ ಎಲ್ಲರ ಸಲಹೆ ಪಡೆದು ಅಂತಿಮ ಮಾಡಲಾಗಿದೆ ಎಂದರು.
ಇನ್ನು ಏನಾದರೂ ಸಲಹೆ ಕೊಟ್ಟರೆ ಅಳವಡಿಸಿಕೊಂಡು ಉತ್ತಮವಾದ ಏಪೋರ್‍ಟ್ ಮಾಡೋಣ, ಕರಾಬ್ ಭೂಮಿ ಆಗೆ ಇರುತ್ತೆ. ರೈತರ ಭೂಮಿ ರೈತರ ಭೂಮಿಯಾಗೆ ಇರುತ್ತದೆ. ಅಲ್ಲಿ ಯಾವ ಕೆಲಸ ಆಗಬೇಕು ಎಂಬುದನ್ನು ಸರಕಾರದ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಕರಾಬ್ ಭೂಮಿ ಇರುವುದು ಊರಿನ ಸ್ಮಶಾನಕ್ಕೆ, ಬೇರೆ ಬೇರೆ ಒಳ್ಳೆಯ ಚಟುವಟಿಕೆಗಳಿಗೆ ಬಳಕೆ ಆಗುತ್ತದೆ. ರೈತರ ಜಮೀನು ಇರುವುದು ರೈತರಿಗೆ ಹೋಗುತ್ತದೆ. ರೈತರ ಜಮೀನಿನಲ್ಲಿ ಗಾಲ್ಪ್ ಕ್ಲಬ್ ಮಾಡಬೇಕೆಂದರೆ ಅದು ನ್ಯಾಯವಾಗಿದೆಯಾ ಎಂಬುದನ್ನು ಯೋಚನೆ ಮಾಡಬೇಕಾಗಿದೆ ಎಂದು ರೇವಣ್ಣನವರಿಗೆ ಟಾಂಗ್ ನೀಡಿದರು.
ಸ್ವರೂಪ್ ಅವರನ್ನೇ ಕೇಳಿ: ಜೆಡಿಎಸ್ ಸಭೆಗೆ ಬಂದು ಸಭೆಯಲ್ಲಿ ಗದ್ದಲ ಮಾಡಿ ಬ್ಯಾನರ್ ಹರಿದವರು ರೌಡಿ ಶೀಟರ್‌ಗಳು. ಬಿಜೆಪಿ ಸರ್ಕಾರದಲ್ಲಿ ರೌಡಿ ಶೀಟರ್‌ಗಳನ್ನೆಲ್ಲಾ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಕಾರಣ ಎಂದು ರೇವಣ್ಣ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪ್ರೀತಂ ಇವರ ಸಭೆಗೆ ಯಾರ್ಯಾರು ಬಂದಿದ್ದರು ಎಂದು ಸ್ವರೂಪ್ ಅವರನ್ನು ಕೇಳಿದರೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಮೋದಿ ಮಾತು ಕೇಳಿದ್ದರೆ ಎಚ್‌ಡಿಕೆ 5 ವರ್ಷ ಸಿಎಂ ಆಗಿರ್ತಿದ್ರು: ರೇವಣ್ಣ
ಜೆಡಿಎಸ್(JDS) ಕಾರ್ಯಕರ್ತರನ್ನೇ ರೇವಣ್ಣ ಅವರು ಒಮ್ಮೆ ಕುಡುಕರೆಂದರು. ಮತ್ತೊಂದು ಬಾರಿ ರೌಡಿ ಶೀಟರ್(Rowdy Sheeter) ಎಂದಿದ್ದಾರೆ. ಬಂದು ಗಲಾಟೆ ಮಾಡಿರುವವರು ರೌಡಿ ಶೀಟರ್‌ಗಳೋ...ಅಥವಾ ಯಾರು ಎನ್ನುವುದನ್ನು ನಮ್ಮ ಸ್ವರೂಪಣ್ಣನ ಜೊತೆ ಯಾರಾರು ಹೋಗಿದ್ರು ಅವರ ಬಗ್ಗೆ ಸ್ವರೂಪಣ್ಣನವರಿಗೆ ಕೇಳಬೇಕು. ಪಾಂಚಜನ್ಯಕ್ಕೆ 800 ಜನ ಪೊಲೀಸರನ್ನು ಹಾಕಿದ್ದಾರೆ. ಜೆಡಿಎಸ್ ಸಭೆಗೆ ಪೊಲೀಸ್ ರಕ್ಷಣೆ ಕೊಡಲಿಲ್ಲ. ಪೊಲೀಸರು ಬೇಕಾಗಿತ್ತು ಎನ್ನುವ ಪರಿಸ್ಥಿತಿಗೆ ರೇವಣ್ಣನವರು ಬಂದಿದ್ದಾರೆ ಎಂದ್ರೆ ಅವರ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಯೋಚಿಸಿ ಎಂದರು.ಇದೇ ವೇಳೆ ನಗರಸಭೆ ಅಧ್ಯಕ್ಷ ಮೋಹನ್, ಹುಡಾ ನಿರ್ದೇಶಕ ಯಶವಂತ್ ಇತರರು ಇದ್ದರು.